Hyperacidity Health Tips : ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಟ್ರಬಲ್ ಹೆಚ್ಚಾಗಿ ಕಂಡುಬರುತ್ತಿದ್ದು, ಮನೆಯಲ್ಲೆ ತಯಾರಿಸಿದ ಆಹಾರಕ್ಕಿಂತ ರೋಡ್ ಸೈಡ್ನ ಜಂಕ್ ಫುಡ್,ಬೇಕರಿ ಉತ್ಪನ್ನಗಳನ್ನು ತಿನ್ನುವುದೇ ಹೆಚ್ಚಾಗಿದೆ. ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗು ಸಮಸ್ಯೆ ಹೆಚ್ಚಾಗಿ ಕಂಡಬರುತ್ತಿದೆ.

ಪಿತ್ತವನ್ನು ಪ್ರಕೋಪ ಮಾಡುವಂತಹ ಪದಾರ್ಥಗಳನ್ನು ತಿಂದಾಗ ಪಾಚಕ ಪಿತ್ತದಲ್ಲಿ ಆಮ್ಲದ ಭಾವವು ಹೆಚ್ಚಾಗುವುದರಿಂದ ಆಮ್ಲಪಿತ್ತವು ಉಂಟಾಗುತ್ತದೆ. ಇದನ್ನು ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ (Acid reflux, Hyperacidity & Acid peptic disease) ಅಂತಲೂ ಕರೆಯುತ್ತಾರೆ. ಆಮ್ಲಪಿತ್ತವನ್ನು ಉರ್ದ್ವಗ ಆಮ್ಲಪಿತ್ತ ಮತ್ತು ಅಧೋಗ ಆಮ್ಲಪಿತ್ತ ಎಂದು ಎರಡು ವಿಧವಾಗಿ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಳಸಿದ ಆಹಾರ ಪದಾರ್ಥಗಳ ಸೇವನೆ, ಅತಿಯಾದ ಹುಳಿ/ ಖಾರದ ಆಹಾರ ಸೇವನೆ, ಕರಿದ ಪದಾರ್ಥಗಳ ಸೇವನೆಯಿಂದ ದೇಹದಲ್ಲಿನ ಪಿತ್ತ, ಉಷ್ಣತೆಯು ಏರಿಕೆಯಾಗಿ ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗಿನಂತಹ ಲಕ್ಷಣಗಳು ಕಂಡಬರುತ್ತಿವೆ. ನಮ್ಮ ಆರೋಗ್ಯಕಾರಿ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಮನೆಯಲ್ಲೆ ಸರಳ ವಿಧಾನಗಳನ್ನು ಅನುಸರಿಸಿದರೆ ಗ್ಯಾಸ್ಟ್ರಿಕ್ ಟ್ರಬಲ್ ನಿಂದ ಪರಿಹಾರ ಕಂಡುಕೊಳ್ಳಬಹುದು.

ಪ್ರತಿದಿನ ಖಾಲಿ ಹೊಟ್ಟೆಗೆ ಎರಡು ಮೂರು ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಗೆ ಹೊಟ್ಟೆಯಲ್ಲಿ ಜಗಿದು ತಿನ್ನುತ್ತಾ ಬಂದರೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ದೂರವಾಗುತ್ತದೆ. ಹೊಟ್ಟೆನೋವು, ಗ್ಯಾಸ್ ಅಥವಾ ಅಸಿಡಿಟಿಯ ಅನುಭವವಾದಾಗ ಬಾಯಿಯಲ್ಲಿ ಒಂದು ಸಣ್ಣ ತುಂಡು ಶುಂಠಿಯನ್ನು ಇರಿಸಿ ಅದನ್ನು ಜಗಿದು ಇಲ್ಲವೇ ಬಿಸಿ ನೀರಿನಲ್ಲಿ ಶುಂಠಿಯನ್ನು ಜಜ್ಜಿ ಹಾಕಿ ನಂತರ ಸೋಸಿ ಕುಡಿದು ಪರಿಹಾರ ಕಂಡುಕೊಳ್ಳಬಹುದು.

