WhatsApp: ವಾಟ್ಸಪ್ ನಲ್ಲಿ ನಿಮ್ಮನ್ನು ಯಾರಾದರೂ ಹೈಡ್ ಮಾಡಿ ಸ್ಟೇಟಸ್ ಹಾಕಿದ್ದರೂ ಈ ವಿಧಾನದ ಮೂಲಕ ನೋಡಿ

ದಿನನಿತ್ಯದ ದಿನಚರಿಯ ಅವಿಭಾಜ್ಯ ಭಾಗವಾಗಿ, ಎಲ್ಲರ ಕೈಯಲ್ಲೂ ಹರಿದಾಡುವ ಮೊಬೈಲ್ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಮೆಟಾ (Meta) ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ , ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿದ್ದು, ಈ ವರ್ಷ ಹಲವು ಫೀಚರ್​ಗಳನ್ನು ಪರಿಚಯಿಸಿ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಅಷ್ಟೆ ಅಲ್ಲದೆ, ತನ್ನದೇ ಆದ ಛಾಪು ಮೂಡಿಸಿ, ಜನರ ಮನ ಸೆಳೆಯುವ ಪ್ರಯತ್ನವನ್ನೂ ಸದಾ ನಡೆಸುತ್ತಲೇ ಇದೆ.


Ad Widget

Ad Widget

Ad Widget

Ad Widget
Ad Widget

Ad Widget

ದಿನದಿಂದ ದಿನಕ್ಕೆ ಹೊಸ ಅಪ್ಡೇಟ್ ಮಾಡುತ್ತಾ ಹೊಸ ವೈಶಿಷ್ಟ್ಯದ ಮೂಲಕ ಜನರ ಬಳಕೆಗೆ ಅವಕಾಶ ಕಲ್ಪಿಸಿರುವ ವಾಟ್ಸಪ್ , ಮಲ್ಟಿ ಡಿವೈಸ್‌ ಸಪೋರ್ಟ್‌ ಅವಕಾಶ ನೀಡಿರುವುದರಿಂದ ಏಕಕಾಲಕ್ಕೆ ಎರಡು ಮೂರು ಡಿವೈಸ್ ಗಳಲ್ಲಿ ಖಾತೆ ಬಳಕೆ ಮಾಡಬಹುದಾಗಿದೆ. ವಾಟ್ಸಪ್ ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದೆ.


Ad Widget

ಇದು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗಿಂತ ಹೆಚ್ಚು ಸುರಕ್ಷಿತವಾಗಿದ್ದು ತ್ವರಿತ ಸಂದೇಶವನ್ನು ಕಳುಹಿಸಲು ನೆರವಾಗುತ್ತದೆ.ನಮ್ಮ ಮೊಬೈಲ್ನಲ್ಲಿ ಇರುವ ಕಾಂಟ್ಯಾಕ್ಟ್ ನವರ ಸ್ಟೇಟಸ್ ಅನ್ನು ಸುಲಭವಾಗಿ ನೋಡುವ ಜೊತೆಗೆ ಡೌನ್ಲೋಡ್ ಮಾಡಿಕೊಳ್ಳಲು ಇರುವ ಆ್ಯಪ್ ಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಆದರೆ , ನಮ್ಮನ್ನು ಹೈಡ್ ಮಾಡಿ ಸ್ಟೇಟಸ್ ಹಾಕಿದ್ದರೆ ಹೇಗೆ ತಾನೇ ತಿಳಿಯಲು ಸಾಧ್ಯ ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಕೆಲವು ಟಿಪ್ಸ್

ವಾಟ್ಸ್​ಆ್ಯಪ್ ಅನ್ನು ಹಿಂಬಾಲಿಸಿಕೊಂಡು ಅನೇಕ ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳು ಕೂಡ ಹುಟ್ಟುಕೊಂಡಿದ್ದು, ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಅನುಕೂಲಕರ ಫೀಚರ್​​ಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ (WhatsApp Status) ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳುವ ವಿಶೇಷ ಆಯ್ಕೆ ಕೂಡ ಇದೆ.

ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಮುನ್ನ ಸೆಟ್ಟಿಂಗ್​ಗೆ ಹೋಗಿ ಅಲ್ಲಿ ನಾವು ಅಪ್ಲೋಡ್ ಮಾಡುವ ಸ್ಟೇಟಸ್ ಯಾರಿಗೆಲ್ಲ ಕಾಣುವಂತೆ ಹಾಕಬೇಕು, ಇಲ್ಲವೇ ಕೆಲವರಿಗೆ ಮಾತ್ರ ಕಾಣುವಂತೆ ಮಾಡಬೇಕಾ ಎಂಬ ಆಯ್ಕೆಯು ಸೆಟ್ಟಿಂಗ್ಸ್ ನಲ್ಲಿದ್ದು, ಇದರಿಂದ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ಯಾರನ್ನು ಬೇಕಾದರು ಹೈಡ್ ಮಾಡಿ ಸ್ಟೇಟಸ್ ಹಾಕುವ ಆಯ್ಕೆ ಜನರಿಗೆ ಇದೆ. ಕೆಲವೊಮ್ಮೆ ನಿಮ್ಮ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗೂ ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು.

