EPFO : ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಸುಲಭವಾಗಿ ಹಣ ವರ್ಗಾಯಿಸಿ | ಹೇಗೆ? ಇಲ್ಲಿದೆ ವಿವರ

ಕೆಲವೊಂದು ಸಂದರ್ಭಗಳಲ್ಲಿ ಉದ್ಯೋಗವನ್ನು ತೊರೆದಾಗ ಅಥವಾ ಬದಲಾಯಿಸಿದಾಗ, ಜನರು ಹೆಚ್ಚಾಗಿ ಪಿಎಫ್‌ ಹಣದ ಬಗ್ಗೆ ತಿಳಿದುಕೊಳ್ಳಲು ಉತ್ಸಾಹಕರಾಗಿರುತ್ತಾರೆ. ಅನೇಕ ಜನರು ತಮ್ಮ ಪಿಎಫ್ ಬ್ಯಾಲೆನ್ಸ್ ವರ್ಗಾವಣೆಯನ್ನು ಮಾಡಲು ಸಾಮಾನ್ಯವಾಗಿ ವಿಫಲರಾಗುತ್ತಾರೆ. ಆದರೆ, ಇಪಿಎಫ್‌ಒ ( EPFO) ಅಗತ್ಯ ಮಾಹಿತಿಯನ್ನು ನೀಡಿದ್ದು, ಅದರ ಸಹಾಯದಿಂದ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು.

ಕಳೆದ ಕೆಲವು ವರ್ಷಗಳಿಂದ, ಇಪಿಎಫ್ ಡಿಜಿಟಲ್ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದೆ. ಹಾಗೆನೇ EPFOನ ಹೆಚ್ಚಿನ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಯಾವುದೇ ಸಂದರ್ಭದಲ್ಲಿ ಯಾರಾದರೂ ಕೆಲಸ ಬಿಟ್ಟರೆ ಅಥವಾ ಬದಲಾಯಿಸಿದರೆ, ಅವರು ಪಿಎಫ್ ಬಗ್ಗೆ ಹೆಚ್ಚು ಹೆಚ್ಚು ಯೋಚನೆ ಮಾಡುತ್ತಾರೆ. ಹಾಗಾಗಿ ಈ ಮಾಹಿತಿ ಅವರಿಗಾಗಿ.

ಕೆಲವೊಮ್ಮೆ ಮಾಹಿತಿಯ ಕೊರತೆಯಿಂದಾಗಿ ಜನರು ತಮ್ಮ ಪಿಎಫ್ ಬ್ಯಾಲೆನ್ಸ್‌ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅನೇಕ ಜನರು ತಮ್ಮ ಹಣವನ್ನು ಹಿಂಪಡೆಯಲು ಮತ್ತು ವರ್ಗಾಯಿಸಲು ತೊಂದರೆ ಪಡುವುದನ್ನು ಕಾಣಬಹುದು. ಈ ಕೆಲಸ ಸಾಧ್ಯವಾಗದೇ ಇದ್ದಾಗ, ಅನೇಕ ಬಾರಿ ಇಪಿಎಫ್ ( EPF) ಕಚೇರಿಗೆ ಭೇಟಿ ನೀಡುತ್ತಾರೆ. ಈಗ ಜನರಿಗೆ ಈ ರೀತಿಯ ತೊಂದರೆ ಆಗುವ ಯಾವುದೇ ಪ್ರಮೇಯ ಉಂಟಾಗುವುದಿಲ್ಲ. ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇಪಿಎಫ್‌ಒ ಮಾಹಿತಿ ನೀಡಿದೆ. ಇದರ ಸಹಾಯದಿಂದ ಈಗ ಹಳೆಯ ಕಂಪನಿಯ ಪಿಎಫ್ ಬ್ಯಾಲೆನ್ಸ್ ಹಣವನ್ನು ಮನೆಯಲ್ಲಿ ಕುಳಿತು ಸುಲಭವಾಗಿ ವರ್ಗಾಯಿಸಬಹುದು.

ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ನೀವು ಕೆಲಸ ಮಾಡುತ್ತಿದ್ದರೆ, ಅಂತವರು ಹಳೆಯ ಉದ್ಯೋಗದಾತರ ಹಣವನ್ನು ಹೊಸ ಉದ್ಯೋಗದಾತರ ಖಾತೆಗೆ ವರ್ಗಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ, EPFO ​​ಪೋರ್ಟಲ್‌ಗೆ ಲಾಗಿನ್ ಆದ ನಂತರ, VIEW ಆಯ್ಕೆಯಲ್ಲಿ ಸೇವಾ ಇತಿಹಾಸಕ್ಕೆ ಹೋಗಬೇಕು. ನಂತರ ನೀವು ಎಷ್ಟು ಕಂಪನಿಗಳೊಂದಿಗೆ ಕೆಲಸ ಮಾಡಿದ್ದೀರಿ ಎಂಬುದನ್ನು ಇಲ್ಲಿ ಪರಿಶೀಲಿಸ ಬೇಕು. ಕಂಪನಿಯ ಮಾಹಿತಿಯು ಕೆಳಭಾಗದಲ್ಲಿರುತ್ತದೆ. ನಿಮ್ಮ ನಿರ್ಗಮನ ದಿನಾಂಕವನ್ನು ಅಂದರೆ DOEನ್ನು ನವೀಕರಿಸಿದಾಗ ಮಾತ್ರ ಹಳೆಯ PF ಬ್ಯಾಲೆನ್ಸ್‌ನ್ನು ವರ್ಗಾಯಿಸಬಹುದು.

ಹಳೆಯ EPF ಬ್ಯಾಲೆನ್ಸ್‌ನ್ನು ಹೊಸ ಖಾತೆಗೆ ವರ್ಗಾಯಿಸಲು ನೀವು ಸಕ್ರಿಯ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಹೊಂದಿರಬೇಕು. ಇದರೊಂದಿಗೆ, ನಿಮ್ಮ UAN ಸಂಖ್ಯೆಯಲ್ಲಿರುವ ಎಲ್ಲಾ ಮಾಹಿತಿಯನ್ನು ನವೀಕರಿಸಬೇಕು. ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಯಂತೆ ನೀವು UAN ನಲ್ಲಿ ನವೀಕರಿಸಬೇಕು.

ಹೊಸ ಕಂಪನಿಗೆ ಹಳೆಯ ಇಪಿಎಫ್ ( EPF) ಹಣವನ್ನು ಹೀಗೆ ವರ್ಗಾಯಿಸಿ

  1. ಮೊದಲನೆಯದಾಗಿ, ನಿಮ್ಮ ಯುಎಎನ್‌ (UAN ) ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ EPFO ​​ಸದಸ್ಯ ಪೋರ್ಟಲ್‌ಗೆ ಲಾಗಿನ್ ಮಾಡಬೇಕು.
  2. ನಂತರ ಆನ್‌ಲೈನ್ ಸೇವೆಗಳಿಗೆ ಹೋಗಿ ಮತ್ತು ‘ಒಬ್ಬ ಸದಸ್ಯ ಒಂದು ಖಾತೆ (ವರ್ಗಾವಣೆ ವಿನಂತಿ)’ ಕ್ಲಿಕ್ ಮಾಡಿ.
  3. ಪ್ರಸ್ತುತ ಉದ್ಯೋಗಕ್ಕಾಗಿ ‘ವೈಯಕ್ತಿಕ ಮಾಹಿತಿ ಮತ್ತು ‘PF ಖಾತೆ’ ಪರಿಶೀಲಿಸಿ.
  4. ವಿವರಗಳನ್ನು ಪಡೆಯಿರಿ ಕ್ಲಿಕ್ ಮಾಡಿ, ಹಿಂದಿನ ಉದ್ಯೋಗದ PF ಖಾತೆಯ ವಿವರಗಳು ಕಾಣಿಸುತ್ತದೆ.
  5. ನಂತರ ಫಾರ್ಮ್ ದೃಢೀಕರಿಸಲು ‘ಹಿಂದಿನ ಉದ್ಯೋಗದಾತ’ ಅಥವಾ ‘ಪ್ರಸ್ತುತ ಉದ್ಯೋಗದಾತ’ ಆಯ್ಕೆಮಾಡಬೇಕು.
  6. ನಿಮ್ಮ UAN ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಲು OTP ಬರುತ್ತದೆ ಅದನ್ನು ಕ್ಲಿಕ್ ಮಾಡಿ. OTP ನಮೂದಿಸಿದ ನಂತರ ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಬೇಕು. ಅನಂತರ ನಿಮ್ಮ ಹಣ ವರ್ಗಾವಣೆ ಸಲ್ಲಿಕೆ ಮನವಿಯ ಖಚಿತ ಸಂದೇಶ ನಿಮ್ಮ ಮೊಬೈಲ್‌ ಸಂಖ್ಯೆಗೆ ಬರುತ್ತದೆ. ಇದನ್ನು ಖಚಿತಪಡಿಸಿಕೊಳ್ಳಿ.

Leave A Reply

Your email address will not be published.