ಚೀನಾದಲ್ಲಿ ಓಮಿಕ್ರಾನ್ ಉಪತಳಿ ಪತ್ತೆ | 24 ಗಂಟೆಗಳಲ್ಲಿ 1900 ಕ್ಕೂ ಹೆಚ್ಚು ಕೇಸ್ ಪತ್ತೆ
ಇಡೀ ಜಗತ್ತು ಕೊರೋನದಿಂದ ತತ್ತರಿಸಿ ಹೋಗಿದ್ದು ಈಗಷ್ಟೇ ಚೇತರಿಕೆಗೊಳ್ಳುತ್ತಿದೆ. ಹಾಗಿರುವಾಗ ಚೀನಾದಲ್ಲಿ ಕೋವಿಡ್-19ನ ಓಮಿಕ್ರಾನ್(Omicron) ರೂಪಾಂತರದ ಮತ್ತೊಂದು ಹೊಸ ಉಪತಳಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ವರದಿಯ ಪ್ರಕಾರ ಓಮಿಕ್ರಾನ್‌ನ ಹೊಸ ಉಪತಳಿಗಳಾದ BF.7 ಮತ್ತು BA.5.1.7 ಸಾಂಕ್ರಾಮಿಕವಾಗಿದ್ದು, ಚೀನಾದಲ್ಲಿ ವೇಗವಾಗಿ ಹರಡುತ್ತಿದೆ. 24 ಗಂಟೆಗಳ ಅವಧಿಯಲ್ಲಿ ಸುಮಾರು 1900 ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ ಎಂದು ಮಾಹಿತಿ ತಿಳಿಸಿದೆ.
ಅಕ್ಟೋಬರ್ 4 ರಿಂದ ಸ್ಥಳೀಯವಾಗಿ ಹರಡುವ COVID-19 ಪ್ರಕರಣಗಳು ಭಿನ್ನವಾದ BF.7 ನಿಂದ ಪ್ರೇರೆಪಿತವಾಗಿದೆ ಎಂದು ಉತ್ತರ ಚೀನಾದ ಶಾಂಡೋಂಗ್ ಪ್ರಾಂತ್ಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊದಲು ಈ ಸಾಂಕ್ರಾಮಿಕ ವೈರಸ್ ಅನ್ನು ವಾಯುವ್ಯ ಚೀನಾದಲ್ಲಿ ಕಂಡುಹಿಡಿಯಲಾಯಿತು. BA.5.1.7 ಸಬ್‌ವೇರಿಯಂಟ್ ಮೊದಲ ಬಾರಿಗೆ ಚೀನಾದ ಮುಖ್ಯ ಭೂಭಾಗದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರದ ಉಪ ನಿರ್ದೇಶಕ ಲಿ ಶುಜಿಯಾನ್ ತಿಳಿಸಿದ್ದಾರೆ.
ಈಗಾಗಲೇ ಚೀನಾದಲ್ಲಿ ಹಲವಾರು ಆರೋಗ್ಯ ಮುಂಜಾಗ್ರತೆಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯಿಂದ ಸೂಚನೆ ನೀಡಿರುತ್ತಾರೆ. ಹೆಚ್ಚಿನ ರೋಗ ತಜ್ಞರನ್ನು ಕರೆಸಿ ಈ ಬಗೆಗಿನ ಅಧ್ಯಯನ ಸಹ ನಡೆಸಲಾಗುತ್ತಿದೆ ಎಂದು ಮಾಹಿತಿ ದೊರಕಿದೆ.