ನಾನು ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ- ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

0 11

ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೆಂಡ ಕಾರಿದ್ದಾರೆ. ಸೆಕ್ಸ್ ಆಧರಿಸಿದ ಅಂತಹ ಕಾರ್ಯಕ್ರಮಕ್ಕೆ ನನ್ನನ್ನು ಕರೆಯುವುದೂ ಇಲ್ಲ, ನಾನು ಹೋಗುವುದೂ ಇಲ್ಲ ಎಂದು ಹೇಳಿದ್ದಾರೆ. ಕರಣ್ ಜೋಹಾರ್ ಕೇಳುವ ಪ್ರಶ್ನೆಗಳಿಗೂ ಆಕ್ಷೇಪ ವ್ಯಕ್ತಪಡಿಸಿರುವ ಅಗ್ನಿಹೋತ್ರಿ ಕಾರ್ಯಕ್ರಮಕ್ಕೆ ಹೋಗುವವರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಫಿ ವಿತ್ ಕರಣ್ ಅಂದರೆ ಸೆಕ್ಸ್ ವಿತ್ ಕರಣ್ ಕಾರ್ಯಕ್ರಮಕ್ಕೆ ಹೋಗುವುದು ಎಂದರೆ ನಮ್ಮ ಮರ್ಯಾದೆಯನ್ನು ನಾವೇ ಕಳೆದುಕೊಂಡಂತೆ. ನಮ್ಮ ಸೆಕ್ಸ್ ಲೈಫ್ ಹೇಳಿಕೊಳ್ಳುವುದಕ್ಕೆ ಅಲ್ಲಿಗೆ ಯಾಕೆ ಹೋಗಬೇಕಾ? ಅದು ಹೇಳಿಕೊಳ್ಳುವಂತಹ ವಿಷಯವಾ? ಡೇಟಿಂಗ್, ಲವ್, ಬ್ರೇಕ್ ಅಪ್, ಸೆಕ್ಸ್ ಬರೀ ಇದರ ಸುತ್ತಲೇ ಇಡೀ ಕಾರ್ಯಕ್ರಮ ರೂಪುಗೊಂಡಿರುತ್ತದೆ. ಅದೊಂದು ರೀತಿಯಲ್ಲಿ ಅಸಹ್ಯ ಅನಿಸುವಂಥದ್ದು ಎಂದಿದ್ದಾರೆ ವಿವೇಕ್.

ನನ್ನ ಲೈಫ್ ಸೆಕ್ಸ್ ಸುತ್ತ ಮಾತ್ರ ತಿರುಗುತ್ತಾ ಇಲ್ಲ. ನಾನು ಮಾಡಬೇಕಿರುವ ಕೆಲಸ ತುಂಬಾ ಇದೆ. ಸೆಕ್ಸ್ ಅನ್ನುವುದು ತುಂಬಾ ಮಹತ್ವವಾದದ್ದು ಏನೂ ಇಲ್ಲ. ನಾನು ಸೆಕ್ಸ್ ಅನ್ನು ನನ್ನ ಹೆಂಡತಿ ಜೊತೆ ಎಂಜಾಯ್ ಮಾಡುತ್ತೇನೆ. ನಾನು ಹೆಂಡತಿಗೆ ಮಾಡುತ್ತೇನೆ. ಕರಣ್ ಜೋಹಾರ್ ತರಹ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇಂತಹ ಕಾರಣಗಳಿಗಾಗಿಯೇ ನಾನು ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹೋಗಲಾರೆ ಎಂದು ಹೇಳಿದ್ದಾರೆ ಅಗ್ನಿಹೋತ್ರಿ.

ಕರಣ್ ಜೋಹಾರ್ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಅಗ್ನಿಹೋತ್ರಿ ಕಾಮೆಂಟ್ ಮಾಡಿದ್ದರು. ಬೈಕಾಟ್ ಬ್ರಹ್ಮಾಸ್ತ್ರಕ್ಕೆ ಪರೋಕ್ಷೆವಾಗಿ ಇವರು ಬೆಂಬಲ ಸೂಚಿಸಿದ್ದರು. ಕಂಗನಾ ರಣಾವತ್ ಮಾತಿಗೆ ಬೆಂಬಲವನ್ನೂ ಸೂಚಿಸಿದ್ದರು. ನಂತರ ಬ್ರಹ್ಮಾಸ್ತ್ರಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ನೆಟ್ಟಿಗರನ್ನು ಕೇಳಿದ್ದರು. ಇದೀಗ ಮತ್ತೆ ಕರಣ್ ಬಗ್ಗೆ ಗುಡುಗಿದ್ದಾರೆ. ಸೆಕ್ಸ್ ವಿಚಾರ ಇಟ್ಕೊಂಡು ತಿವಿದಿದ್ದಾರೆ

Leave A Reply