ಹಿಂದೂ ಪದ್ಧತಿಯಂತೆ ನಡೆಯಿತು ಮುಸಲ್ಮಾನನ ಅಂತ್ಯಕ್ರಿಯೆ | ಮುಂದೇನಾಯ್ತು?
ಇಬ್ಬರು ಅನಿವಾಸಿ ಭಾರತೀಯರು ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ್ದು, ಈ ಇಬ್ಬರು ಅನಿವಾಸಿ ಭಾರತೀಯರ ಮೃತದೇಹಗಳು ಬದಲಾಗಿದೆ. ಕೇರಳದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರನ್ನು ತಪ್ಪಾಗಿ ಅಂತ್ಯಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ದುಃಖತಪ್ತ ಕುಟುಂಬವು ತಮ್ಮ ಪ್ರೀತಿಪಾತ್ರರನ್ನು ನೋಡಲು ಕೊನೆಯ ಬಾರಿಯೂ ಸಾಧ್ಯವಾಗಲಿಲ್ಲ, ಏಕೆಂದರೆ ಆ ಮೃತದೇಹ ತಪ್ಪಾಗಿ ಕೇರಳದ ಕುಟುಂಬವೊಂದಕ್ಕೆ ನೀಡಲಾಗಿತ್ತು.
ಮೃತರಲ್ಲಿ ಒಬ್ಬ ವ್ಯಕ್ತಿ ಮುಸ್ಲಿಂ ಆಗಿದ್ದರೆ, ಮತ್ತೊಬ್ಬ ವ್ಯಕ್ತಿ ಹಿಂದೂ. ಲೋಪವನ್ನು ಸರಿಪಡಿಸುವ ಮೊದಲೇ ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.
ಮೃತರನ್ನು ಕೇರಳದ ಅಲಪ್ಪುಳ ಜಿಲ್ಲೆಯ 46 ವರ್ಷದ ಶಾಜಿ ರಾಜನ್ ಮತ್ತು ಉತ್ತರ ಪ್ರದೇಶದ ವಾರಣಾಸಿ ಮೂಲದ ಜಾವೇದ್ ಅಹ್ಮದ್ ಇದ್ರಿಶಿ (45) ಎಂದು ಗುರುತಿಸಲಾಗಿದೆ. ರಾಜನ್ ಎರಡೂವರೆ ತಿಂಗಳ ಹಿಂದೆ ಅಲ್ ಅಕ್ಸಾ ಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದ್ರಿಶಿ ಸೆಪ್ಟೆಂಬರ್ 25 ರಂದು ದಮಾಮ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ರಾಜನ್ ಅವರ ಮೃತದೇಹವನ್ನು ದಮ್ಮಾಮ್ನಿಂದ ಕೊಲಂಬೊ ಮೂಲಕ ಕೇರಳದ ತಿರುವನಂತಪುರಕ್ಕೆ ಏರ್ ಲಂಕಾ ಮೂಲಕ ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಮತ್ತು ಜಾವೇದ್ ಅವರ ದೇಹವನ್ನು ಇಂಡಿಗೋ ಕ್ಯಾರಿಯರ್ ಮೂಲಕ ದಮಾಮ್ನಿಂದ ನವದೆಹಲಿ ಮೂಲಕ ವಾರಣಾಸಿಗೆ ವಾಪಾಸ್ ಕಳುಹಿಸಲಾಯಿತು.