ಎಲ್‍ಇಡಿ ಟಿವಿ ಸ್ಫೋಟ : ಬಾಲಕ ಸಾವು | ಸ್ಫೋಟದ ಭೀಕರತೆಗೆ ಮನೆಯ ಗೋಡೆ ಛಿದ್ರ

ಎಲ್ ಇ ಡಿ ಟಿವಿ ಸ್ಫೋಟಗೊಂಡು, ಅದರ ತೀವ್ರತೆಗೆ 16 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆಗೆ ಉತ್ತರ ಪ್ರದೇಶದ ಗಾಝಿಯಾಬಾದ್ ಸಾಕ್ಷಿಯಾಗಿದೆ. ಮಾತ್ರವಲ್ಲ ಬಾಲಕನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ. ಇನ್ನುಳಿದ ಇತರ ಗಾಯಾಳುಗಳನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಬಾಲಕನನ್ನು ಓಮೇಂದ್ರ ಎಂದು ಗುರುತಿಸಲಾಗಿದೆ.

ಈ ಸ್ಫೋಟದ ತೀವ್ರತೆಯ ಪರಿಣಾಮ ಇಡೀ ಮನೆಯೇ ನಡುಗಿದ್ದು, ಮನೆಯ ಗೋಡೆಗಳು ಕುಸಿದಿದೆ. ಸ್ಫೋಟದ ತೀವ್ರತೆಗೆ ಕಾಂಕ್ರೀಟ್ ಗೋಡೆಯೇ ಛಿದ್ರಗೊಂಡಿದೆ.

ಮಧ್ಯಾಹ್ನ ಮನೆಯಲ್ಲಿ ಊಟ ಮಾಡುವಾಗ ಈ ದಾರುಣ ಘಟನೆ ಸಂಭವಿಸಿದೆ. ಟಿವಿಯ ಚೂರುಗಳು ಸಿಡಿದು ಮೃತ ಬಾಲಕನ ಮುಖ, ಎದೆ ಮತ್ತು ಕುತ್ತಿಗೆಗೆ ತರಚಿ ಗಾಯಗಳಾಗಿವೆ. ಆತನ ಸ್ನೇಹಿತ ಕರಣ್ (16) ಅವರಿಗೂ ಇದೇ ರೀತಿಯ ಗಾಯಗಳಾಗಿದ್ದು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

Leave A Reply

Your email address will not be published.