ಎಚ್ಚರ ಜನರೇ | ನಿಮ್ಮ 4G ಸಿಮ್ ಅನ್ನು 5G ಅಪ್ಡೇಟ್ ಮಾಡಲು ಕರೆ ಬಂದರೆ ತಪ್ಪಿಯೂ ಈ ಕೆಲಸ ಮಾಡಬೇಡಿ !!!

ಜನರು ಮೊಬೈಲ್ ಗೆ ಹೆಚ್ಚಾಗಿ ಅಡಿಕ್ಟ್ ಆಗಿರೋದು ಗೊತ್ತೇ ಇದೆ. ಇದೇ ಅವಕಾಶವನ್ನು ಸೈಬರ್ ಕಳ್ಳರು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಅಂದರೆ Fake Call ಇದೀಗ 5G ಸಿಮ್ ಚಾಲ್ತಿಯಲ್ಲಿರುವುದು ಕೆಲವೇ ಜನರಲ್ಲಿ ಮಾತ್ರ ಹಾಗೂ ಈ 5G ಸಿಮ್ ವಿಚಾರವನ್ನೇ ಮುಂದಿಟ್ಟುಕೊಂಡು ಫೇಕ್ ಕಾಲ್ ಬರಲಿದೆ ಈ ಬಗ್ಗೆ ಪೊಲೀಸರು ಎಚ್ಚರಿಕೆ ಕೂಡ ನೀಡಿದ್ದಾರೆ.

ನಿಮಗೆ ಫೇಕ್ ಕಾಲ್ ಬಂದಾಗ ಅಂದರೆ 4G ಸಿಮ್​ ಅನ್ನು 5Gಗೆ ಅಪ್ಡೇಟ್ ಮಾಡುತ್ತೇವೆ ಎಂಬ ಕರೆ ಬರಬಹುದು. 4ಜಿಯಿಂದ 5ಜಿಗೆ ನೆಟ್‌ವರ್ಕ್ ಅಥವಾ ಸಿಮ್‌ ಕಾರ್ಡ್‌ ಅಪ್‌ಡೇಟ್‌ ಮಾಡುವ ನೆಪದಲ್ಲಿ ಸೈಬರ್‌ ಖದೀಮರು ವಂಚನೆ ಮಾಡುವ ಅವಕಾಶಗಳಿವೆ. 5ಜಿ ಅಪ್‌ಡೇಟ್‌ ಕುರಿತಾಗಿ ಮೊಬೈಲ್‌ಗೆ ಬರುವ ಟೆಕ್ಸ್ಟ್‌ ಮೆಸೇಜ್‌ಗಳ ಬಗ್ಗೆ ಗ್ರಾಹಕರು ಎಚ್ಚರ ವಹಿಸಬೇಕು. ಈ ರೀತಿಯ ದೂರವಾಣಿ ಕರೆಗಳ ಬಗೆಗೂ ಜಾಗೃತಿ ವಹಿಸುವುದು ಅಗತ್ಯ. ಅಮಾಯಕರನ್ನೇ ಗುರಿಯಾಗಿಸಿಕೊಳ್ಳುವ ಖದೀಮರು ನಿಮ್ಮ 4ಜಿ ಸಿಮ್‌ ಕಾರ್ಡನ್ನು 5ಜಿಯಾಗಿ ಅಪ್‌ಡೇಟ್‌ ಮಾಡುತ್ತೇವೆ. ನಿಮಗೆ ಬಂದಿರುವ ಒಟಿಪಿ ನೀಡಿ ಎಂದು ಕರೆ ಮಾಡಬಹುದು. ಇಲ್ಲವೇ, ಲಿಂಕ್‌ಗಳನ್ನು ಕಳಿಸಿ ಅವುಗಳನ್ನು ಕ್ಲಿಕ್‌ ಮಾಡುವಂತೆ ಸೂಚಿಸಬಹುದು. ಸೈಬರ್‌ ವಂಚಕರು ಸಾರ್ವಜನಿಕ ಗ್ರಾಹಕರನ್ನು ಸಂಪರ್ಕಿಸಿ ಹಲವು ವಂಚನಾ ಮಾರ್ಗಗಳ ಮೂಲಕ ಸಾರ್ವಜನಿಕ ಗ್ರಾಹಕರ ಮೊಬೈಲಿಗೆ ಒಟಿಪಿ ಬರುವಂತೆ ಮಾಡುತ್ತಾರೆ. ಕೆಲವೊಮ್ಮೆ ಅಪ್‌ಡೇಟ್‌/ಅಪ್ ಗ್ರೇಡ್ ನೆಪದಲ್ಲಿ ಗ್ರಾಹಕರ ಹಳೆಯ ಸಿಮ್‌ಕಾರ್ಡ್‌ ಅನ್ನು ವಂಚಕರೇ ಬಳಸಿಕೊಳ್ಳುವ ಅಪಾಯವೂ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