ಹೀಗಿದ್ದಾಗ ಇದನ್ನು ನೋಡಲು ನಿಮಗೆ ವಾಟ್ಸ್​ಆ್ಯಪ್​ನಲ್ಲಿ ಸಾಧ್ಯವಿಲ್ಲ. ಆದರೆ, ಸಣ್ಣ ಟ್ರಿಕ್ಸ್ ಬಳಕೆ ಮಾಡಿದರೆ ನಿಮ್ಮನ್ನು ಹೈಡ್ ಮಾಡಿ ನಿಮ್ಮ ಸ್ನೇಹಿತರು ಸ್ಟೇಟಸ್ ಹಾಕಿದರೆ ಅದನ್ನು ನೋಡಬಹುದಾಗಿದೆ. ಆದರೆ, ಈ ಆಯ್ಕೆ ನೇರವಾಗಿ ವಾಟ್ಸ್​ಆ್ಯಪ್​ನಲ್ಲಿ ದೊರೆಯುವುದಿಲ್ಲ. ಇದರ ಬದಲಿಗೆ ಮೊದಲು ನೀವು ಥರ್ಡ್ ಪಾರ್ಟಿ ಆ್ಯಪ್​ವೊಂದನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.

ಅದೇ ಜಿಬಿ ವಾಟ್ಸ್ಆ್ಯಪ್ (GBWhatsApp). ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಿದ ಬಳಿಕ ಆ್ಯಪ್ ಐಕಾಲ್ ಮೇಲೆ ಕ್ಲಿಕ್ ಮಾಡಬೇಕು. ಓಪನ್ ಆದ ಕೂಡಲೆ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಒತ್ತಬೇಕುಈ ಸಂದರ್ಭ ಕೆಳಗಡೆ ಹೈಡ್ ವೀವ್ ಸ್ಟೇಟಸ್ (Hide View Status) ಎಂಬ ಆಯ್ಕೆ ಕಾಣುತ್ತದೆ. ಇದನ್ನು ಒತ್ತಿದರೆ ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದವರು ಯಾರು?, ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮನ್ನ ಬ್ಲಾಕ್ ಮಾಡಿರುವವರ ಸ್ಟೇಟಸ್ ಅನ್ನು ಕೂಡ ಇದರಲ್ಲಿ ನೋಡಲು ಸಾಧ್ಯವಿದೆ.

ವಾಟ್ಸ್​ಆ್ಯಪ್​ನಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್​ನಲ್ಲಿರುವ ಸ್ನೇಹಿತರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ವೀಕ್ಷಿಸಬಹುದಾಗಿದ್ದು, ಇದಕ್ಕಾಗಿ ನಿಮ್ಮ ಫೋನಿನಲ್ಲಿನ ವಾಟ್ಸ್ಆ್ಯಪ್ ಅಪ್ಲಿಕೇಶನ್​ಗೆ ಹೋಗಿ ಸೆಟ್ಟಿಂಗ್ ಮೆನು ತೆರೆಯಬೇಕು.

ಬಳಿಕ ಪ್ರೈವಸಿ ಸೆಟ್ಟಿಂಗ್ ಕೆಳಗೆ ಸ್ಕ್ರಾಲ್ ಮಾಡಬೇಕು. ಅಲ್ಲಿ ಕೆಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್ ಕೆಳಭಾಗದಲ್ಲಿರುವ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಬೇಕು.

ಅದನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಕಾಂಟ್ಯಾಕ್ಟ್​ನಲ್ಲಿರುವ ಬಳಕೆದಾರರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ನೀವು ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಸ್ನೇಹಿತರು ತಿಳಿಯಲು ಸಾದ್ಯವಿಲ್ಲ.

ಜಿಬಿ ವಾಟ್ಸ್ಆ್ಯಪ್ ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು ಬಳಕೆ ಮಾಡುವ ಮುನ್ನ ಎಚ್ಚರವಹಿಸುವ ಅವಶ್ಯಕತೆ ಇದೆ. ಈ ಆ್ಯಪ್ ನಿಮ್ಮ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುವ ಸಂಭವ ಹೆಚ್ಚಿದ್ದು, ಅಲ್ಲದೆ ಈ ಆಯ್ಕೆಯ ಜಿಬಿ ವಾಟ್ಸ್ಆ್ಯಪ್​ನ ನೂತನ ಆವೃತ್ತಿಯಲ್ಲಿ ಕೂಡ ಕೊಂಚ ಬದಲಾವಣೆಯನ್ನು ಹೊಂದಿದೆ. ಮೇಲೆ ಹೇಳಿದ ಟಿಪ್ಸ್ ಬಳಸಿ ನಿಮ್ಮನ್ನು ಯಾರಾದರೂ ಹೈಡ್ ಮಾಡಿ ಸ್ಟೇಟಸ್ ಹಾಕಿದ್ದರೆ, ತಿಳಿಯಬಹುದಾಗಿದೆ.

error: Content is protected !!
Scroll to Top
%d bloggers like this: