ಸಿಮ್ ಖರೀದಿಸಲು ಬಂದ ನಟಿಯನ್ನು ಶೋರೂಂ ನಲ್ಲಿ ಕೂಡಿ ಹಾಕಿದ ಉದ್ಯೋಗಿ !!!

Share the Article

ರೇಷ್ಮಾ ಅವರು ಲಿಜೋ ಜೋಸ್ ಪಲ್ಲಿಸ್ಸೆರಿ ನಿರ್ದೇಶನದ ‘ಅಂಗಮಾಲಿ ಡೈರೀಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ವೇಲಿಪದಿಂತೆ ಪುಸ್ತಕಂ, ಲೋನಪ್ಪಂತೆ ಮಾಮೋದಿಸ, ಮಧುರ ರಾಜ ಮತ್ತು ಅಯ್ಯಪ್ಪನುಂ ಕೊಶಿಯುಂ ಚಿತ್ರಗಳ ಮೂಲಕ ಜನರನ್ನು ರಂಜಿಸಿದ ನಟಿ ಪೋಲಿಸ್ ಮೆಟ್ಟಿಲೇರಿರುವ ಪ್ರಸಂಗ ನಡೆದಿದೆ.

ಮಹಿಳೆಯರ ಮೇಲೆ ಕಿರುಕುಳ, ದೌರ್ಜನ್ಯಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದಕ್ಕೆ ನಟಿಯರು ಕೂಡ ಹೊರತಾಗಿಲ್ಲ. ಇತ್ತೀಚೆಗೆ ಮಲಯಾಳಂ ನಟಿ ಅನ್ನಾ ರೇಷ್ಮಾ ರಾಜನ್ ಅವರಿಗೂ ಕೂಡ ಬೆದರಿಕೆ ಹಾಕಿದ ಘಟನೆ ನಡೆದಿದೆ.

ನಟಿ ಅನ್ನಾ ರೇಷ್ಮಾ ರಾಜನ್ ಅವರನ್ನು ಖಾಸಗಿ ಟೆಲಿಕಾಂ ಕಂಪನಿಯ ಉದ್ಯೋಗಿಯೊಬ್ಬರು ಶೋ ರೂಮ್​ನಲ್ಲಿ ಕೂಡಿ ಹಾಕಿ, ಬೆದರಿಕೆ ಹಾಕಿದ ಘಟನೆ ನಡೆದಿದ್ದು, ಈ ಕುರಿತು ನಟಿ ದೂರು ಸಲ್ಲಿಸಿದ್ದಾರೆ.

ಡೂಪ್ಲಿಕೇಟ್​ ಸಿಮ್​ ತರಲೆಂದು ಕೇರಳದ ಅಲುವಾದಲ್ಲಿರುವ ಟೆಲಿಕಾಂ ಶೋ ರೂಮ್​ಗೆ ಹೋದಾಗ ಅಲ್ಲಿನ ಉದ್ಯೋಗಿಯೊಬ್ಬರು ನಟಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಲ್ಲದೆ , ಶೋ ರೂಮ್​ನ ಶಟರ್​ ಅನ್ನು ಎಳೆದು, ಕೂಡಿ ಹಾಕಿ ಬೆದರಿಕೆ ಹಾಕಿದ್ದಾರೆ.

ಈ ಕುರಿತು ರೇಷ್ಮಾ ದೂರು ನೀಡಿದ್ದು, ದೂರಿನ ಬಳಿಕ ಪೊಲೀಸ್​ ಠಾಣೆಗೆ ಆಗಮಿಸಿದ ಉದ್ಯೋಗಿ ರೇಷ್ಮಾ ಅವರ ಬಳಿ ಕ್ಷಮೆಯಾಚಿಸಿದ್ದಾನೆ. ಹೀಗಾಗಿ ಆತನ ಉದ್ಯೋಗ ಮತ್ತು ಭವಿಷ್ಯದ ದೃಷ್ಟಿಯಿಂದ ನಟಿ ದೂರನ್ನು ಕೈ ಬಿಟ್ಟಿದ್ದು, ತನಗೆ ತೊಂದರೆ ನೀಡಿದರೂ ಕೂಡ ಕ್ಷಮಿಸಿ ಮಾನವೀಯತೆ ಮೆರೆದಿದ್ದಾರೆ.

Leave A Reply