Kantara Movie : ನಟ ನಿರ್ದೇಶಕ ರಿಷಬ್ ಶೆಟ್ರ ಸಿನಿಮಾದಲ್ಲಿ ಶೆಟ್ಟಿಗಳಿಗೆ ಮಾತ್ರ ಅವಕಾಶವೇ?

ಎಲ್ಲೆಡೆ ಕಾಂತಾರ ಕಾಂತಾರ…ಹೌದು ಕಾಂತಾರ ಹವಾ ಜೋರಾಗಿದೆ. ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ (Kantara Movie) ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಹಿಟ್, ಅದರ ಜೊತೆಗೆ ಉತ್ತಮ ವಿಮರ್ಶೆಗಳನ್ನು (Review) ಪಡೆಯುವುದರಲ್ಲಿ ಕಾಂತಾರ ಮುಂದಿದೆ. ರಿಷಬ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಂಡಿದ್ದು ಸ್ಯಾಂಡಲ್​ವುಡ್ ನಟಿ ಸಪ್ತಮಿ ಗೌಡ (Sapthami Gowda) ಹೀರೋಯಿನ್ ಆಗಿ ನಟಿಸಿದ್ದಾರೆ. ಇದರಲ್ಲಿ ಸ್ಥಳೀಯ ಬಹಳಷ್ಟು ಕಲಾವಿದರು ನಟಿಸಿದ್ದು ವಿಶೇಷ. ಶಿವನ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ (Manasi Sudhir) ಕಾಣಿಸಿಕೊಂಡಿದ್ದು ಹೊಸಬರಿಗೂ ಅವಕಾಶ ಕೊಡಲಾಗಿದೆ. ಪ್ರಮೋದ್ ಶೆಟ್ಟಿ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಸಿನಿಮಾಗಳಲ್ಲಿ ಶೆಟ್ಟಿಯವರಿಗೆ ರಿಷಬ್ ಹೆಚ್ಚು ಅವಕಾಶ ಕೊಡುತ್ತಾರೆ ಎನ್ನುವ ಮಾತಿಗೆ ನಟ ಪ್ರತಿಕ್ರಿಯಿಸಿದ್ದಾರೆ.”

ಜಾತಿ ಹಿಡಿದು ಯಾಕೆ ಒದ್ದಾಡ್ತಾರೆ ಗೊತ್ತಾಗ್ತಿಲ್ಲ. ಅದರಲ್ಲಿ ನನಗೆ ನಂಬಿಕೆ ಇಲ್ಲ. ಸುಮಾರು ಸಲ ಕೇಳಿ ಕೇಳಿ ಕಿವಿ ದಪ್ಪ ಆಗುತ್ತೆ. ಹಾಗಾಗಿ ಈಗ ತಲೆ ಕೆಡಿಸಿಕೊಳ್ಳುವುದಿಲ್ಲ. ಒಟ್ಟಿಗೆ ನಾಟಕ ಮಾಡಿಕೊಂಡು ಬಂದವರು ನಾವು. ಟೀ ಕುಡಿಯೋಕೆ ಹಣ ಇರ್ತಿರಲಿಲ್ಲ. ರಸ್ತೆ ಬದಿಯಲ್ಲಿ, ಬೇಕರಿ ಕೆಳಗೆ ಕುಳಿತಿರುತ್ತಿದ್ದೆವು. ನಾವು ಒಟ್ಟಿಗೆ ನಾಟಕ ಮಾಡಿ ಒಟ್ಟಿಗೆ ಸಿನಿಮಾ ಮಾಡಿದೆವು. ಏನು ತಪ್ಪಿದೆ ಇದರಲ್ಲಿ? ಟೀಂ ನಾವು. ಕರೆದುಕೊಂಡು ಬರುತ್ತೇವೆ. ಏನು ತಪ್ಪಿದೆ ಇದರಲ್ಲಿ ” ಎಂದಿದ್ದಾರೆ ರಿಷಬ್ ಶೆಟ್ಟಿ.

ಕಾಂತಾರ ನಟಿ ಸಪ್ತಮಿ ಅವರು “ನಾನು ಸಪ್ತಮಿ ಗೌಡ ಎಂದು ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿಲ್ಲ. ಈ ಸಿನಿಮಾ ನಾನು ಮಾಡಬಹುದು ಎಂದುಕೊಂಡು ಅವಕಾಶ ಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ. ಕಾಂತಾರ ಸಿನಿಮಾ ಡಬ್ಬಿಂಗ್ ಪ್ಲಾನ್ ನಡೀತಾ ಇದೆ. ತೆಲುಗು, ತಮಿಳು, ಹಿಂದಿ ಭಾಷೆಯಲ್ಲೂ ಕಾಂತಾರ ಸಿನಿಮಾ ರಿಲೀಸ್ ಆಗುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Leave A Reply

Your email address will not be published.