Google Chrome : ಗೂಗಲ್ ಕ್ರೋಮ್ ಬಗ್ಗೆ ಶಾಕಿಂಗ್ ವಿಚಾರ ಬಹಿರಂಗ

Google Chrome: ಗೂಗಲ್ ಕ್ರೋಮ್ ಒಂದು ನಮ್ಮ ಆಹಾರ ಇದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು. ಗೂಗಲ್ ಇಲ್ಲದೆ ಟೆಕ್ನಾಲಜಿ ಕೆಲಸಗಳು ನಡೆಯಲ್ಲ. ಆದರೆ ಇದೀಗ ಅಟ್ಲಾಸ್ VPN ಮಾಡಿರುವ ವರದಿಯ ಪ್ರಕಾರ, 2022 ರಲ್ಲಿ 303 ದುರ್ಬಲತೆಗಳು ಮತ್ತು ಒಟ್ಟಾರೆಯಾಗಿ 3,159 ದುರ್ಬಲತೆಗಳು ಕಂಡಿಬಂದಿರುವ ಗೂಗಲ್ ಕ್ರೋಮ್ ಅತ್ಯಂತ ದುರ್ಬಲ ಬ್ರೌಸರ್ ಆಗಿದೆ ಎಂದು ದೋಷಾರೋಪ ಮಾಡಿದೆ.

ಮೊಜಿಲ್ಲಾದ ಫೈರ್‌ಫಾಕ್ಸ್ ಬ್ರೌಸರ್ 117 ದೋಷಗಳನ್ನು ಹೊಂದಿರುವ ಎರಡನೇ ಸ್ಥಾನದಲ್ಲಿದೆ. ಅಕ್ಟೋಬರ್‌ನಲ್ಲಿ ಐದು ದಿನಗಳ ಒಳಗೆ ಹೊಸ ದೋಷಗಳು ಕಂಡುಬಂದ ಏಕೈಕ ಬ್ರೌಸರ್ ಗೂಗಲ್ ಕ್ರೋಮ್ ಆಗಿದೆ. ಈ ವರ್ಷದಲ್ಲಿಯೇ ಕ್ರೋಮ್ ಆರು ಬಾರಿ ಝೀರೋ ಡೇ ಕೊರತೆ ಅನುಭವಿಸಿದೆ. ಆಗಸ್ಟ್ 30 ರಂದು ಗೂಗಲ್ ಕ್ರೋಮ್​ನ 105ನೇ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಅಪ್ಡೇಟ್ ಪರಚಯಿಸಿತ್ತು. ಇದೀಗ ಬಳಕೆದಾರರು ಗೂಗಲ್ ಕ್ರೋಮ್ ಆವೃತ್ತಿ 106.0.5249.61 ಗೆ ಅಪ್ಡೇಟ್ ಮಾಡುವ ಮೂಲಕ ತೊಂದರೆಗಳನ್ನು ಸರಿಪಡಿಸಬಹುದು ಎಂದು ವರದಿ ಮೂಲಕ ತಿಳಿಸಿದೆ.

ಅಟ್ಲಾಸ್ VPN ಮಾಡಿರುವ ಸಂಕ್ಷಿಪ್ತ ವರದಿಯ ಪ್ರಕಾರ,2022 ರಲ್ಲಿ 303 ದುರ್ಬಲತೆಗಳು ಮತ್ತು ಒಟ್ಟಾರೆಯಾಗಿ 3,159 ದುರ್ಬಲತೆಗಳು ಕಂಡಿಬಂದಿರುವ ಗೂಗಲ್ ಕ್ರೋಮ್ ಅತ್ಯಂತ ದುರ್ಬಲ ಬ್ರೌಸರ್ ಆಗಿದೆ ಎಂದು ಹೇಳಿದೆ. ಜನವರಿ 1, 2022 ರಿಂದ ಅಕ್ಟೋಬರ್ 5, 2022 ರವರೆಗೆ VulDB ದುರ್ಬಲತೆಯ ಡೇಟಾಬೇಸ್‌ನಿಂದ ಈ ಅಂಕಿಅಂಶಗಳನ್ನು ಆಧರಿಸಲಾಗಿದೆ ಎಂದು ಸ್ಪೋಟಕ ಮಾಹಿತಿ ನೀಡಿದೆ.

ಮೈಕ್ರೋಸಾಫ್ಟ್ ಎಡ್ಜ್ ಅಕ್ಟೋಬರ್ 5 ರ ಹೊತ್ತಿಗೆ 103 ದುರ್ಬಲತೆಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಇದು 2021 ರ ಸಂಪೂರ್ಣ ವರ್ಷಕ್ಕಿಂತ 61% ಹೆಚ್ಚು ಎಂದು ಹೇಳಬಹುದು. ಒಟ್ಟಾರೆಯಾಗಿ, ಮೈಕ್ರೋಸಾಫ್ಟ್ ಎಡ್ಜ್ ಬಿಡುಗಡೆಯಾದಾಗಿನಿಂದ ಈವರೆಗೆ ಒಟ್ಟು 806 ದುರ್ಬಲತೆಗಳನ್ನು ಹೊಂದಿದೆ.

ಸಫಾರಿ ಬ್ರೌಸರ್ ಇತರರಿಗೆ ಹೋಲಿಸಿದರೆ ಕಡಿಮೆ ಮಟ್ಟದ ದುರ್ಬಲತೆಗಳನ್ನು ಹೊಂದಿದೆ. 2022 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ 26 ದುರ್ಬಲತೆ ಕಂಡುಬಂದಿದೆ. ಮೇ 2022 ರ ಹೊತ್ತಿಗೆ, ಸಫಾರಿ ಒಂದು ಬಿಲಿಯನ್ ಬಳಕೆದಾರರಿಗೆ ಸಾಕ್ಷಿಯಾಗಿದೆ. ಆ್ಯಪಲ್ ಕಂಪನಿ ತನ್ನ ಬ್ರೌಸರ್ ಬಗ್ಗೆ ಹೆಚ್ಚು ಸುರಕ್ಷಿತವಾಗಿದೆ. ಅಚ್ಚರಿ ಎಂದರೆ, Opera ಬ್ರೌಸರ್ 2022 ರಲ್ಲಿ ಇಲ್ಲಿಯವರೆಗೆ ಯಾವುದೇ ದೋಷಗಳು ಕಂಡುಬಂದಿಲ್ಲ.

ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವ ಕ್ರಮ : ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ. ನಂತರ ಬಲ ತುದಿ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಆಯ್ಕೆ (Customize and control Google Chrome) ಕ್ಲಿಕ್ ಮಾಡಿ ಆಮೇಲೆ ಸೆಟ್ಟಿಂಗ್ಸ್ ತೆರೆದು ಅಬೌಟ್ ಕ್ರೋಮ್ ಓಪನ್ ಮಾಡಿ, ಅಲ್ಲಿ ಇರುವ ಗೂಗಲ್ ಕ್ರೋಮ್ ಅಪ್‌ಡೇಟ್ ನೌ ಎಂದಿರುವುದನ್ನು ಕ್ಲಿಕ್ ಮಾಡಿ. ಅಪ್‌ಡೇಟ್ ಆದ ಬಳಿಕ, ರೀಲಾಂಚ್ ಮಾಡಿ. ಈ ರೀತಿಯಾಗಿ ಸುಲಭವಾಗಿ ಅಪಡೇಟ್ ಮಾಡಿಕೊಳ್ಳಬಹುದು.

Leave A Reply

Your email address will not be published.