HEALTH ALEART: ಎಚ್ಚರ..! ಅಪ್ಪಿತಪ್ಪಿಯೂ ಕಾಫಿ ಟೀ ಜತೆ ಸಿಗರೇಟ್ ಸೇದಿದ್ರೆ ನಿಮ್ಮ ದೇಹಕ್ಕೆ ಕುತ್ತು ಗ್ಯಾರಂಟಿ
ಇಂದು ಕಾಫಿ ಮತ್ತು ಟೀ ನಮ್ಮೆಲ್ಲರ ನಿತ್ಯದ ಒಂದು ಅಗತ್ಯವೇ ಆಗಿಬಿಟ್ಟಿವೆ. ಪ್ರತಿಯೊಬ್ಬರೂ ದಿನಕ್ಕೆ ಎರಡು ಮೂರು ಕಪ್ ಟೀ ಅಥವಾ ಕಾಫಿ ಕುಡಿಯುತ್ತೇವೆ. ಇದರಿಂದ ಆರೋಗ್ಯಕ್ಕೇನೂ ತೊಂದರೆ ಇಲ್ಲ, ಬದಲಿಗೆ ಒಳ್ಳೆಯದೇ ಎಂದು ನಾವೆಲ್ಲಾ ಭಾವಿಸಿದ್ದೇವೆ. ಅದರಲ್ಲೂ ಅಪ್ಪಿತಪ್ಪಿ ನೀವೆನಾದರೂ ಕಾಪಿ/ಇಲ್ಲವೇ ಟೀ ಜೊತೆಗೆ ಸಿಗರೇಟ್ ಸೇದುವುದನ್ನು ರೂಢಿಸಿಕೊಂಡಿದ್ರೆ. ಅಪಾಯ ಕಟ್ಟಿಟ್ಟಬುತ್ತಿಯಾಗೋದಂತೂ ಸತ್ಯ. ಯಾಕೆ ಅಂತಾ ಯೋಚಿಸುತ್ತಿದ್ದೀರಾ? ಇಲ್ಲಿದೆ ಓದಿ
ಚಹಾ / ಕಾಫಿಯೊಂಧಿಗೆ ಧೂಮಪಾನ ಮಾಡಿದ್ರೆ ದೇಹವು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಜತೆಗೆ ತುಟಿಗಳು ಮತ್ತು ಕುತ್ತಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಸಹ ಗೋಚರಿಸುತ್ತವೆ. ಹೆಚ್ಚಿನ ಕಾಫಿ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು.
ಸಿಕ್ಕಾಪಟ್ಟೆ ಟೀ & ಕಾಫಿ ಕುಡಿದರೇ ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. ನಿದ್ರಾಹೀನತೆಯ ಸಮಸ್ಯೆ ಪ್ರಾರಂಭವಾದ ನಂತರ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಕಾಡುತ್ತದೆ. ಪ್ರತಿದಿನ ರಾತ್ರಿಯ ಉತ್ತಮ ನಿದ್ರೆಯನ್ನು ಪಡೆಯಲು, ಕಾಫಿಯನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಲು ಮರೆಯಬೇಡಿ.
ಚಹಾ ಅಥವಾ ಕಾಫಿಯಲ್ಲಿರುವ ಕೆಫೀನ್ ಜೀರ್ಣಕಾರಿ ