5G ಯ ಹೊಸ ತಂತ್ರಜ್ಞಾನ ನೀಡಲಿದೆ ಈ ಎಲ್ಲಾ ಉದ್ಯೋಗವಕಾಶ | ಯಾವುದೆಲ್ಲ?

ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಅಕ್ಟೋಬರ್ 1 ರಂದು ದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಿದ್ದು, ಟೆಲಿಕಾಮ್ ಕಂಪೆನಿ ಏರ್‌ಟೆಲ್ 5G ಸೇವೆ ಪ್ರಾರಂಭಿಸಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ತಮ್ಮ 5G ಸೇವೆಗಳನ್ನು ನೀಡಲು ಸಜ್ಜಾಗುತ್ತಿರುವ ಬಗ್ಗೆ ನಿಮಗೆ ತಿಳಿದಿರಬಹುದು.

ಈ ಮೂಲಕ ಭಾರತದಲ್ಲಿ ಇಂಟರ್‌ ನೆಟ್‌ ಮಹಾಕ್ರಾಂತಿಗೆ ಸಜ್ಜಾದ ನಡುವೆಯೇ ಉದ್ಯೋಗದ ನಿರೀಕ್ಷೆಯಲ್ಲಿ ಅನೇಕ ಯುವಜನತೆಗೆ ಸುವರ್ಣ ಅವಕಾಶ ಲಭ್ಯವಾಗಲಿದೆ. ಟೆಲಿಕಾಮ್ ಕಂಪನಿಗಳು 5G ಸೇವೆ ವಿಸ್ತರಿಸುತ್ತಿದ್ದಂತೆ ಭಾರತದಲ್ಲಿ ಹಲವಾರು ಉದ್ಯೋಗವಕಾಶಗಳು ತರೆದುಕೊಳ್ಳಲಿದ್ದು, ಈ ಮೂಲಕ ಅನೇಕ ಜನರಿಗೆ ಉದ್ಯೋಗ ಪಡೆಯಲು ಅವಕಾಶ ದೊರೆಯಲಿದೆ.

ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾಯೋಗಿಕವಾಗಿ 5G ಸೇವೆಗಳನ್ನು ಆರಂಭಿಸಿದ್ದು, 2022 ರ ವಿಜಯದಶಮಿ ಹಬ್ಬದ ಶುಭ ದಿನದಂದೇ ಜಿಯೋ ತನ್ನ ‘ವೆಲ್ಕಮ್ ಆಫರ್’ ಘೋಷಣೆ ಮಾಡಿದೆ . ಈ ನಡುವೆ ಕೆಲಸದ ಅನ್ವೇಷಣೆಯಲ್ಲಿ ತೊಡಗಿದವರಿಗೆ ಗುಡ್ ನ್ಯೂಸ್ ಇದ್ದು, 5ಜಿ ಸೇವೆಯಿಂದ ಭಾರತದಲ್ಲಿ ವಿಫುಲ ಉದ್ಯೋಗವಕಾಶ ಸೃಷ್ಟಿಯಾಗಲಿದೆ.

ಸಾಕಷ್ಟು ಪೂರ್ವಸಿದ್ಧತೆಗಳನ್ನು ನಡೆಸಿದ ಬಳಿಕವೇ ಭಾರತ 5 ಜಿ ಯುಗಕ್ಕೆ ಅಡಿಯಿಟ್ಟಿದ್ದು, 4 ಜಿ ಗೆ ಹೋಲಿಸಿದರೆ 5 ಜಿ ಯಲ್ಲಿ ಇಂಟರ್‌ ನೆಟ್‌ ವೇಗ ಹತ್ತು ಪಟ್ಟು ಹೆಚ್ಚಾಗಲಿದ್ದು, ಇದರಿಂದ ಬಳಕೆದಾರರು ಹಲವು ತಂತ್ರಜ್ಞಾನಗಳ ಅನುಕೂಲ ಪಡೆಯುವ ಜೊತೆಗೆ ಉದ್ಯೋಗಾವಕಾಶಗಳ ಮಹಾಪೂರವೇ ಹರಿದುಬರಲಿದೆ.

