ಲಿಂಬೆ ಹಣ್ಣಿನ ಉಪ್ಪಿನಕಾಯಿ ತಿನ್ನಿ, ಆರೋಗ್ಯಕ್ಕೆ ಒಳ್ಳೆಯದು

ಉಪ್ಪಿನಕಾಯಿ ಯಾರಿಗೆ ಇಷ್ಟ ಇಲ್ಲ ಅಂತ ಕೇಳಿದ್ರೆ ಅಲ್ಲೊಂದು ಇಲ್ಲೊಂದು ಜನ ಸಿಗಬಹುದು. ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ಮಾತಿದೆ. ಮೊಸರನ್ನದ ಜೊತೆ ಉಪ್ಪಿನಕಾಯಿ ಸೇರಿಸಿ ಆಹಾ! ತಿಂದರೆ ರುಚಿಯೇ ಬೇರೆ. ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಉಪ್ಪಿನಕಾಯಿ ಇದ್ವು. ಅದು ಸಾಂಪ್ರದಾಯಿಕವಾಗಿ ಮಾಡಲ್ಪಡುತ್ತಿತ್ತು. ಆದರೆ ಈಗ ಉಪ್ಪಿನಕಾಯಿ ಎಂದರೆ ಅದಕ್ಕೆ ನೂರು ರೀತಿಯ ಉದಾಹರಣೆಗಳೇ ಸಿಗುತ್ತದೆ ಮಾರುಕಟ್ಟೆಯಲ್ಲಿ.

ಅದರಲ್ಲಿ ಲಿಂಬೆಹಣ್ಣಿನ ಉಪ್ಪಿನಕಾಯಿಯನ್ನು ತಿಂದರೆ ತುಂಬಾ ಒಳ್ಳೆಯದು ಅಂತೆ. ನಮ್ಮ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯವಾಗಿರುತ್ತದೆ. ಹೀಗಾಗಿ ಇದಕ್ಕೆ ನಿಂಬೆಹಣ್ಣಿನ ಉಪ್ಪಿನಕಾಯಿ ಉತ್ತಮ. ನೈಸರ್ಗಿಕವಾಗಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಅದು ಕೆಟ್ಟ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ವಿರುದ್ಧ ಬಲಪಡಿಸುತ್ತದೆ. ಇದರಲ್ಲಿ ವಿಟಮಿನ್ ಬಿ ಇರುವುದರಿಂದ ಉರಿಯುತದ ಗುಣಲಕ್ಷಣಗಳನ್ನು ಹೊಂದಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು ಈ ಉಪ್ಪಿನಕಾಯಿ ತುಂಬಾ ಒಳಿತು.

ಇದರ ಜೊತೆಗೆ ಹೃದಯದ ಆರೋಗ್ಯವೂ ಕೂಡ ಸುಧಾರಿಸುತ್ತದೆ. ಬಹುತೇಕ ಶೂನ್ಯ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ನಿಂಬೆ ಹಣ್ಣಿನ ಉಪ್ಪಿನಕಾಯಿ ಅಂತ ಹೇಳಿದರೆ ಖುಷಿಯಾಗಿ ಆಗುತ್ತೆ ಅಲ್ವಾ ಹಾಗಾಗಿ ಇದನ್ನು ಸೇವನೆ ಮಾಡಿ.

ಗರ್ಭಿಣಿಯರೂ ಕೂಡ ಇದನ್ನು ಸೇವಿಸಬಹುದು.ಮಜ್ಜಿಗೆ ಅನ್ನದೊಂದಿಗೆ ಗರ್ಭಿಣಿಯರು ಲಿಂಬೆಹಣ್ಣಿನ ಉಪ್ಪಿನಕಾಯಿಯನ್ನು ಸೇವಿಸಹುದು. ಇದರ ಜೊತೆ ಮೂಳೆಗಳು ಕೂಡ ಬಲಶಾಲಿ ಆಗುತ್ತೆ. ಮೂಳೆಗಳು ದುರ್ಬಲಗೊಳ್ಳೋದನ್ನು ತಪ್ಪಿಸಲು ಅಗತ್ಯವಾದ ಜೀವಸತ್ವಗಳು ಮತ್ತು ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಇದು ನೀಡುತ್ತದೆ.

ಇಷ್ಟೆಲ್ಲಾ ಉಪಯೋಗಗಳಿರುವ ನಿಂಬೆಹಣ್ಣಿನ ಉಪ್ಪಿನಕಾಯಿಯನ್ನು ತ್ಯಜಿಸಲೇಬೇಡಿ. ಊಟಕ್ಕೆ ಬಳಸಿಕೊಂಡು ಚಪ್ಪರಿಸಿ ತಿನ್ನಿ.

Leave A Reply

Your email address will not be published.