Mangaluru: ವಿದ್ಯುತ್‌ ಆಘಾತಕ್ಕೆ ಮೂರುವರೆ ವರ್ಷದ ಮಗು ಮೃತ್ಯು; ರಕ್ಷಿಸಲು ಧಾವಿಸಿದ ಅಜ್ಜ ಗಂಭೀರ

Share the Article

Putturu: ಮೂರುವರೆ ವರ್ಷದ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಅರ್ಥ್‌ ವಯರ್‌ ತಗುಲಿ ಸಾವಿಗೀಡಾದ ಘಟನೆಯೊಂದು ಪುತ್ತೂರು ತಾಲೂಕಿನ ಕರ್ನಾಟಕ-ಕೇರಳ ಗಡಿಭಾಗದ ಗಾಳಿಮುಖದ ಸಮೀಪದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

ಶಾಫಿ ಅವರ ಮೊಮ್ಮಗ ಝೈನುದ್ದೀನ್‌ (ಝೈನು) ಎಂಬ ಮಗುವೇ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಸಾವಿಗೀಡಾಗಿದೆ.

ಮಗು ಮನೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಮನೆಯ ಗೋಡೆಯ ವಿದ್ಯುತ್‌ ಅರ್ಥ್‌ ವಯರ್‌ನ ತಂತಿ ತಾಗಿ ಶಾಕ್‌ ಆಗಿದೆ. ಬೊಬ್ಬೆ ಕೇಳಿ ಮಗುವನ್ನು ರಕ್ಷಣೆ ಮಾಡಲೆಂದು ಬಂದ ಅಜ್ಜ ಶಾಫಿ ಅವರಿಗೂ ಶಾಕ್‌ ಹೊಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಕಾಸರಗೋಡಿನ ಚೆರ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply