ಮಂಗಳೂರು : ಹೆತ್ತ ತಾಯಿಗೆ ಭಾರವಾಯಿತೇ ಈ ಕಂದಮ್ಮ | ರಸ್ತೆ ಬದಿಯಲ್ಲಿ ಪತ್ತೆಯಾದ ಒಂದು ದಿನದ ಮಗು!!!

ಮಂಗಳೂರು : ತನ್ನ ಒಂದು ದಿನದ ಕರುಳಬಳ್ಳಿಯನ್ನೇ ಕಿತ್ತು ಯಾರದೋ ಮನೆಯ ಕಾರಿನಡಿಯಲ್ಲಿ ಇಟ್ಟು ಹೋದಳಾ ಈ ತಾಯಿ. ಆ ಮಗು ರಾತ್ರಿಯಿಡೀ ಅಲ್ಲೇ ಇತ್ತೋ ಅಥವಾ ಬೆಳ್ಳಂಬೆಳಗ್ಗೆ ತಂದು ಇಟ್ಟರೋ ಗೊತ್ತಿಲ್ಲ. ಅಂತೂ ಮಗುನ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಅಂದ ಹಾಗೆ ಈ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅನೈತಿಕ ಸಂಬಂಧದ ಫಲವೋ ಅಥವಾ ಇನ್ನೇನೋ ಎಲ್ಲಾ ವಿಷಯ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

ಇಲ್ಲೊಂದು ಕಡೆ ಮನೆಯ ಮುಂದೆ ಪಾರ್ಕ್ ಮಾಡಿದ ಕಾರೊಂದರ ಅಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಇದು ಸಂಭವಿಸಿದ್ದು ತೊಕ್ಕೊಟ್ಟು ವ್ಯಾಪ್ತಿಯ ಕಾಪಿಕಾಡು ಅಂಬಿಕಾ ರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ.

ಕಾಪಿಕಾಡ್ ನಿವಾಸಿ ಅಮರ್ ಎಂಬುವವರ ನಿವಾಸದ ಗೇಟಿನ ಮುಂಭಾಗ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮುಂಜಾನೆಯ ಸಂದರ್ಭದಲ್ಲಿ ಮಗುವೊಂದು ಅಳುತ್ತಿರುವ ಶಬ್ದ ಕೇಳಿ ಮನೆಮಂದಿ ನೋಡಲು ಹೋದಾಗ ಕಾರಿನ ಅಡಿಯಲ್ಲಿ ಬಿಳಿ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಒಂದು ದಿನದ ಮಗು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ತಕ್ಷಣ ನಿವಾಸದವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಮಗುವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯಕೀಯ ಪರೀಕ್ಷೆ ಸಂದರ್ಭ ಒಂದು ದಿನದ ಮಗು ಎಂಬುದು ತಿಳಿದು ಬಂದಿದೆ.

Leave A Reply

Your email address will not be published.