ಉಕ್ರೇನ್ ಮೇಲೆ ಕ್ಷಿಪಣಿ ಉಡಾಯಿಸಿದ ರಷ್ಯಾ !!!

ಇಂದು ಬೆಳಗ್ಗೆ ಉಕ್ರೇನ್‌ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದ್ದು, ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ ಮಾಸ್ಕೋ, ಉಕ್ರೇನ್ ಅನ್ನು ದೂಷಿಸಿದ ಒಂದು ದಿನದ ನಂತರ ಸೋಮವಾರ ಮುಂಜಾನೆ ಉಕ್ರೇನ್ (Ukraine) ರಾಜಧಾನಿ ಕೈವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದೆ. ಅಷ್ಟೆ ಅಲ್ಲದೆ, ಉಕ್ರೇನ್‌ನ ಹಲವು ನಗರಗಳ ಮೇಲೆ ಇಂದು ದಾಳಿ ನಡೆದ ವರದಿಯಾಗಿದೆ.

ಉಕ್ರೇನ್ ಕ್ಷಿಪಣಿ ದಾಳಿಗೆ ಒಳಗಾಗಿದ್ದು, ಇಂದು ಬೆಳಿಗ್ಗೆ 8:15 ರ ಸುಮಾರಿಗೆ ಉಕ್ರೇನ್ ಮೇಲೆ ರಷ್ಯಾ 75 ಕ್ಷಿಪಣಿಗಳನ್ನು ಉಡಾಯಿಸಿತು ಎಂದು ಕೈವ್ ಹೇಳಿದ್ದಾರೆ. ನಮ್ಮ ದೇಶದ ಹಲವು ನಗರಗಳ ಮೇಲೆ ದಾಳಿಯ ಬಗ್ಗೆ ವರದಿಯಾಗಿದ್ದು, ಜನರು ಸುರಕ್ಷಿತವಾಗಿರುವ ಜೊತೆಗೆ ಜನರು ದಾಳಿಯಿಂದ ರಕ್ಷಣೆ ಪಡೆಯಲು ಆಶ್ರಯತಾಣದಲ್ಲೇ ಇರಲು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕೈರಿಲೋ ಟಿಮೊಶೆಂಕೊ ಸಾಮಾಜಿಕ ಮಾಧ್ಯಮದಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಕೈವ್ ನಲ್ಲಿ ಇಂದು ಬೆಳಿಗ್ಗೆ ಕನಿಷ್ಠ ಐದು ಸ್ಫೋಟ ಸಂಭವಿಸಿದ್ದು, ರಾಜಧಾನಿಯ ಮಧ್ಯಭಾಗದಲ್ಲಿರುವ ಶೆವ್ಚೆಂಕಿವ್ಸ್ಕಿ ಜಿಲ್ಲೆಯಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ಕೈವ್ ಮೇಲೆ ರಷ್ಯಾದ ಕೊನೆಯ ದಾಳಿ ಜೂನ್ 26 ರಂದು ನಡೆದಿದ್ದು, ಇದಕ್ಕೆ ಪ್ರತುತ್ತರವಾಗಿ ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲಿನ ಸ್ಫೋಟಕ್ಕೆ ಉಕ್ರೇನ್‌ಗೆ ಮಾಸ್ಕೋ ದೂಷಿಸಿದ ಒಂದು ದಿನದ ನಂತರ ಸ್ಫೋಟಗಳನ್ನು ನಡೆಸಿದ್ದು , 8 ಮಂದಿ ಈ ದುರಂತದಲ್ಲಿ ಮಡಿದಿದ್ದಾರೆ. ಸ್ಫೋಟದ ಸ್ಥಳಗಳಲ್ಲಿ ದಟ್ಟ ಹೊಗೆ ಆವರಿಸಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Leave A Reply

Your email address will not be published.