Big Offer : Flipkart | 800 ರೂಪಾಯಿಗೆ ಸಿಗಲಿದೆ ಈ ಸ್ಮಾರ್ಟ್ ಫೋನ್

ಪ್ರತಿ ಮನೆಯಲ್ಲೂ ದಸರಾದ ರಂಗು ಕಳೆ ಕಟ್ಟಿದ್ದು, ಈ ನಡುವೆ ಮೊಬೈಲ್ ಫೋನ್ ಖರೀದಿಸುವ ಆಲೋಚನೆ ಯಲ್ಲಿ ಇರುವವರಿಗೆ ಉತ್ತಮ ಬಂಪರ್ ಕೊಡುಗೆಗಳು ಲಭ್ಯವಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್ ಕೂಡ ಇದ್ದು, ಇಂದಿನಿಂದ ಬಿಗ್ ದಸರಾ ಸೇಲ್ ಆರಂಭವಾಗಿದೆ. ಈ ಸೇಲ್ ಅಕ್ಟೋಬರ್ 8 ರವರೆಗೆ ಲಭ್ಯವಿದ್ದು, ಆಕರ್ಷಕ ಬಹುಮಾನ , ಗಿಫ್ಟ್ ವೌಚರ್ ಗಳು ಜೊತೆಗೆ ಫ್ಲಿಪ್‌ಕಾರ್ಟ್ ಮಾರಾಟದ ಭಾಗವಾಗಿ, Redmi ಸ್ಮಾರ್ಟ್‌ಫೋನ್‌ನಲ್ಲಿ ಭಾರಿ ರಿಯಾಯಿತಿಯನ್ನು ಕೂಡ ಪಡೆಯಬಹುದಾಗಿದೆ.

ಕಡಿಮೆ ಬೆಲೆಯಲ್ಲಿ ಆಫರ್‌ ಬೆಲೆಗೆ ಖರೀದಿಸುವ ಸದವಕಾಶದ ಬಾಗಿಲನ್ನು ಫ್ಲಿಪ್​ಕಾರ್ಟ್​ ತೆರೆದಿಟ್ಟಿದ್ದು, ಸ್ಮಾರ್ಟ್​ಫೋನ್​ಗಳ ಮೇಲೆ ಭಾರಿ ರಿಯಾಯಿತಿಯನ್ನು ಗ್ರಾಹಕ ಪಡೆಯಬಹುದು.ಕಡಿಮೆ ಬಜೆಟ್ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ನೀವು ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಕಡಿಮೆ ಬೆಲೆಗೆ ಅದರಲ್ಲೂ ಆಫರ್‌ ಬೆಲೆಗೆ ಖರೀದಿಸುವ ಅವಕಾಶವನ್ನು ಫ್ಲಿಪ್​ಕಾರ್ಟ್​ ತೆರೆದಿಟ್ಟಿದೆ. ಸ್ಮಾರ್ಟ್​ಫೋನ್​ಗಳ ಮೇಲೆ ಭಾರಿ ರಿಯಾಯಿತಿ ಪಡೆಯಲು ಅಕ್ಟೋಬರ್ 8ರವರೆಗೆ ಫ್ಲಿಪ್ ಕಾರ್ಟ್ ಅವಕಾಶ ಕಲ್ಪಿಸಿದೆ.

Redmi 10 ಸ್ಮಾರ್ಟ್‌ಫೋನ್‌ನಲ್ಲಿ ಆಕರ್ಷಕ ಡೀಲ್‌ಗಳು ಲಭ್ಯವಿದ್ದು, ಈ ಫೋನಿನ ಮೂಲ ಬೆಲೆ 14,999 ರೂಪಾಯಿಯಾಗಿದ್ದು, ಆದರೆ ದಸರಾ ಆಫರ್ ನ ಸಲುವಾಗಿ 8,999 ರೂಪಾಯಿಗೆ ಖರೀದಿಸಬಹುದಾಗಿದೆ. ಬರೋಬ್ಬರಿ, ಶೇಕಡಾ 40 ರಷ್ಟು ರಿಯಾಯಿತಿಯಲ್ಲಿ ಮೊಬೈಲ್ ಖರೀದಿ ಮಾಡಬಹುದಾಗಿದೆ.
ಇದಲ್ಲದೆ, ಬ್ಯಾಂಕ್ ಆಫರ್ ಕೂಡ ಇದ್ದು, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ರೂ. 500 ರಿಯಾಯಿತಿ ಪಡೆಯಬಹುದಾಗಿದೆ. ಇದರ ಜೊತೆಗೆ ರೂ.5 ಸಾವಿರಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಈ ತ್ವರಿತ ರಿಯಾಯಿತಿ ಲಭ್ಯವಿದೆ.

