ಡೆಲ್ಲಿಯಲ್ಲಿ ಕುಳಿತು ಸ್ವೀಡನ್‍ನಲ್ಲಿ ಕಾರು ಚಲಾಯಿಸಿದ ಮೋದಿ, ಇದು ಹೇಗೆ ಸಾಧ್ಯ, ಸರ್ ಜಿ ?!

ನವದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಕುಳಿತು ಸ್ವೀಡನ್‍ನಲ್ಲಿ ಕಾರು ಚಲಾಯಿಸಿದ್ದಾರೆ ಪ್ರಧಾನಿ ಮೋದಿ. ಅದು ಹೇಗೆ ಸಾಧ್ಯ ? ಎಲ್ಲಿಯ ಡೆಲ್ಲಿ, ಎಲ್ಲಿಯ ಸ್ವೀಡನ್ ಅಂತೀರಾ, ಇಲ್ಲಿದೆ ನೋಡಿ ರಿಯಲ್ ರಿಪೋರ್ಟ್!

 

ನವ ದೆಹಲಿಯಲ್ಲಿ ನಡೆದ 6ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್‍ನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಯಂಚಾಲಿತ ಮಾರ್ಗದರ್ಶಿ ವಾಹನವನ್ನು (ಎಜಿವಿ) ಟೆಸ್ಟ್ ಡ್ರೈವ್ ಮಾಡಿದ್ದಾರೆ.

ಮೋದಿಯವರು, ಇಂದು ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ)ನಲ್ಲಿ ಎರಿಕ್ಸನ್ ಸ್ಟಾಲ್‍ನಿಂದ ಹೊಸ 5 ಜಿ ತಂತ್ರಜ್ಞಾನ ಸೇವೆಗಳನ್ನು ಬಳಸಿಕೊಂಡು ಸ್ವೀಡನ್‍ನಲ್ಲಿ ರಿಮೋಟ್‍ನಿಂದ ಕಾರನ್ನು ಓಡಿಸಿದರು. ಇದರ ವೀಡಿಯೋವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ದೇಶದಲ್ಲಿ 5ಜಿ ಸೇವೆ ಅನುಷ್ಠಾನಗೊಳಿಸಿದ ಬಳಿಕ ಒಳಾಂಗಣದಲ್ಲಿ ವಿನ್ಯಾಸಗೊಳಿಸಾಗಿರುವ ಗೇಮ್ಸ್‍ನಲ್ಲಿ ರಿಮೋಟ್ ಕಂಟ್ರೋಲರ್ ಮೂಲಕ ವಾಹನವನ್ನು ನಿಯಂತ್ರಿಸಲು ಪ್ರಯತ್ನಿಸಿದರು.

ಭಾರತದಲ್ಲಿ 5ಜಿ ಸೇವೆಗಾಗಿ ಕಾಯುತ್ತಿದ್ದವರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಇಂದು ನಡೆದ ಐಎಂಸಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು 5 ಜಿ ಸೇವೆಗೆ ಚಾಲನೆ ನೀಡಿದರು. ಬೆಳಕಿನ ಹಬ್ಬದ ಹೊತ್ತಿಗೆ 5 ಜಿ ಸೇವೆಗಳನ್ನು ಜನರು ಬಳಸಿ ಅದ ಸೌಲಭ್ಯಗಳನ್ನು ಆನಂದಿಸಬಹುದು. ಏರ್ ಟೆಲ್, ರಿಲಯನ್ಸ್ ,ಜಿಯೋ ಮತ್ತು ಕ್ವಾಲ್‍ಕಾಮ್‍ನಂತಹ ಹಲವಾರು ಉನ್ನತ ಕಂಪನಿಗಳು ತಮ್ಮ 5ಜಿ ಸೇವೆಗಳನ್ನು ಮತ್ತು ಅವುಗಳ ಉನ್ನತ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದರ್ಶಿಸಿದವು.

ಸ್ವಯಂಚಾಲಿತ ಮಾರ್ಗದರ್ಶಿ ವಾಹನ (ಎಜಿವಿ) ಸ್ವಾಯತ್ತ ಮೊಬೈಲ್ ರೋಬೋಟ್(ಎಎಂಆರ್)ಗಿಂತ ಭಿನ್ನವಾಗಿದೆ. ಇದು ಪೋರ್ಟಬಲ್ ರೋಬೋಟ್ ಆಗಿದ್ದು, ಇದರಲ್ಲಿ ನೆಲದ ಮೇಲೆ ಉದ್ದವಾದ ಗೆರೆಗಳಿರುತ್ತದೆ. ವಿಷನ್ ಕ್ಯಾಮೆರಾ, ನ್ಯಾವಿಗೇಷನ್‍ಗಾಗಿ ಲೇಸರ್‍ಗಳನ್ನು ಅಳವಡಿಸಲಾಗಿದ್ದು, ಇದು ಕಾರ್ಖಾನೆ ಅಥವಾ ಗೋದಾಮಿನಂತಹ ದೊಡ್ಡ ಕೈಗಾರಿಕಾ ಕಟ್ಟಡಗಳಲ್ಲಿರುವ ಭಾರವಾದ ವಸ್ತುಗಳನ್ನು ಸಾಗಿಸಲು ಕೈಗಾರಿಕಾ ಅನ್ವಯಿಕೆಗಳಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಭಾರತದಲ್ಲಿ 5ಜಿ ಉದ್ಘಾಟನೆ:
ಬಹು ನಿರೀಕ್ಷಿತ ನೆಟ್‍ವರ್ಕ್ ಕ್ರಾಂತಿ 5ಜಿ ಸೇವೆಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು. 6ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಈವೆಂಟ್‍ನಲ್ಲಿ 5ಜಿ ಸೇವೆಗಳನ್ನು ಉದ್ಘಾಟಿಸಲಾಯಿತು.

ದೆಹಲಿಯ ಪ್ರಗತಿ ಮೈದಾನದಲ್ಲಿ 4 ದಿನಗಳ ಕಾಲ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಡೆಯುತ್ತಿದೆ. 5ಜಿ ಉದ್ಘಾಟನೆಯ ಬಳಿಕ ಭಾರತದಲ್ಲಿ 5ಜಿ ತಂತ್ರಜ್ಞಾನದ ಸಾಮಥ್ರ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‍ಗಳು ಪ್ರಾತ್ಯಕ್ಷಿಕೆ ನೀಡಿದವು. ರಿಲಯನ್ಸ್ ಜಿಯೋ ಮುಂಬೈನ ಶಾಲೆಯೊಂದರ ಶಿಕ್ಷಕರನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದ ಮೂರು ವಿಭಿನ್ನ ಸ್ಥಳಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರ ತರುವ ಮೂಲಕ, ಅವರ ನಡುವಿನ ಭೌತಿಕ ಅಂತರವನ್ನು ಕಡಿಮೆ ಮಾಡುವ ಮೂಲಕ 5ಜಿ ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ಇದು ತೋರಿಸಿದೆ.

Leave A Reply

Your email address will not be published.