200 ವರ್ಷದ ಹಳೆಯ ಹಲಸಿನ ಮರ | ಎಲ್ಲಿದೆ ಗೊತ್ತೇ?

ಹಲವಾರು ಮರಗಳು ನಾವು ಕಂಡಿರುತ್ತೇವೆ. ಅವುಗಳಿಗೆ ಆಯಸ್ಸು ಕೂಡ ಇರುತ್ತದೆ. ತುಂಬಾ ವರ್ಷಗಳ ತನಕ ಬಾಳುವ ಮರವೆಂದರೆ ಆಲದ ಮರ. ಇದು ಜನರಿಗೆ ನೆರಳನ್ನು ಹಿಡಿಯುವ ಮೂಲಕ ತುಂಬಾ ಉಪಕಾರವಾಗಿದೆ. ಇದೀಗ ಇನ್ನೊಂದು ಮರವು ಇನ್ನೂರು ವರ್ಷಗಳಷ್ಟು ಹಳೆಯವ ಮರ ಎಂಬುದಕ್ಕೆ ಉದಾಹರಣೆಯಾಗಿದೆ.

ಅದುವೇ ಹಲಸಿನ ಮರ. ಹಲಸು ಅಂತ ಹೇಳಿದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಆದರೆ ಆ ಮರದ ಆಯಸ್ಸು ತುಂಬಾ ಕಮ್ಮಿ ಎಂದು ಕೇಳಿದ ಕೂಡಲೇ ಬೇಸರ. ಆದರೆ ತಮಿಳುನಾಡಿನಲ್ಲಿ 200 ವರ್ಷಗಳಷ್ಟು ಹಳೆಯ ಹಲಸಿನ ಮರವು ಪತ್ತೆಯಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಹೌದು. ಫೇಮಸ್ ಆಗಿರುವ ಈ ಮರವು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಕಂಡುಬಂದಿದೆ. ಇದು ಅತಿ ಪುರಾತನವಾದ ಹಲಸಿನ ಮರವಾಗಿದ್ದು, ಇದನ್ನು ತೋರಿಸುವ ಒಂದು ಫೊಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆಯನ್ನು ಪಡೆಯುತ್ತಿದೆ. ನೋಡುವವರೆಲ್ಲರೂ ಈ ವಿಡಿಯೋ ನೋಡಿ ಫುಲ್ ಫಿದಾ ಆಗಿದ್ದಾರೆ.

Leave A Reply

Your email address will not be published.