ಇದರೊಂದಿಗೆ ರೆಡ್ಮಿ ಫೋನ್ ಬೆಲೆ ರೂ. 8,499 ಕಡಿಮೆಯಾಗಲಿದೆ.
Redmi 10 ಸ್ಮಾರ್ಟ್‌ಫೋನ್‌ನಲ್ಲಿ ಮಗದೊಂದು ಕೊಡುಗೆಯನ್ನು ಪಡೆಯಬಹುದಾಗಿದ್ದು, ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು, ಈ ಫೋನಿನ ಖರೀದಿಯ ಮೇಲೆ ಒಟ್ಟು ರೂ. 8,450 ವಿನಿಮಯ ರಿಯಾಯಿತಿಯನ್ನು ಪಡೆಯಬಹುದು.
4 GB RAM, 64 GB ಮೆಮೊರಿ, Qualcomm Snapdragon 680 ಪ್ರೊಸೆಸರ್, 50 MP ಡ್ಯುಯಲ್ ಕ್ಯಾಮೆರಾ, 5 MP ಮುಂಭಾಗದ ಕ್ಯಾಮರಾ, 6.7 ಇಂಚಿನ HD Plus ಡಿಸ್ಪ್ಲೇ, 6000 mAh ಬ್ಯಾಟರಿ, 18 W ಸ್ಪೀಡ್ ಚಾರ್ಜಿಂಗ್ ವೈಶಿಷ್ಟ್ಯಗಳನ್ನು ಒಳಒಳಗೊಂಡಿದ್ದು, ಈ ಫೋನ್ ಅನ್ನು EMI ನಲ್ಲಿಯೂ ಕೂಡ ಖರೀದಿಸಬಹುದಾಗಿದೆ.

ಕಡಿಮೆ EMI ಆಯ್ಕೆಯನ್ನು ಆಯ್ಕೆ ಮಾಡಿ, ತಿಂಗಳಿಗೆ ರೂ 808 ಪಾವತಿಸಿ ಈ ಫೋನ್ ಅನ್ನು ಖರೀದಿಸುವ ಸುವರ್ಣ ಅವಕಾಶವಿದೆ. ಇದು 12 ತಿಂಗಳ EMI ಗೆ ಅನ್ವಯವಾಗುತ್ತದೆ. ಹಾಗೆಯೇ, 6 ತಿಂಗಳ ಅದೇ ಅವಧಿಯಲ್ಲಿ ಪಾವತಿ ಮಾಡುವುದಾದರೆ, ತಿಂಗಳಿಗೆ ರೂ. 1562, 9 ತಿಂಗಳಿಗೆ EMI ಆದರೆ ತಿಂಗಳಿಗೆ ರೂ. 1060 ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಇಲ್ಲದವರೂ ಕೂಡ ಈ ಫೋನ್ ಅನ್ನು ಇಎಂಐನಲ್ಲಿ ಖರೀದಿಸಬಹುದಾಗಿದ್ದು, ಫ್ಲಿಪ್​ಕಾರ್ಟ್ ಪೇ ಲೇಟರ್ ಸೌಲಭ್ಯವನ್ನು ಬಳಸಬಹುದಾಗಿದೆ. ಈ ಆಯ್ಕೆಯನ್ನು ಬಳಸಿದರೆ ತಿಂಗಳಿಗೆ ರೂ. 851 ಫೋನ್ ಖರೀದಿಸಬಹುದು. ಇದು 12 ತಿಂಗಳ EMI ಗೆ ಅನ್ವಯಿಸುತ್ತದೆ.
ಇದನ್ನು 9 ತಿಂಗಳ ಕಾಲ ತಿಂಗಳು ಕಟ್ಟುವುದಾದರೆ, ತಿಂಗಳಿಗೆ ರೂ. 1103, 6 ತಿಂಗಳು ಆದರೆ ತಿಂಗಳಿಗೆ ರೂ. 1607 ಪಾವತಿಸಬೇಕು. 3 ತಿಂಗಳಿಗೆ ತಿಂಗಳಿಗೆ ರೂ.3,121 ಪಾವತಿಸಬೇಕಾಗುತ್ತದೆ. ಕಡಿಮೆ ಬಜೆಟ್ ನಲ್ಲಿ ಉತ್ತಮ ಆಫರ್ ನಲ್ಲಿ ಮೊಬೈಲ್ ಖರೀದಿ ಮಾಡಿ, ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

Leave A Reply

Your email address will not be published.