ಒಂದು ಲೋಟ ಬಿಸಿ ನೀರಿಗೆ ಚಿಟಿಕೆಯಷ್ಟು ಹಿಂಗು ಮತ್ತು ಒಂದು ಚಿಟಿಕೆ ಕಪ್ಪು ಉಪ್ಪನ್ನು ಬೆರೆಸಿ ಕುಡಿಯುವುದರಿಂದಲೂ ಕೂಡ ಗ್ಯಾಸ್ ಸಮಸ್ಯೆ ಮತ್ತು ಹೊಟ್ಟೆಯಲ್ಲಿ ನೋವು ನಿವಾರಣೆಯಾಗುತ್ತದೆ.ಒಂದು ಲೋಟ ಕುದಿಯುವ ನೀರಿಗೆ, ಒಂದು ಚಮಚ ಆಗುವಷ್ಟು ಸೋಂಪು ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಮೇಲೆ ಸೋಸಿ ಕೊಂಡು ಕುಡಿಯುತ್ತಾ ಬಂದರೆ, ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುವುದಲ್ಲದೆ, ಹೊಟ್ಟೆಯ ಭಾಗದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆದು, ಅಜೀರ್ಣ ಸಮಸ್ಯೆ ದೂರವಾಗಿ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಕಡಿಮೆ ನೀರು ಕುಡಿಯುವುದರಿಂದ ರಾತ್ರಿಯಲ್ಲಿ ಗ್ಯಾಸ್ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ, ಕನಿಷ್ಟ 10-12 ಗ್ಲಾಸ್ ನೀರನ್ನು ಕುಡಿಯಬೇಕು. ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಮತ್ತು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ನೀರು ಸಹಕಾರಿಯಾಗಿದೆ. ಗ್ಯಾಸ್ಟ್ರಿಕ್ ಉಂಟಾದರೆ ಅಥವಾ ಎದೆಯುರಿ ಸಮಸ್ಯೆ ಕಂಡು ಬಂದರೆ, ಕೂಡಲೇ ಒಂದು ಚೆನ್ನಾಗಿ ಹಣ್ಣಾಗಿರುವ ಮಾಗಿದ ಬಾಳೆಹಣ್ಣನ್ನು ತಿಂದರೆ ಕಡಿಮೆಯಾಗುತ್ತದೆ.

ಅರ್ಧ ಟೀ ಚಮಚಕ್ಕೆ ಒಂದು ಚಿಟಿಕೆ ಅಸಾಫೋಟಿಡಾ ಮತ್ತು ಒಂದು ಚಿಟಿಕೆ ಉಪ್ಪು (ರಾಕ್ ಸಾಲ್ಟ್) ಸೇರಿಸಿ, ಒಣ ಶುಂಠಿ ಪುಡಿ ಹಾಕಿ 1 ಕಪ್ ಬೆಚ್ಚಗಿನ ನೀರಿನಲ್ಲಿ ಕುಡಿಯುವುದರಿಂದ ಕಿಬ್ಬೊಟ್ಟೆ ನೋವು ಮತ್ತು ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.

1/2 ಚಮಚ ಕೊತ್ತಂಬರಿ ಕಾಳನ್ನು ನೆನಸಿದ ನೀರಿನಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಬೆರೆಸಿ ಸೇವಿಸಬಹುದು. ಊಟ ಮುಗಿದ ನಂತರ ಕಾಲು ಚಮಚ ಜೀರಿಗೆಯನ್ನು ಸೇವಿಸಬಹುದು.ಅರ್ಧ ಚಮಚ ಜೇಷ್ಠ ಮಧು ಅಥವಾ ನೆಲ್ಲಿಕಾಯಿ ಪುಡಿವನ್ನು ನೀರಿನಲ್ಲಿ ಕಲಸಿ ಸೇವಿಸಬಹುದು.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನಿಂಬೆ ಪಾನಕದಲ್ಲಿ ಅರ್ಧದಿಂದ ಒಂದು ಚಮಚ ಅಡಿಗೆ ಸೋಡಾವನ್ನು ಬೆರೆಸಿ ಕುಡಿದರೆ ಗ್ಯಾಸ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಜೀರ್ಣತೆ ಸಮಸ್ಯೆ, ಹಿಡಿದಿಟ್ಟುಕೊಂಡಿರುವ ಗ್ಯಾಸ್ ಮತ್ತು ಹೊಟ್ಟೆಯಲ್ಲಿ ಗುಳುಗುಳು ಶಬ್ದ ಬರುವಂತ ಸಮಸ್ಯೆಗೆ ಚಕ್ಕೆಯ ಟೀ ಕೂಡ ಉತ್ತಮ ಪರಿಣಾಮ ಮಾಡುತ್ತದೆ.ಮೇಲೆ ತಿಳಿಸಿದ ಸರಳ ಮನೆ ಮದ್ದು ಮಾಡಿ ಗ್ಯಾಸ್ ಸಮಸ್ಯೆಗೆ ಪರಿಹಾರ ಪಡೆಯಬಹುದು.

Leave A Reply

Your email address will not be published.