Viral News | ಈ ಮೆಡಿಕಲ್‌ನ ಹೆಸರು ನೋಡಿದರೆ ಬೆಚ್ಚಿ ಬೀಳ್ತಾರೆ ಜನ !

ಭಾಷಾ ಪ್ರಯೋಗದಲ್ಲಿನ ವ್ಯತ್ಯಾಸ ಹಾಗೂ ಲೋಪದಿಂದ ಆಗುವ ಪ್ರಮಾದ, ಅಕ್ಷರಗಳ ಸ್ಥಾನಪಲ್ಲಟದಿಂದ ಪದಗಳು ಹೇಗೆ ಅರ್ಥ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ. ಇಲ್ಲಿನ ಪದಗಳ ಬಳಕೆ ಹೊಸ ಮತ್ತು ಅನರ್ಥಕಾರಿ ಅರ್ಥ ರೂಪಿಸಿ ಹಾಸ್ಯಾಸ್ಪದವಾಗಿ ಮತ್ತು ಹಾಸ್ಯಕ್ಕೆ ಹೊಸ ವಸ್ತುವಾಗಿ ಪರಿಣಮಿಸಿದೆ.

ಬೆಂಗಳೂರಿನ ಮೆಡಿಕಲ್ ಸಂಸ್ಥೆಯೊಂದಕ್ಕೆ ಹೆಸರು ಬರೆಯುವಾಗ ಆದ ಅಕ್ಷರಗಳ ಸ್ಥಾನಪಲ್ಲಟ ಅಭಾಸಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿ ವೈರಲ್ ಆಗುತ್ತಿದೆ.

ಮೆಡಿಕಲ್ ಸಂಸ್ಥೆಗೆ ಸಾಯಿ ಸಿರಿ ಎಂಬ ಹೆಸರಿದ್ದು, ಅದನ್ನು ಬೋರ್ಡ್ ನಲ್ಲಿ ಹಾಕುವಾಗ ಹೆಸರಿನ ಮಧ್ಯೆ ಸ್ಪೇಸ್ ನೀಡದೆ ಮುದ್ರಿಸಿರುವುದು ಹಾಸ್ಯಕ್ಕೆ ಎಡೆಮಾಡಿದೆ.

ಸಾಯಿ ಸಿರಿಯ ಬದಲಿಗೆ ಸಾಯಿಸಿರಿ (ಕೊಂದು ಬಿಡಿ) ಎಂಬಂತೆ ಬೋರ್ಡ್‌ನಲ್ಲಿ ಮುದ್ರಿಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ” ಸಾಯಿಸಿರಿಯ ಮದ್ಯೆ ಸ್ಪೇಸ್ ಕೊಟ್ಟರೆ ನಿಮ್ಮಪ್ಪನ ಮನೆ ಗಂಟೇನು ಹೋಗುತ್ತೆ. ಈಗ್ ನೋಡು ಯಾರಾದರೂ ಇತ್ತ ನಿಮ್ಮ ಅಂಗಡಿಯತ್ತ ತಲೆ ಹಾಕಿದ್ದಾರಾ ? ಎಂದು ಕಿಚಾಯಿಸಿ ಕನ್ನಡ ಪಂಡಿತರು ಛಾಟಿ ಬೀಸಿದ್ದಾರೆ!

ಇದೇ ರೀತಿಯ ಪದಗಳೆಂದರೆ ಹೂ ಸುವಾಸನೆ, ಇದರಲ್ಲೂ ಸ್ಪೇಸ್ ಕೊಡುವಾಗ ಸ್ಥಾನ ಪಲ್ಲಟವಾದರೆ ಆ ಪದ ಅರ್ಥ ಕಳೆದು ಕೊಳ್ಳುತ್ತದೆ. ಸುವಾಸನೆ ಬದಲು ಹೂಸುವಾಸನೆ ಬೀರಲು ಪ್ರಾರಂಭವಾಗುತ್ತದೆ. ಹುಡುಕಿದರೆ ಇನ್ನಷ್ಟು ಇಂತಹಾ ಪದಪುಂಜಗಳು ನಿಮಗೆ ದೊರೆತೀತು. ಭಾಷಾ ಪ್ರಯೋಗ ಸರಿಯಾಗದಿದ್ದರೆ ಇದೇ ರೀತಿಯ ಎಡವಟ್ಟು ಆಗೋದು ಗ್ಯಾರಂಟಿ. ಅದಕ್ಕಾಗಿ ‘ ಹೊಸ ಕನ್ನಡ ‘ ಕಲಿಯೋಣ.

Leave A Reply