‘ಲಿಪ್ ಲಾಕ್’ ಮಾಡುವ ಮೂಲಕ ಜನರಿಗೆ ಶಾಕ್ ಕೊಟ್ಟ ಚಂದನ್ ನಿವಿ ಜೋಡಿ | ವಿಡಿಯೋ ವೈರಲ್

ಬಿಗ್ ಬಾಸ್‌ ಮೂಲಕ ಜನರಿಗೆ ಚಿರಪರಿಚಿತರಾಗಿರುವ ಬಾರ್ಬಿ ಡಾಲ್ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಮತ್ತು ಸಂಗೀತದ ಜೊತೆಗೆ ಇತ್ತೀಚೆಗೆ ನಟನೆಯ ಮೂಲಕ ರಂಜಿಸುತ್ತಿರುವ ಚಂದನ್ ಶೆಟ್ಟಿ ನಿಜ ಜೀವನದಲ್ಲೂ ಕೂಡ ದಂಪತಿಯಾಗಿ ಅಭಿಮಾನಿಗಳಿಗೆ ಖುಷಿ ತಂದಿದ್ದು ಹಳೆ ವಿಚಾರ. ಅದಲ್ಲದೇ, ಈ ಜೋಡಿಗೆ ನೂರಾರು ಫೋಲ್ಲೇವರ್ಸ್ ಕೂಡ ಇದ್ದಾರೆ.

 

ಇದೀಗ ಚಂದನ್ ಶೆಟ್ಟಿ ಲಿಪ್ ಲಾಕ್ ಮಾಡುವ ವಿಡಿಯೋ ಸಾಕಷ್ಟು ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಸರ್ಪ್ರೈಸ್ ನೀಡುವುದರಲ್ಲಿ ಎತ್ತಿದ ಕೈ ಆಗಿರುವ ಚಂದನ್ ಶೆಟ್ಟಿ ತನ್ನ ಮನದರಿಸಿಗೆ ಮೊತ್ತ ಮೊದಲ ಬಾರಿಗೆ ಎಲ್ಲರೆದುರು ಪ್ರಪೋಸ್ ಮಾಡಿ ಉಂಗುರ ತೊಡಿಸಿ, ಕೊನೆಗೆ ಸಪ್ತಪದಿ ತುಳಿದು ಜೊತೆಯಾಗಿದ್ದು ತಿಳಿದ ವಿಷಯವೇ!!!

ಕಲರ್ಸ್ ವಾಹಿನಿಯ ರಿಯಾಲಿಟಿ ಶೋಗಳಲ್ಲಿಯೂ ಬಿಝಿ ಯಾಗಿದ್ದ ಚೆಲುವೆ ನಿವೇದಿತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು ಅಭಿಮಾನಿಗಳನ್ನು ರೀಲ್ಸ್ ಮಾಡುತ್ತಾ ರಂಜಿಸುತ್ತಿದ್ದು , ಈ ನಡುವೆ ಲವ್ ಕಪಲ್ ಗಳು ಜೋಡಿಯಾಗಿ ಕೆಲ ರೀಲ್ಸ್ ಮಾಡಿ ಅಭಿಮಾನಿಗಳಿಗೆ ಖುಷಿ ತರುವುದು ಸಾಮಾನ್ಯ.

ಆದರೆ , ಚಂದನ್ ಮತ್ತು ನಿವಿ ಜೋಡಿ ಇದೀಗ ಗಲ್ಲಿ ಬಾಯ್ ಹಾಡಿಗೆ ರೀಲ್ಸ್ ಮಾಡಿದ್ದಾರೆ. ನೋ ಎನ್ನದೇ ಯೆಸ್ ಅಂದರೆ ಅಫಿಶಿಯಲ್ ಆಗಿ ಪಪ್ಪಿ ಕೊಡುವೆ ಎಂದು ಚಂದನ್ ಕೂಡ ನಿವಿಗೆ ಲಿಪ್‌ಲಾಕ್ ಮಾಡಿ ಅವರ ಡಾರ್ಲಿಂಗ್ ನಿವೇದಿತಾ ಗೌಡ ಜೊತೆಗೆ ಅಭಿಮಾನಿಗಳಿಗೂ ಶಾಕ್ ನೀಡಿದ್ದಾರೆ.

ಇತ್ತೀಚೆಗೆ ಶ್ರೇಯಸ್ ಮಂಜು ನಟನೆಯ ರಾಣಾ ಚಿತ್ರದ `ಗಲ್ಲಿ ಬಾಯ್’ ಹಾಡು ಬರೆದಿದ್ದು, ಈ ಸಾಂಗ್ ಗೆ ಒಳ್ಳೆ ಪ್ರತಿಕ್ರಿಯೆಯ ದೊರೆತು ಅತಿ ಹೆಚ್ಚು ವ್ಯೂ ಕೂಡ ಸಿಕ್ಕಿದ್ದು, ಇದೀಗ ಈ ಹಾಡಿಗೆ ಚಂದನ್ ದಂಪತಿ ಹೆಜ್ಜೆ ಹಾಕಿದ್ದಾರೆ. ಮುದ್ದಾದ ಜೋಡಿಯ ವಿಡಿಯೋ ನೋಡಿ ಕೆಲ ಅಭಿಮಾನಿಗಳು ಫುಲ್ ಖುಷ್ ಆಗಿದ್ರೆ, ಮತ್ತೆ ಕೆಲ ಅಭಿಮಾನಿಗಳು ಗರಂ ಆಗಿದ್ದಾರೆ.

https://www.instagram.com/reel/CjFlG1apRWI/?utm_source=ig_web_copy_link

Leave A Reply

Your email address will not be published.