ಬಂಟ್ವಾಳ : ‘ಚಡ್ಡಿಗಳೇ ಎಚ್ಚರ, PFI ನಾವು ಮರಳಿ ಬರುತ್ತೇವೆ’ |`RSS’ಗೆ ಎಚ್ಚರಿಕೆ ಸಂದೇಶ!

ಬಂಟ್ವಾಳ : ದೇಶಾದ್ಯಂತ ಪ್ಯಾಪುಲರ್ ಇತ್ತೀಚೆಗಷ್ಟೇ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) 5 ವರ್ಷಗಳ ಕಾಲ ನಿಷೇಧ ಮಾಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಿಡಿಗೇಡಿಗಳು ರಸ್ತೆ ಮೇಲೆ ಆರ್ ಎಸ್ಎಸ್ ಗೆ ಎಚ್ಚರಿಕೆ ಸಂದೇಶವೊಂದನ್ನು ಬರೆದಿದ್ದಾರೆ.

ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ರಸ್ತೆ ಮೇಲೆ ಬರಹ ಬರೆದು ಆರ್ ಎಸ್ ಎಸ್ ಗೆ ಎಚ್ಚರಿಕೆ ನೀಡಿದ್ದಾರೆ. ಚಡ್ಡಿಗಳೇ ಎಚ್ಚರ, ಪಿಎಫ್ ಐ ನಾವು ಮರಳಿ ಬರುತ್ತೇವೆ ಎಂದು ಬರೆದು ಪರಾರಿಯಾಗಿದ್ದಾರೆ. ಈ ಕುರಿತು ಸ್ಥಳೀಯರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ದೇಶಾದ್ಯಂತ ಕೇಂದ್ರ ಸರ್ಕಾರ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ಬ್ಯಾನ್ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೆ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ.

Leave A Reply

Your email address will not be published.