ಮಾರಕಾಸ್ತ್ರ ಹಿಡಿದು ರೈಲಿನಲ್ಲಿ ಹುಚ್ಚು ಸಾಹಸ ಮಾಡಿದ ಯುವಕರು | ಅನಂತರ ಆದದ್ದೇ ಬೇರೆ…

ಜೀವನದ ಪ್ರತಿ ಕ್ಷಣವನ್ನೂ ಆಸ್ವಾದಿಸುತ್ತಾ, ಹುಚ್ಚು ಕನಸುಗಳ ಬೆನ್ನೇರಿ ಓಡುವ ಪಯಣವೇ ಕಾಲೇಜು ಜೀವನ. ಓದಿನ ಜೊತೆಗೆ ಮನರಂಜನೆ ಜೊತೆಗೂಡಿ ಹುಡುಗಾಟ ಪ್ರವೃತ್ತಿ ಹೊಂದಿರುವ ವಯೋಸಹಜ ಜೀವನ ನಡೆಸುವ ವಿದ್ಯಾರ್ಥಿಗಳು ಜೀವನದ ಗಂಭೀರತೆಯನ್ನು ಅರಿತುಕೊಳ್ಳಲು ಸಮಯ ತೆಗೆದುಕೊಳ್ಳುವುದು ಸಹಜ.

ಈ ಜೀವನದಲ್ಲಿ ಹುಚ್ಚು ಸಾಹಸಗಳಿಗೆ ಅಡಿಯಿಟ್ಟು, ಕುದಿಯುತ್ತಿರುವ ಬಿಸಿ ರಕ್ತದ ಮಹಿಮೆಯಿಂದ ಎಲ್ಲವನ್ನೂ ಮಾಡಬಲ್ಲೆ ಎಂದು ಸರ್ಕಸ್ ಮಾಡಿ, ಇಲ್ಲದ ಅವಾಂತರ ಸೃಷ್ಟಿಸಿಕೊಳ್ಳುವ ಅನೇಕ ಪ್ರಸಂಗಗಳು ವರದಿಯಾಗುತ್ತಲೇ ಇರುತ್ತವೆ.

ಇದೇ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕಿರುವ ಘಟನೆ ಚೆನ್ನೈನಲ್ಲಿ ನಡೆದಿದ್ದು, ಕಾಲೇಜಿನ ಮೂವರು ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿ ಕತ್ತಿ ಹಿಡಿದುಕೊಂಡು ಸಾಹಸ ಪ್ರದರ್ಶಿಸಿದ್ದಾರೆ. ಮೂವರು ಯುವಕರು ರೈಲಿನಿಂದ ನೇತಾಡುತ್ತಿರುವಾಗ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಾರಕ ಅಸ್ತ್ರ ವಾದ ಕತ್ತಿಯಂತಹ ವಸ್ತುವನ್ನು ಎಳೆಯುತ್ತಿದ್ದಾರೆ.

ಗುಮ್ಮಿಡಿಪೂಂಡಿಯ ಅನ್ಬರಸು, ರವಿಚಂದ್ರನ್ ಮತ್ತು ಪೊನ್ನೇರಿಯ ಅರುಲ್ ಎನ್ನುವವರಾಗಿದ್ದು, ಈ ಮೂವರೂ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಈ ವೀಡಿಯೊವನ್ನು ಚೆನ್ನೈನ ಡಿವಿಜನಲ್ ರೈಲ್ವೇ ಮ್ಯಾನೇಜರ್ ಶೇರ್ ಮಾಡಿದ್ದಾರೆ.

ರೈಲಿನ ಫುಟ್‌ಬೋರ್ಡ್‌ನ ಅಂಚಿನಲ್ಲಿ ಪ್ರಯಾಣಿಸುವುದು ಕೂಡ ರೈಲ್ವೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧವಾಗಿದೆ. ಹುಡುಗರನ್ನು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದ್ದು, ಅನುಚಿತ ವರ್ತನೆ ಹಿನ್ನೆಲೆ ಬಂಧಿಸಲಾಗಿದೆ ಎಂದು ಚೆನ್ನೈ, ದಕ್ಷಿಣ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವೀಟ್ ಮಾಡಿದ್ದಾರೆ.

ರೈಲಿನ ಪುಟ್ ಬೋರ್ಡ್ ನ ಅಂಚಿನಲ್ಲಿ ನಿಂತು ಸರ್ಕಸ್ ಮಾಡಿರುವ ವಿದ್ಯಾರ್ಥಿಗಳ ನಡೆಗೆ ಆಕ್ರೋಶ ವ್ಯಕ್ತವಾಗಿದೆ .

ಭಾರತದಲ್ಲಿ ಸಾಮಾನ್ಯವಾಗಿ ಇದು ಅಪರಾಧವೆಂದು ಪರಿಗಣಿಸಲಾಗುವುದು. ಇನ್ನೂ ರೈಲಿನ ಫುಟ್‌ಬೋರ್ಡ್‌ನ ಅಂಚಿನಲ್ಲಿ ಪ್ರಯಾಣಿಸುವುದು ಕೂಡ ರೈಲ್ವೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ.

Leave A Reply

Your email address will not be published.