Palak : ಪಾಲಕ್ ಪನ್ನೀರ್ ಅಥವಾ ಪಾಲಕ್ ಚನಾ ದಾಲ್ | ಯಾವುದು ಅತೀ ಉತ್ತಮ? ಇಲ್ಲಿದೆ ಉತ್ತರ

ಉತ್ತಮ ಆರೋಗ್ಯಕ್ಕೆ ಆಹಾರ ಕ್ರಮದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ ವಾಗಿದ್ದು , ಆಹಾರ ಪದಾರ್ಥಗಳಲ್ಲಿ ಬಳಕೆಯಾಗುವ ಪಾಲಕ್ ಸೊಪ್ಪು ಅನೇಕ ಪ್ರಯೋಜನಗಳನ್ನು ಹೊಂದಿದೆ. ಪಾಲಕ್ ಸೊಪ್ಪಿನಲ್ಲಿ ಕೆಸೆನ್ ಎಂಬ ಪ್ರೋಟೀನ್ ಅಂಶ ಸಾಕಷ್ಟು ಕಂಡುಬಂದಿದ್ದು ಬಹಳ ಬೇಗನೆ ಜೀರ್ಣ ಆಗುವ ಗುಣ ಹೊಂದಿದೆ.

ಪಾಲಕ್ ಮತ್ತು ಪನೀರ್ ಆರೋಗ್ಯಕರ ಅಥವಾ ಟೇಸ್ಟಿ ಎಂಬ ಮಾತನ್ನು ಅಲ್ಲಗೆಳೆಯುವಂತಿಲ್ಲ. ಬಾಯಿಯಲ್ಲಿ ನೀರೂರಿಸುವ ಆಹಾರ ಪದಾರ್ಥವಾದರೂ ಕೂಡ ಆರೋಗ್ಯದ ದೃಷ್ಟಿಯಿಂದ ಕೆಡುಕನ್ನು ಉಂಟುಮಾಡುತ್ತದೆ.ಆರೋಗ್ಯದ ದೃಷ್ಟಿಯಿಂದ ಈ ಪಾಲಕ್ ಮತ್ತು ಪನ್ನೀರ್ ಉತ್ತಮ ಸಂಯೋಜನೆಯಲ್ಲವೆಂದು ಹೇಳಬಹುದು. ಅತಿಯಾದರೆ ಅಮೃತವೂ ವಿಷವೇ ಎಂಬ ಮಾತಿನಂತೆ, ಇವೆರಡನ್ನು ಅತಿಯಾಗಿ ಸೇವನೆ ಮಾಡಿದರೆ, ದೇಹದಲ್ಲಿ ಹೆಚ್ಚಿನ ಕೊಬ್ಬಿನಾಂಶ ಶೇಖರಣೆಯಾಗುತ್ತದೆ.

ಅದೇ ಪಾಲಕ್ ಮತ್ತು ದಾಲ್ ಅತ್ಯುತ್ತಮ ಸಂಯೋಜನೆಯಾಗಿದೆ. ಪಾಲಾಕ್ ದಾಲ್ ಗ್ರೇವಿಯಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿದ್ದು ಸಮಾನ ಪ್ರಮಾಣದ ಪ್ರೋಟೀನ್ ಅನ್ನು ಸಹ ಹೊಂದಿದೆ. ಪಾಲಕ್ ಮತ್ತು ಪನ್ನೀರ್ ಸಂಯೋಜನೆಯು ಅತ್ಯಂತ ಅಪಾಯಕಾರಿ ಸಂಯೋಜನೆಯಾಗಿದ್ದು, ಪಾಲಕ್ ನಲ್ಲಿ ಕಂಡುಬರುವ ಕಬ್ಬಿಣದ ಅಂಶವು ರಕ್ತವಲ್ಲದ ಅಥವಾ ಹಿಮೋಗ್ಲೋಬಿನ್ ಅಲ್ಲದ ಕಬ್ಬಿಣವಾಗಿದೆ.

ಇದು ಸಸ್ಯಜನ್ಯ ಕಬ್ಬಿಣವಾಗಿದ್ದು, ಪನ್ನೀರ್ನಲ್ಲಿರುವ ಕ್ಯಾಲ್ಸಿಯಂ ಅಂಶವು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ. ಹಾಗಾಗಿ ಪಾಲಕ್ ಸೇವನೆಯನ್ನು ಉತ್ತಮವಲ್ಲವೆಂದು ಪರಿಗಣಿಸಲಾಗಿದೆ.

ಪಾಲಕ್ ಮತ್ತು ಪನೀರ್ ಆರೋಗ್ಯಕರ ಹಾಗೂ ಟೇಸ್ಟಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಪಾಲಕ್ ಮತ್ತು ಪನೀರ್ ಕಾಂಬಿನೇಶನ್ ನಲ್ಲಿ ಮಾಡುವ ಗ್ರೇವಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರ ಬದಲಿಗೆ ಪಾಲಕ್ ಚನ್ನಾ ದಾಲ್ ಸೇವನೆ ಮಾಡಬಹುದಾಗಿದೆ.

ರುಚಿಕರವಾದ ಪಾಲಾಕ್ ಪಚನಾ ದಾಲ್ ನಲ್ಲಿ ಪೌಷ್ಟಿಕಾಂಶ ಹೊಂದಿದ್ದು, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳ ಪರಿಪೂರ್ಣ ಸಮತೋಲನವಾಗಿದೆ. ಇದಲ್ಲದೆ, ವಿಶೇಷವಾಗಿ ರಕ್ತಹೀನತೆ ಅಥವಾ ಕಬ್ಬಿಣದ ಕೊರತೆಯಿರುವವರು ಇದನ್ನು ಸೇವಿಸುತ್ತಾರೆ.

ಪಾಲಕ್ ಹೆಚ್ಚಿನ ಪ್ರಮಾಣದ ಕ್ಯಾರೊಟಿನಾಯ್ಡ್, ವಿಟಮಿನ್ ಸಿ, ವಿಟಮಿನ್ ಕೆ, ಫೋಲಿಕ್ ಆಮ್ಲ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೊಂದಿದ್ದು ಪೌಷ್ಟಿಕಾಂಶ ಭರಿತ ಆಹಾರ ಪದಾರ್ಥವಾಗಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ. .ಪಾಲಾಕ್ ಚನಾ ದಾಲ್ ಗ್ರೇವಿಯಲ್ಲಿ ವಿಟಮಿನ್ಗಳು, ಖನಿಜಾಂಶಗಳು, ಪ್ರೊಟೀನ್ ಮತ್ತು ನಾರಿನಾಂಶ ಅಧಿಕವಾಗಿದೆ.ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ ಜೊತೆಗೆ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ.

ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು, ಹೃದ್ರೋಗ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್ಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ತಡೆಯಲು ಸಹಕರಿಸುತ್ತದೆ. ಪಾಲಕ್ ಪನ್ನೀರ್ ಗೆ ಹೋಲಿಸಿದರೆ ಪಾಲಕ್ ಚನಾ ದಾಲ್ ಆರೋಗ್ಯಕರವಾಗಿದ್ದು, ಈ ಸಂಯೋಜನೆಯಿಂದ ಅರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.

Leave A Reply

Your email address will not be published.