ಬರೊಬ್ಬರಿ 315 ಕಿಲೋ ಮೀ. ಮೈಲೇಜಿನ ಕಾರು ಮಾರುಕಟ್ಟೆಗೆ ಲಗ್ಗೆ | ಟಾಟಾ ಬ್ರಾಂಡಿನ ಈ ಕಾರಿಗೆ ಬುಕ್ಕಿಂಗ್ ಪ್ರಾರಂಭ

ಎಲ್ಲರಿಗೂ ತಿಳಿದಿರುವಂತೆ ಉತ್ಕೃಷ್ಟ ಸೇಫ್ಟಿ ಫೀಚರ್ ಗಳನ್ನು ಹೊತ್ತು ತರುತ್ತಿರುವ ಕಾರು ತಯಾರಕರಲ್ಲಿ ಟಾಟಾ ಮುಂಚೂಣಿಯಲ್ಲಿದೆ. ಟಾಟಾ ಟಿಯಾಗೋ, ಟಾಟಾ ಟೈಗೋರ್, ಟಾಟಾ ನೆಕ್ಸಾನ್ ಬೆಲೆಗಳಲ್ಲಿ ಮತ್ತು ಅದು ನೀಡುವ ಮೌಲ್ಯಗಳಲ್ಲಿ ಸಂಚಲನ ಸೃಷ್ಟಿಸಿದ ಕಾರುಗಳು.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಇವುಗಳಲ್ಲಿ ಟಾಟಾ ಟಿಯಾಗೋ EV ( Tata cars) ವರ್ಷನ್ ರೆಡಿ ಆಗುತ್ತಿದೆ. ಇದು ಕಳೆದ ತಿಂಗಳು ಬಿಡುಗಡೆಯಾಗಿದ್ದು ಅದರ ಎಲೆಕ್ಟ್ರಿಕ್‌ ಕಾರಿನ ಬುಕಿಂಗ್‌ ಸೋಮವಾರದಿಂದ ಆರಂಭವಾಗಿದೆ. ಕೇವಲ 21,000 ರೂ. ಮುಂಗಡ ಪಾವತಿ ಮಾಡಿ ಬುಕಿಂಗ್‌ ಮಾಡಿಕೊಳ್ಳಬಹುದಾಗಿದೆ.

ಕಾರಿನ ಬೆಲೆ 8.49 ಲಕ್ಷ ರೂ.(ಎಕ್ಸ್‌ ಶೋ ರೂಂ)ನಿಂದ ಆರಂಭ ಆಗಿರಲಿದ್ದು, ಭರಪೂರ ಸೇಫ್ಟಿ ಫೀಚರ್ ಗಳ ಕಾರು ಇದು. ಜತೆಗೆ, ಈ ಕಾರು 315 ಕಿ.ಮೀ.ವರೆಗೆ ಮೈಲೇಜ್‌ ಕೊಡಬಲ್ಲದು. ಈ ಕಾರು 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್‌ ಆಗಲಿದ್ದು, 315 ಕಿಲೋಮೀಟರ್ ಗಳ ದೂರಕ್ಕೆ ಮತ್ತೆ ಚಾರ್ಜಿಂಗ್ ಇಲ್ಲದೆ ಓಡಬಲ್ಲುದು.

ಡಿಸೆಂಬರ್‌ ತಿಂಗಳಿನಿಂದ ಕಾರಿನ ಟೆಸ್ಟ್‌ ಡ್ರೈವ್‌ ಸೌಲಭ್ಯ ಆರಂಭವಾಗಲಿದ್ದು, 2023ರ ಜನವರಿಯಿಂದ ಕಾರು ಡೆಲಿವರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

error: Content is protected !!
Scroll to Top
%d bloggers like this: