ಕನ್ನಡದ ‘ಆಕಾಶ ದೀಪ ‘ ಧಾರಾವಾಹಿ ನಟಿ ಬಾಳಲ್ಲಿ ಲವ್‌ ಜಿಹಾದ್‌ ಆರೋಪ: ಮದುವೆ ಹಾಗೂ ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಿವ್ಯಾ ಶ್ರೀಧರ್

ಧಾರಾವಾಹಿ ನಟಿಯೊಬ್ಬಳನ್ನು ಪ್ರೀತಿಯ ನಾಟಕವಾಡಿ ಗುಟ್ಟಾಗಿ ಮದುವೆ ಮಾಡಿ ಈಗ ಹೆಂಡತಿ ಮಗು ಬೇಡ ಎಂದು ಆಕೆಯನ್ನು ನಡು ದಾರಿಯಲ್ಲಿ ಬಿಟ್ಟು ಹೋದ ಘಟನೆಯೊಂದು ನಡೆದಿದೆ.

 

ಕನ್ನಡದ ‘ಆಕಾಶ ದೀಪ’ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಶ್ರೀಧರ್​ ಬಾಳಲ್ಲಿಯೇ ಈ ಘಟನೆ ನಡೆದಿದ್ದು. ಒಂದು ರೀತಿಯಲ್ಲಿ ಆಕೆಗೆ ಇದು ಶಾಕಿಂಗ್ ಸುದ್ದಿ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಒಳ್ಳೆಯ ಹೆಸರು ಪಡೆದು ನಂತರ ಅವಕಾಶಕ್ಕಾಗಿ ತಮಿಳು ಇಂಡಸ್ಟ್ರಿಗೆ ಹೋಗಿದ್ದ ದಿವ್ಯಾಗೆ ಪರಿಚಯವಾಗಿದ್ದೇ ನಟ ಅಮ್ಜದ್​ ಅಲಿಯಾಸ್​ ಅರ್ನವ್​. ಪರಿಚಯ ನಂತರ ಪ್ರೀತಿಯಾಗಿದೆ. ಮದುವೆ ಕೂಡ ಆಗಿದೆ.

‘ನನಗೂ ಅರ್ನವ್​ಗೂ ಮದುವೆ ಆಗಿದೆ. ಆರ್ನವ್ ನನಗೆ ಸಾಕಷ್ಟು ಹಿಂಸೆ ಕೊಡ್ತಿದ್ದಾನೆ. ಮದುವೆ ವಿಚಾರವನ್ನು ಗುಟ್ಟಾಗಿ ಇಡುವಂತೆ ಹೇಳ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕದಂತೆ ಎಚ್ಚರಿಕೆ ಕೊಟ್ಟಿದ್ದಾನೆ. ಇದೇ ವಿಚಾರಕ್ಕೆ ಹಲವು ಬಾರಿ ನನ್ನ ಮೇಲೆ ಹಲ್ಲೆಯಾಗಿದೆ’ ಎಂದಿರುವ ದಿವ್ಯಾ, ಮನದ ನೋವನ್ನು ಹೇಳಿದ್ದಾರೆ.

ನಾವಿಬ್ಬರೂ ಒಂದೇ ಸೀರಿಯಲ್​ನಲ್ಲಿ 2017 ರ ರಲ್ಲಿ ಜೊತೆಗೇ ಕೆಲಸ ಮಾಡ್ತಿದ್ವಿ. ಆ ಸಮಯದಲ್ಲಿ ಪರಿಚಯ ಆಗಿ, ಫ್ರೆಂಡ್ಸ್​ ಆದೆವು. ಆಮೇಲೆ ಪ್ರೀತಿಸಿ ಮದುವೆ ಆದೆವು. ದಿವ್ಯಾರನ್ನು ಪರಿಚಯ ಮಾಡಿಕೊಳ್ಳುವಾಗ ಆತ ತನ್ನ ಹೆಸರು ಅರ್ನವ್​ ಎಂದು ಹೇಳಿಕೊಂಡಿದ್ದನಂತೆ. ಆದರೆ ಆತನ ಅಸಲಿ ಹೆಸರು ಅಮ್ಜದ್​ ಖಾನ್.
2 ವರ್ಷದ ಹಿಂದೆ ಒಂದು ಮನೆ ಖರೀದಿ ಮಾಡಿದೆವು. ಆ ಮನೆಗೆ ಖರೀದಿ ಮಾಡುವಾಗ ನಾನು ಹಣ ಸಹಾಯ ಮಾಡಿದ್ದೇನೆ.

ಅಷ್ಟು ಮಾತ್ರವಲ್ಲ, ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಆತ ಕೆಲಸವಿಲ್ಲದೇ 2 ವರ್ಷ ಮನೆಯಲ್ಲೇ ಇದ್ದ. ಆಗ ನಾನು ಆತನನ್ನು ಮಗು ಥರ ನೋಡಿಕೊಂಡೆ. ಏನೂ ಕಡಿಮೆ ಆಗದ ಹಾಗೇ ನೋಡಿಕೊಂಡಿದ್ದೇನೆ. ಆತನಿಗಾಗಿ ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ.

ಅಷ್ಟು ಪ್ರೀತಿ ಮಾಡುತ್ತಿದ್ದ ನನ್ನ ಪತಿ ಈಗ ನನ್ನನ್ನು ದೂರ ಇಟ್ಟಿದ್ದಾನೆ. ಆದರೆ ನನಗೆ ಅವನು ಬೇಕು. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.

ಆದರೂ ಇಲ್ಲಿ ಕಾಡುವ ಒಂದು ಪ್ರಶ್ನೆ ಏನೆಂದರೆ ಈತ ದಿವ್ಯರನ್ನು ತನ್ನ ಅಸಲಿ ಹೆಸರು ಹೇಳದೆ ಬೇರೆ ಹೆಸರು ಹೇಳಿ ಪರಿಚಯ ಮಾಡಿದ್ದು, ಇದು ನಿಜಕ್ಕೂ ಅನುಮಾನ ಮೂಡಿಸುವ ಪ್ರಶ್ನೆ. ಹಾಗಾದರೆ ಇದು ಲವ್​ ಜಿಹಾದ್ ಇರಬಹುದಾ? ಈ ನಟಿ ಈ ಲವ್ ಎಂಬ ಬಲೆಯಲ್ಲಿ ಬೀಳುವ ಹಾಗೇ ಈ ನಟ ಮಾಡಿದ್ದು ಈತನ ತೀಟೆ ತೀರಿಸೋಕೆ ಇರಬಹುದೇ? ಈಗ ಹೆಂಡತಿ ಮಗು ಬೇಡ ಎಂದು ಹೇಳಿದರೆ…ಇದರರ್ಥ ಲವ್ ಜಿಹಾದ್ ಎಂಬುದೇ ಆಗಿರಬಹುದೇ?

Leave A Reply

Your email address will not be published.