ರೈತರು SBI ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ 3 ಲಕ್ಷ ಪಡೆಯಬಹುದು | ಅರ್ಜಿ ಪ್ರಕ್ರಿಯೆ ಈ ರೀತಿ ಇದೆ

ದೇಶದ ಬೆನ್ನೆಲುಬಾಗಿರುವ ಕೃಷಿಯನ್ನು ನೆಚ್ಚಿಕೊಂಡು ಜೀವಿಸುವ ಜೊತೆಗೆ ಹಗಲಿರುಳು ಶ್ರಮಿಸುವ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇದ್ದರೂ ಕೂಡ ಉಳಿದವರ ಪಾಲಿನ ಅನ್ನದಾತರಾಗಿ ಕಾಯಕವೇ ಕೈಲಾಸ ಎಂದು ನಂಬಿ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಮಂದಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಿ, ಬ್ಯಾಂಕ್ ಇಲ್ಲವೇ ಇನ್ನಿತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆದು, ಅಕಾಲಿಕ ಮಳೆ,ಬರ, ಬೆಳೆ ನಾಶ ಸಮಸ್ಯೆಗಳಿಂದ ಬೇಸತ್ತು ಸಾಲದ ಹೊರೆಯ ಭಾರ ಎತ್ತುವ ಸಾಮರ್ಥ್ಯ ಇಲ್ಲದೆ, ಆತ್ಮಹತ್ಯೆಗೆ ಶರಣಾದ ಬೇಕಾದಷ್ಟು ನಿದರ್ಶನಗಳಿವೆ.

 

ಸರ್ಕಾರ ರೈತರಿಗೆ ನೆರವಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ಸಂಕಷ್ಟ ಎದುರಿಸಲು ಸಾಲ ಸೌಲಭ್ಯ, ಉಳಿತಾಯ ಯೋಜನೆ , ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡು ನೆರವಾಗುತ್ತಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವಾರು ಯೋಜನೆಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಒಂದಾಗಿದ್ದು, ರೈತರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳು ಇಂತಹ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಪ್ರಮುಖ ಬ್ಯಾಂಕ್‌ಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಿದ ಮಾದರಿ ಯೋಜನೆಯ ಆಧಾರದ ಮೇಲೆ ಆಗಸ್ಟ್ 1998 ರಲ್ಲಿ ಎನ್‌ಡಿಎ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯಡಿ ಪ್ರಸ್ತುತ ರೈತರು ಗರಿಷ್ಠ 4 ಲಕ್ಷ ರೂ. ತನಕ ಸಾಲ ಪಡೆಯಬಹುದಾಗಿದೆ.

ಬೀಜ, ಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಲು ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ . ಇದರಡಿಯಲ್ಲಿ ಸಾಲ ಹಾಗೂ ಹಣಕಾಸಿನ ನೆರವು ಪಡೆಯಲು ರೈತರು ಸೇರಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರು ತಮ್ಮ ಜಮೀನಿನ ಮಾಲೀಕತ್ವದ ದಾಖಲೆಗಳೊಂದಿಗೆ ಬ್ಯಾಂಕಿನ ಶಾಖೆಗೆ ಭೇಟಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ರೈತರು ತಮ್ಮ ಬೆಳೆಗಳಿಗೆ ಈ ಕಾರ್ಡ್‌ ಮೂಲಕ ವಿಮೆ ಮಾಡಿಸಿಕೊಳ್ಳಬಹುದಾಗಿದ್ದು, ಪ್ರಸ್ತುತ ಸರ್ಕಾರವು ಕಿಸಾನ್‌ ಕ್ರಿಡಿಟ್‌ ಕಾರ್ಡ್‌ ಯೋಜನೆ ವ್ಯಾಪ್ತಿಗೆ ಪಶುಸಂಗೋಪನೆ, ಹೈನುಗಾರಿಕೆ, ಮತ್ತು ಮೀನುಗಾರರನ್ನು ಕೂಡ ಸೇರಿಸಿದೆ. ಈ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಡ್ಡಿಯಲ್ಲಿ 3 ರಿಂದ 4 ಲಕ್ಷ ರೂ, ಸಾಲದ ಹೊರೆಯ ಭಾರವನ್ನು ತಗ್ಗಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಮೊತ್ತದ ನೆರವಿನಿಂದ ರೈತ ತನ್ನ ಕೃಷಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.

SBI ಖಾತೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವ ಫಲಾನುಭವಿಗಳು ರೈತರಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿದ್ದರೆ, ಮನೆಯಲ್ಲಿಯೆ ಕುಳಿತು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ YONO ಅಪ್ಲಿಕೇಶನ್‌ನ ಸಹಾಯದಿಂದ ಅರ್ಜಿ ಸಲ್ಲಿಸಬೇಕು. ಮೊದಲು ರೈತ/ಫಲಾನುಭವಿ ಫೋನ್‌ನಲ್ಲಿ SBI YONO ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿದೆ. ಇದರಿಂದ, SBI YONO ನ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಲಾಗಿನ್ ಮಾಡಬಹುದಾಗಿದೆ.

SBI YONO ನ ಅಧಿಕೃತ ವೆಬ್‌ಸೈಟ್ ತೆರೆದು, ಬಳಿಕ ಕೃಷಿಯ ಆಯ್ಕೆಯನ್ನು ಮಾಡಿ, ನಂತರ ಖಾತೆಯೊಂದಿಗೆ ಆಯ್ಕೆಯನ್ನು ಆರಿಸಿದ ಬಳಿಕ ಕಿಸಾನ್ ಕ್ರೆಡಿಟ್ ಕಾರ್ಡ್ ವಿಮರ್ಶೆ ವಿಭಾಗಕ್ಕೆ ಹೋಗಬೇಕು. ನಂತರ ಅಪ್ಲಿಕೇಶನಿನ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಪುಟದಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರ್ಥಿಕ ನೆರವನ್ನು ಅಪೇಕ್ಷಿಸುವ ಫಲಾನುಭವಿಗಳು ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.