Piles Remedy : ನಿಮಗೂ ಪೈಲ್ಸ್ ಸಮಸ್ಯೆ ಇದ್ದರೆ ಈ ಟಿಪ್ಸ್ ಫಾಲೋ ಮಾಡಿ!!!
ಒಮ್ಮೊಮ್ಮೆ ಮಲ ವಿಸರ್ಜನೆಯ ಸಂದರ್ಭದಲ್ಲಿ ಜಡತ್ವವಿರುವ ಅವಶೇಷಗಳನ್ನು ಹೊರ ಹಾಕಲು ಬಲವಂತವಾಗಿ ಪ್ರಯತ್ನ ಪಡುತ್ತೇವೆ. ಆ ಸ್ಥಳದಲ್ಲಿ ಹೆಚ್ಚಿನ ಒತ್ತಡ ಹಾಕುವ ಮೂಲಕ ಮಲ ವಿಸರ್ಜಿಸಲು ಪ್ರಯತ್ನಿಸುತ್ತೇವೆ. ಇದು ಖಂಡಿತ ಸಲ್ಲದು ಎಂದು ವೈದ್ಯರ ನುಡಿಯಾಗಿದೆ.
ಪೈಲ್ಸ್ ಅನ್ನು ಆಂತರಿಕ ಮತ್ತು ಬಾಹ್ಯ ಮೂಲವ್ಯಾಧಿ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಹೆಸರೇ ಸೂಚಿಸುವಂತೆ, ಗುದ ಕಾಲುವೆಯೊಳಗೆ ಆಂತರಿಕ ಮೂಲವ್ಯಾಧಿ ಸಂಭವಿಸುತ್ತವೆ.
ವ್ಯಾಯಾಮವನ್ನು ಮಾಡಬೇಕು ಇದರಿಂದ ದೇಹದಲ್ಲಿ ಒಂದು ರೀತಿಯ ಉಲ್ಲಾಸ ತರುತ್ತದೆ. ಜೊತೆಗೆ ಮನಸ್ಸು ಹಗುರವಾಗುತ್ತದೆ. ಫೈಬರ್ ಅಂಶಗಳಿಂದ ಸಮೃದ್ಧವಾದ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಬೇಕೆಂದು. ಕೆಲವು ತಜ್ಞರ ಪ್ರಕಾರ, ಹೆಚ್ಚಿನ ಫೈಬರ್ ದೇಹದಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಾಯು ಉತ್ಪತ್ತಿಯಾಗಲು ಕಾರಣವಾಗಬಹುದಾದರೂ ಇದು ಮೂಲವ್ಯಾಧಿಯಿಂದ ಖಂಡಿತವಾಗಿ ರಕ್ಷಣೆ ನೀಡುವುದರಿಂದ ಇದನ್ನು ಒಂದು ಪುಟ್ಟ ದಂಡ ಎಂದು ಪರಿಗಣಿಸಬೇಕೆಂದು ಹೇಳುತ್ತಾರೆ.
ನೀರನ್ನು ಹೆಚ್ಚಾಗಿ ಕುಡಿರಿ;
ಇದು ಸಾಮಾನ್ಯವಾಗಿ ಯಾರೂ ಇಷ್ಟಪಡುವುದಿಲ್ಲ ಆದರೆ ಪೈಲ್ಸ್ ಆದವರು ನೀರನ್ನು ಹೆಚ್ಚಾಗಿ ಕುಡಿಯಲೇಬೇಕು.
ಹಸಿ ತರಕಾರಿಗಳನ್ನು ತಿನ್ನಲೇಬೇಕು. ಇದರಿಂದ ಸಾಕಷ್ಟು ವಿಟಮಿನ್ ಗಳು ದೊರೆಯುತ್ತದೆ. ಅದರಲ್ಲೂ ಹಾಗಲಕಾಯಿ ಹಸಿಯಾಗಿ ತಿನ್ನುವುದರಿಂದ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಪೈಲ್ಸ್ ಗೆ ತುಂಬಾ ಉತ್ತಮ.
ಈ ಭಾದೆಯನ್ನು ಈ ರೀತಿಯಾಗಿ ತಡೆಯಬಹುದು ನಿಮ್ಮ ದಿನಚರಿಯಲ್ಲಿ ಇದನ್ನು ಅಳವಡಿಸಿಕೊಳ್ಳಿ.