ಪ್ರಮುಖವಾಗಿ ಬಾಹ್ಯಾಕಾಶ ಆಧಾರಿತ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳು ಲಭ್ಯವಾಗಲಿದ್ದು, 5G ಟೆಕ್ ಕೌಶಲ್ಯಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಟೆಲಿಕಾಂ ಕ್ಷೇತ್ರವು ಮಣೆ ಹಾಕಲು ಮುಂದಾಗಿದೆ.

ಇದರ ಜೊತೆಗೆ ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರ, ತಂತ್ರಜ್ಞಾನ ವಲಯ, ನೂತನ ಸ್ಟಾರ್ಟ್‌ಅಪ್‌ಗಳು ಮತ್ತು ಆಟೋಮೋಟಿವ್ ವಲಯದಲ್ಲಿ ಪರಿಣಿತ ಪ್ರತಿಭಾವಂತರಿಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ.

ವಿಜ್ಞಾನ ವಿಭಾಗದ ರೇಡಿಯೋ ಫ್ರೀಕ್ವೆನ್ಸಿ (RF), ಸಿಸ್ಟಮ್ಸ್ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್‌ಗಳು, AI/ML ಡೆವಲಪರ್‌ಗಳು, 5G ORAN (ಓಪನ್ ರೇಡಿಯೋ ಆಕ್ಸೆಸ್ ನೆಟ್‌ವರ್ಕ್) ಆರ್ಕಿಟೆಕ್ಚರ್ ತಜ್ಞರು ಮತ್ತು ಬಳಕೆದಾರರ ಅನುಭವ ವಿನ್ಯಾಸ ಮತ್ತು ತಂತ್ರಜ್ಞಾನ ಪರೀಕ್ಷಾ ವಿಭಾಗಗಳ ತಂತ್ರಜ್ಞರಿಗೆ ವಿಫುಲ ಅವಕಾಶವಿದೆ.

5ಜಿ ಸೇವೆ ಪರಿಚಯಿಸುತ್ತಿದ್ದಂತೆ ಉದ್ಯೋಗ ನಿರ್ವಹಿಸಲು ಕೆಲಸ ಗಾರರಿಗೆ ಹೆಚ್ಚಿನ ಬೇಡಿಕೆ ಕೂಡ ಇದೆ. ಜಾಗತಿಕವಾಗಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಈಗಾಗಲೇ ಕೆಲಸ ಮಾಡಿರುವ ಭಾರತೀಯ ಮೂಲದ ತಂತ್ರಜ್ಞರಿಗೆ ಭಾರತದ ಟೆಲಿಕಾಂ ಉದ್ದಿಮೆಯಲ್ಲಿ ಹೆಚ್ಚಿನ ಆದ್ಯತೆ ನೀಡಿ ಅವಕಾಶ ಕಲ್ಪಿಸಲು ಅಣಿಯಾಗಿದೆ.

ಅಂದಾಜಿನ ಪ್ರಕಾರ, 2021-2022 ರ ಸಾಲಿನಲ್ಲಿ 5G ಮತ್ತು ಸಂಬಂಧಿತ ತಂತ್ರಜ್ಞಾನಗಳಿಗಾಗಿ ಭಾರತದಲ್ಲಿ ಸುಮಾರು 36,000 ಕ್ಕೂ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಿದ್ದು, 5ಜಿ ಸೇವೆ ವಿಸ್ತರಣೆಯಾಗುತ್ತ ಸಾಗಿದಂತೆ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ.

ಟೆಲಿಕಾಮ್ ಕಂಪನಿಗಳು 4G ಸೇವೆ ಯಿಂದ 5G ಸೇವೆಗೆ ಅಣಿಯಾಗುತ್ತಿದ್ದಂತೆ ಸೇವೆಯ ಸೌಲಭ್ಯದ ಜೊತೆಗೆ ಬಂಪರ್ ಕೊಡುಗೆಯಾಗಿ ಜನರಿಗೆ ಉದ್ಯೋಗ ಪಡೆಯಲು ಸುವರ್ಣ ಅವಕಾಶ ಕಲ್ಪಿಸಲು ಸಿದ್ಧತೆ ನಡೆಯುತ್ತಿದ್ದು, ಇದರಿಂದ ಅನೇಕ ಮಂದಿ ನಿರುದ್ಯೋಗದಲ್ಲಿರುವ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆಯುವುದರಲ್ಲಿ ಅನುಮಾನವಿಲ್ಲ

Leave A Reply

Your email address will not be published.