TRAI : ಟ್ರಾಯ್ ನಿಂದ ಜಾರಿಗೆ ಬರಲಿದೆ ಹೊಸ ರೂಲ್ಸ್
ಮೊಬೈಲ್ ಬಳಕದಾರರ ಸಂಖ್ಯೆ ಏರಿದಂತೆ ಅದರಿಂದ ಉಪಯೋಗ ಪಡೆಯುವವರಿಗಿಂತ ದುರುಪಯೋಗ ಪಡೆಯುವ ಮಂದಿ ಕೂಡ ಹೆಚ್ಚಿನ ಮಂದಿ ಇದ್ದಾರೆ. ಅದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಫೇಕ್ ಕಾಲ್‌ಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಯೂ ಕೂಡ ಏರಿಕೆಯಾಗುತ್ತಿದೆ.
ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಫ್ರಾಡ್ ಕಾಲ್‌ಗಳ ಮೂಲಕ ಜನರನ್ನು ವಂಚಿಸುವವರ ಪ್ರಮಾಣ ಕೂಡ ಜಾಸ್ತಿಯಾಗುತ್ತಲಿದೆ. ಇದೀಗ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿರ್ಧಾರ ಕೈಗೊಳ್ಳಲಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾರಂಭದಲ್ಲಿ ಫೇಕ್ ಕಾಲ್‌ಗಳನ್ನು ತಡೆಗಟ್ಟುವುದಕ್ಕಾಗಿ ಏಕೀಕೃತ ಕೆವೈಸಿ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾಪವನ್ನು ಮಾಡಲಾಗಿದೆ.
ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾರಂಭದಲ್ಲಿ TRAIನ ಅಧ್ಯಕ್ಷ ಪಿಡಿ ವಘೇಲಾ ಹೊಸ ಪ್ರಸ್ತಾಪವನ್ನು ಮಾಡಿದ್ದು, ಇದರಿಂದ ನಕಲಿ ಕರೆಗಳಿಂದ ಕಿರಿಕಿರಿ ಅನುಭವಿಸುತ್ತಿರುವವರಿಗೆ ರಿಲೀಫ್ ಸಿಗಲಿದೆ.
ದೇಶದಲ್ಲಿ ಕರೆಗಳನ್ನು ಪರಿಶೀಲಿಸಲು ಏಕೀಕೃತ ಕೆವೈಸಿ ಜಾರಿಗೆ ತರಬೇಕಾಗಿದ್ದು, ಇದಕ್ಕಾಗಿ ಟೆಲಿಕಾಂ ನಿಯಂತ್ರಕ TRAI ಏಕೀಕೃತ ನೌ-ಯುವರ್-ಕಸ್ಟಮರ್-ಸಿಸ್ಟಂ ಅನ್ನು ತರುವ ನಿಟ್ಟಿನಲ್ಲಿ ಪ್ರಸ್ತಾಪ ರೂಪಿಸಲಾಗಿದೆ. ಈ ಸಿಸ್ಟಂ ಅನ್ನು ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಬಳಸಬಹುದಾಗಿದ್ದು, ಇದರಿಂದ ಫೇಕ್ ಕಾಲ್ ಮಾಡುವವರು ಮತ್ತು ಸ್ಪ್ಯಾಮರ್‌ಗಳನ್ನು ಪತ್ತೆ ಹಚ್ಚಿ ಪರಿಶೀಲಿಸಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಟ್ರು ಕಾಲರ್ ಮೂಲಕ ನಂಬರ್ ಕಂಡು ಹಿಡಿಯಲು ಅನುವಾದರೂ ಕೂಡ ನೈಜ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಯುವುದಿಲ್ಲ. ಪ್ರಸ್ತುತ ದಿನಗಳಲ್ಲಿ ನಕಲಿ ಕರೆಗಳು ಮತ್ತು ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಕಠಿಣ ವಾಗಿದ್ದು, ವಂಚಕರು ಇದನ್ನೇ ದಾಳವಾಗಿ ಬಳಸಿಕೊಂಡು, ಸಾಮಾನ್ಯ ಜನರಿಗೆ ಫ್ರಾಡ್ ಕಾಲ್‌ಗಳ ಮೂಲಕ ವಂಚಿಸುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಟ್ರಾಯ್ ಹಲವಾರು ಕಾರ್ಯವಿಧಾನಗಳನ್ನು ಅನ್ವೇಷಿಸುತ್ತಿದೆ. ಇದರಲ್ಲಿ ಏಕೀಕೃತ KYC (ನೌ-ಯುವರ್-ಕಸ್ಟಮರ್) ಸಿಸ್ಟಂ ತರುವ ಯೋಚನೆಯಲ್ಲಿದೆ.
ಫೇಕ್ ಕಾಲ್ ನಂಬರ್‌ಗಳನ್ನು ಬ್ಲಾಕ್ ಮಾಡಿದ ನಂತರವೂ ಸ್ಪ್ಯಾಮರ್‌ಗಳು ಹೊಸ ಸಂಖ್ಯೆಯನ್ನು ಬಳಸುವುದು ಹೆಚ್ಚಾಗಿದೆ. ಹೀಗೆ ಹೊಸ ಸಂಖ್ಯೆಗಳಿಗೆ ಬದಲಾಗುವುದರ ಜೊತೆಗೆ ಇನ್ನಷ್ಟು ಸ್ಪ್ಯಾಮ್ ಕಾಲ್‌ಗಳ ಮೂಲಕ ಕಿರಿಕಿರಿ ನೀಡುತ್ತಿರುವ ಪ್ರಮಾಣವು ಕೂಡ ಜಾಸ್ತಿಯಾಗಿದೆ. ಪ್ರಾಕ್ಸಿ ಸರ್ವರ್‌ಗಳನ್ನು ಬಳಸಿದ ನಂತರ ಮತ್ತೊಂದು ಸಂಖ್ಯೆಯನ್ನು ಬಳಸಲು ಪ್ರಾರಂಭಿಸಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಬೇಕಾದರೆ ಏಕೀಕೃತ ಕೆವೈಸಿ ಸಿಸ್ಟಂ ಸೂಕ್ತ ಅನ್ನೊದು ಟ್ರಾಯ್‌ನ ವಾದವಾಗಿದೆ.
ಈ ಹೊಸ ಅನ್ವೇಷಣೆಯಿಂದ ಎಲ್ಲಾ ಟೆಲಿಕಾಂ ಕಂಪೆನಿಗಳು ತಮ್ಮ ಗ್ರಾಹಕರ ಕೆವೈಸಿಯನ್ನು ಇದರಲ್ಲಿ ಪರಿಶೀಲಿಸಲು ಸಾಧ್ಯವಿದೆ. ಇದರಿಂದ ಹೊಸ ಸಂಖ್ಯೆಗೆ ಬದಲಾಗುವ ಸ್ಪ್ಯಾಮರ್‌ಗಳನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ. ಹಾಗಾಗಿ ನಕಲಿ ಕರೆ ಮಾಡುವವರು ಮತ್ತು ಸ್ಪ್ಯಾಮರ್‌ಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಬಳಸಲು ಕಂಟ್ರೋಲ್ ಸೇವಾ ಪೂರೈಕೆದಾರರೊಂದಿಗೆ ಕೆಲಸ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಪ್ರಸ್ತುತ ಭಾರತದಲ್ಲಿ ಜಾರಿ ಇರುವ ಹೊಸ ಟೆಲಿಕಾಂ ಮಸೂದೆಯು ವಂಚನೆಗಳು ಮತ್ತು ಅಪರಾಧ ಚಟುವಟಿಕೆಗಳನ್ನು ಪರಿಶೀಲಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಹಾಗಾಗಿ ಟೆಲಿಕಾಂ ಸೇವೆಗಳನ್ನು ಪಡೆಯಲು ಸುಳ್ಳು ಗುರುತನ್ನು ನೀಡುವವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸಿದೆ. ಅಲ್ಲದೆ ಇಂಟರ್‌ನೆಟ್ ಕರೆ ಮತ್ತು ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಕಳುಹಿಸಲಾದ ಕರೆಗಳು ಮತ್ತು ಸಂದೇಶಗಳಿಗೆ KYC ಅನ್ನು ಅನ್ವಯಿಸುವಂತೆ ಈ ಹೊಸ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನು ಮುಂದೆ ಯಾವುದೇ ನಕಲಿ ಕರೆಗಳು ಬಂದರೆ ಹೆದರುವ ಅಗತ್ಯವಿಲ್ಲ. ಟ್ರಾಯ್ ನ ಹೊಸ ಪ್ರಸ್ತಾಪ ಜಾರಿಯಾದಂತೆ, ನಕಲಿ ಕರೆಗಳನ್ನು ಪರಿಶೀಲನೆ ಯಾವುದರಿಂದ ಕಿರಿಕಿರಿ ಅನುಭವಿಸುವುದು ತಪ್ಪುತ್ತದೆ.