ಉತ್ತರಾಖಂಡ : ಹಿಮಪಾತದಲ್ಲಿ ಸಿಲುಕಿದ 20 ಕ್ಕೂ ಹೆಚ್ಚು ಪರ್ವತಾರೋಹಿಗಳು
ಉತ್ತರಾಖಂಡದ ಪರ್ವತ ಶ್ರೇಣಿಯೊಂದರಲ್ಲಿ ಹಿಮಪಾತ ಸಂಭವಿಸಿ, ಪರ್ವತಾರೋಹಣ ಕೈಗೊಂಡ 28 ರಷ್ಟು ಮಂದಿ ಮಂಜಿನೊಳಗೆ ಸಿಲುಕಿರುವ ಘಟನೆ ನಡೆದಿದೆ. 28 ರಲ್ಲಿ ಈಗಾಗಲೇ 7 ಮಂದಿಯನ್ನು ರಕ್ಷಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸಿಲುಕಿದವರೆಲ್ಲರೂ ಮಹಿಳೆಯರಾಗಿದ್ದು ಉತ್ತರ ಕಾಶಿಯ ನೆಹರೂ ಪರ್ವತಾರೋಹಣ ಇನ್ ಸ್ಟಿಟ್ಯೂಟ್ ನವರಾಗಿದ್ದಾರೆ ಎಂದು ತಿಳಿದು ಬಂದಿದೆ.
ʼಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಸೇನೆ ಮತ್ತು ಐಟಿಬಿಪಿ ತಂಡಗಳ ಮೂಲಕ ಕ್ಷಿಪ್ರ ಕಾರ್ಯಾಚರಣೆ ಮುಂದುವರಿದಿದೆ. ದ್ರೌಪದಿ ದಂಡ 2 ಎಂಬ ಪರ್ವತ ಕೋಡಿನ ಬಳಿ ಈ ಹಿಮಪಾತ ನಡೆದಿದೆʼ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ತಿಳಿಸಿದ್ದಾರೆ.
ಅದೇ ರೀತಿ ಭಾರತೀಯ ವಾಯು ಸೇನೆಗೆ ಕೂಡಲೇ ಸ್ಪಂದಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆದೇಶಿಸಿದ್ದಾರೆ.