ಈಗಾಗಲೇ ಭಾರತದಲ್ಲಿ ಮೊಟ್ಟಮೊದಲ 5ಜಿ ಸೇವೆಯನ್ನು ಶುರುಮಾಡಿದೆ. ದೆಹಲಿ, ಮುಂಬೈ, ವಾರಾಣಸಿ, ಬೆಂಗಳೂರು (Bengaluru) ಮತ್ತು ಇತರ ನಗರಗಳಲ್ಲಿ ಏರ್ಟೆಲ್​ನ 5G (Airtel 5G) ಸೇವೆಯು ಲಭ್ಯವಿರುತ್ತದೆ. ದೇಶದಲ್ಲಿ 5ಜಿ ಯುಗ ಆರಂಭವಾಗಿದೆ. ಕಳೆದ ವಾರ ನಡೆದ 6ನೇ ಇಂಡಿಯನ್ ಮೊಬೈಲ್​ ಕಾಂಗ್ರೆಸ್​ನಲ್ಲಿ 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಿದ್ದಾರೆ.

ಪ್ರಸ್ತುತ ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಕೂಡ ದೇಶದಲ್ಲಿ ತನ್ನ ಜಿಯೋ 5ಜಿ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಜಿಯೋ 5ಜಿ ಸೇವೆ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಲಭ್ಯವಾಗಲಿದೆ. ಇದೀಗ 5G ವಿಚಾರವನ್ನೇ ಮುಂದಿಟ್ಟುಕೊಂಡು ವಂಚಕರು ಸಾರ್ವಜನಿಕರಿಂದ ಕಳ್ಳತನ ಮಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಕ್ರೈಮ್ ಬ್ರಾಂಚಿನಿಂದ ನಾಗರಿಕರಿಗೆ ಈ ಮೂಲಕ ತಿಳಿಯಪಡಿಸುವ ವಿಷಯ ಏನೆಂದರೆ Mobile SIM Card ನ 5G ಸರ್ವಿಸ್ ಪ್ರಾರಂಭವಾಗಿರುವುದು ನಿಮಗೆ ಗೊತ್ತಿರುವ ವಿಷಯವಾಗಿದೆ. ಇದನ್ನೆ ನೆಪವಾಗಿಟ್ಟುಕೊಂಡು ಸೈಬರ್ ಕ್ರೈಮ್‌ನ ಕೆಲವು ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಕಾಲ್ ಮಾಡಿ ನಿಮ್ಮ Mobile SIM Card ನ್ನು 4G ದಿಂದ 5G ಗೆ Update ಮಾಡುತ್ತೇವೆ, ನಿಮಗೆ ಒಂದು OTP ಬರುತ್ತದೆ ಹೇಳಿ ಅಂತ ಕಾಲ್ ಬಂದರೆ, ಖಂಡಿತವಾಗಿ ಯಾರು ನಿಮಗೆ ಬಂದ OTP ಯನ್ನು ತಿಳಿಸಬಾರದು ನೀವು ಒಂದು ವೇಳೆ ಅವರು ಕಳುಹಿಸಿದ OTP ಸಂಖ್ಯೆಯನ್ನು ಅವರಿಗೆ ಹೇಳಿದರೆ ನಿಮ್ಮ Bank Account ನಲ್ಲಿರುವ ಎಲ್ಲಾ ಹಣವನ್ನು ಅವರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಆದರಿಂದ ದಯವಿಟ್ಟು ಯಾರಾದರು ಅಪರಿಚಿತರು OTP ಕೇಳಿದರೆ ಹೇಳದೇ Cyber crimes ದಿಂದ ಸುರಕ್ಷತಿವಾಗಿರಿ”, ಎಂದು ಹೇಳಿದೆ.

ಮುಖ್ಯವಾದ ಅಂಶ ಎಂದರೆ ನಿಮ್ಮ ಮೊಬೈಲ್​ನಲ್ಲಿ ಈಗಿರುವ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್​ನ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್​ಫೋನ್​ನಲ್ಲಿ ನೆಟ್​ವರ್ಕ್​ ಸೆಟ್ಟಿಂಗ್​ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು ಎಂದು ಜನತೆಗೆ ಇದೊಂದು ಎಚ್ಚರಿಕೆ ಕರೆಯನ್ನು ನೀಡಿರುವುದಾಗಿದೆ.

Leave A Reply

Your email address will not be published.