‘ PFI ಭಾಗ್ಯ’ ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ ‘ ಸಿದ್ದರಾಮಯ್ಯನವರ ಎಳೆತಂದು ‘ಪೇ ಸಿಎಂ’ ಗೆ ಟಕ್ಕರ್ !

ಬೆಂಗಳೂರು: ಬಿಜೆಪಿಯ ಮೇಲೆ ಪೇ ಸಿಎಂ ಪೋಸ್ಟರ್ ಅಭಿಯಾನಕ್ಕೆ ಟಕ್ಕರ್ ಕೊಡಲಿ ಬಿಜೆಪಿ ಸಿದ್ದವಾಗಿದೆ. ಅದು ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಎಳೆದು ತಂದು ‘ ಪಿಎಫ್ಐ ಭಾಗ್ಯ’ (PFI ಭಾಗ್ಯ) ಎಂಬ ಪೋಸ್ಟರ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಅನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೊಕ್, ಸಿದ್ದರಾಮಯ್ಯ ಅವರು ಅವರ ಪತ್ರಿಕಾ ಹೇಳಿಕೆಯಲ್ಲಿ PFI ನಿಷೇಧದ ಬಗ್ಗೆ ಮೊದಲೇ ವರದಿ ನೀಡಿದ್ದೆ ಎಂದಿದ್ದಾರೆ. ನಾನು ಹೇಳಿದ ಬಳಿಕ ಬ್ಯಾನ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇದೇ ಸಿದ್ದರಾಮಯ್ಯ ಬರುವಾಗ PFI ಮತ್ತು KFD ಬಗ್ಗೆ 1,600 ಕೇಸ್ ಹಾಕಿದ್ದರು. ಪೊಲೀಸರ ಮೇಲೆ, ಸಾರ್ವಜನಿಕರ ಮೇಲೆ ಹಲ್ಲೆ ಅಂತ ಕೇಸು ದಾಖಲಾಗಿತ್ತು.10-12-2012 ರಲ್ಲಿ ತನ್ವೀರ್ ಸೇಠ್ ಪತ್ರ ಬರೆದು PFI ನವರು ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ವಿನಂತಿ ಮಾಡಿದ್ದರು.

ಕೇಸ್ ವಾಪಸ್ ಪಡೆಯಬೇಕು ಅಂತ ಮನವಿ ಮಾಡುತ್ತಾರೆ. ತಸ್ಲೀಮಾ ನಸ್ರೀನ್ ಪುಸ್ತಕದ ಬಗ್ಗೆ ಇರೋ ಕೇಸ್ ಅದು. ಕಾಂಗ್ರೆಸ್ ನವರು ಅದನ್ನು ಮಾನ್ಯ ಮಾಡಲು ಅಂದಿನ ಡಿಜಿ -ಐಜಿ ಸರ್ಕಾರಕ್ಕೆ ಸಲಹೆ ಕೇಳುತ್ತಾರೆ. ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದು ಅಂತ ಪೋಲಿಸ್ ಇಲಾಖೆ ರಿಪೋರ್ಟ್ ಕೊಡುತ್ತದೆ. ಅಲ್ಲದೆ ಲಾ ಕಮಿಟಿ ಕೂಡ ವಾಪಸ್ ಪಡೆಯುವುದು ಸಮಾಜಕ್ಕೆ ಮಾರಕ ಎಂದು ವರದಿ ಕೊಡ್ತಾರೆ ಎಂದು ಆರೋಪಿಸಿದರು. ಆದರೂ ಸಿದ್ದರಾಮಯ್ಯ ಈ ಎಲ್ಲಾ 1,600 ಜನ ವಿಧ್ವಂಸಕ ಕೃತ್ಯ ಎಸಗಿದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕೆಲಸ ಮಾಡ್ತಾರೆ. ಈಗ ಹೇಳಿ, ಸಿದ್ದರಾಮಯ್ಯ ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿಲ್ವಾ ಎಂದು ಕಂದಾಯ ಸಚಿವ ಆರ್. ಅಶೋಕ್‌ ಅವರು ಪ್ರಶ್ನಿಸಿದ್ದಾರೆ.

ಇದೇ PFI ಭಾಗ್ಯದ ಸಿದ್ದರಾಮಯ್ಯ, ರಾಜ್ಯದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಕುಟ್ಟಪ್ಪ, ರುದ್ರೇಶ್, ಮಡಿವಾಳ ಇವರ ಹತ್ಯೆ ಬಳಿಕ ಕೇಸ್ ಹಾಕಲು ಹಿಂಜರಿದಿದ್ದಾರೆ. ಇದೆಲ್ಲವನ್ನೂ ನೋಡಿದರೇ ಕಾಂಗ್ರೆಸ್ ಈಗ ಸೂತಕದ ಮನೆಯಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಇವರಿಗೆ ವಿದೇಶಿ ಟ್ರೈನಿಂಗ್ ನೀಡಲಾಗಿದೆ ಎನ್ನುವ ಮಾಹಿತಿ ಅಧಿಕೃತವಾಗಿದೆ. ಬೈಕಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು, ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಎಂದು ಪಿಎಫ್ಐ ಟ್ರೈನಿಂಗ್ ನೀಡಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

PFI ನವರು ಇರುವ 175 ಕೇಸ್ ಸಿದ್ದರಾಮಯ್ಯ ಹಲವು ಭಾಗ್ಯಗಳನ್ನು ನೀಡಿದ್ದಾರೆ. PFI ಭಾಗ್ಯ ಸಹ ನೀಡಿದ್ದಾರೆ ಎನ್ನುವುದು ಈಗ ಅರ್ಥವಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಪೋಸ್ಟರ್ ವಾರ್ ಅಂತು ಮುಂದುವರೆದಿದೆ.

Leave A Reply

Your email address will not be published.