ಮುಸ್ಲಿಂ ದೇಶದ ಶಾಲೆಗಳಲ್ಲೇ ಹಿಜಾಬ್ ವಿರುದ್ದ ಪ್ರತಿಭಟನೆ ಶುರು | ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

ನಮ್ಮ ಶಾಲೆಗಳಲ್ಲಿ ಹಿಜಾಬ್ ಬೇಕೆಂದು ಪ್ರತಿಭಟನೆ ನಡೆದಿದ್ದರೆ, ಅಲ್ಲಿ ಪಕ್ಕಾ ಮುಸ್ಲಿಂ ರಾಷ್ಟ್ರ ಇರಾನ್ ನಲ್ಲಿ ಹಿಜಾಬ್ ಗೆ ಬೈ ಬೈ ಹೇಳುತ್ತಿದ್ದಾರೆ ಅಲ್ಲಿನ ಹೆಣ್ಣು ಮಕ್ಕಳು. ಇರಾನ್‌ನಲ್ಲಿ ಹಿಜಬ್‌ (Iran Hijab Protests) ವಿರುದ್ಧದ ಪ್ರತಿಭಟನೆ ತೀವ್ರವಾಗಿದ್ದು ಈಗ ಹೋರಾಟಕ್ಕೆ ಶಾಲಾ ವಿದ್ಯಾರ್ಥಿನಿಯರು ಕೂಡಾ ಧುಮುಕಿದ್ದಾರೆ. ಸಂಘರ್ಷ ದಿನೇ ದಿನೇ ತೀವ್ರವಾಗುತ್ತಿದೆ. ಈ ತನಕ ಮಹಿಳೆಯರು ಮತ್ತು ಯುವತಿಯರು ಪ್ರತಿಭಟಿಸುತ್ತಿದ್ದರು. ಆದರೆ ಮಂಗಳವಾರದಿಂದ ಶಾಲಾ ಮಕ್ಕಳು ಭಾಗಿಯಾಗಿದ್ದು ನಡು ಬೀದಿಯಲ್ಲಿ ಹಿಜಬ್‌ ತೆಗೆದು ಪ್ರತಿಭಟನೆ ನಡೆಸಿದ್ದಾರೆ.

ಮಗದೊಂದೆಡೆ ಹಿಜಬ್‌ ಧರಿಸದೇ ಶಾಲೆಗೆ ಬಂದ ವಿದ್ಯಾರ್ಥಿನಿಯರನ್ನು ಶಾಲೆಗಳು ಡಿಬಾರ್‌ ಮಾಡುತ್ತಿದ್ದಾರೆ. ಇದಕ್ಕೆ ಸಿಟ್ಟಾದ ಮಕ್ಕಳು ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಯ ಕಡೆಗೆ ನೀರಿನ ಬಾಟಲಿಯನ್ನು ಎಸೆದಿದ್ದಾರೆ. ಮಕ್ಕಳ ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಥಳದಿಂದಲೇ ಶಾಲಾ ಡೈರೆಕ್ಟರ್‌ ಓಡಿ ಹೋಗಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

The female students of #Gohar_Dasht Karaj City #Iran in the process of expelling the General Director of Education from his own school. No hijabs…#IranProtests2022 #IranRevolution2022 pic.twitter.com/XmLJuVHa5K

— Stepan Gronk (@StepanGronk) October 4, 2022

“Woman! Life! Freedom!”

High school girl continuing #IranProtests by standing on top of a car, waving her forced-hijab (in the Mehrshahr district of Karaj today).

She can be arrested for this. #MahsaAmini⁩ #IranRevolution2022 #IslamicRepublic#مهساامینی #اعتصاباتسراسری pic.twitter.com/96fAbJEOVm

— IranHumanRights.org (@ICHRI) October 4, 2022

ದೊಡ್ಡದಾಗಿ ಮತ್ತು ಖಚಿತವಾದ ಹೋರಾಟಗಳಿಗೆ ಮಹಿಳೆಯರು ಇಳಿದಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ. ನಾವೆಲ್ಲ ಒಂದಾಗಿದ್ದೇವೆ. ಒಬ್ಬೊಬ್ಬರಾಗಿ ಸಾಯಲು ನಾವು ಸಿದ್ಧ ಎಂದು ಇರಾನ್‌ ಸರ್ಕಾರದ ವಿರುದ್ಧ ಬಾಲಕಿಯರು ಘೋಷಣೆ ಕೂಗುತ್ತಿದ್ದಾರೆ.

ರಾಜದಾನಿ ಟೆಹರಾನ್ ನಲ್ಲಿ ತಲೆಗೆ ಹಿಜಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು ಬಂಧಿಸಿದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್‌ ಆದ ಬೆನ್ನಲ್ಲೇ ಇರಾನ್‌ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದಾರೆ. ಆ ಪ್ರತಿಭಟನೆ ಇನ್ನಷ್ಟು ಪ್ರಬಲ ಆಗುತ್ತಿದೆ. ಸರ್ಕಾರ ಎಷ್ಟೇ ಬಲವಂತ ಮಾಡಿ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರೂ ದಿನೇ ದಿನೇ ಹಿಜಬ್‌ ವಿರುದ್ಧದ ಹೋರಾಟ ಜಾಸ್ತಿಯಾಗುತ್ತಿದ್ದು ವಿಶ್ವಾದ್ಯಂತ ಇರಾನ್‌ ಮಹಿಳೆಯರಿಗೆ ಬೆಂಬಲ ವ್ಯಕ್ತವಾಗುತ್ತಿದೆ.

Leave A Reply

Your email address will not be published.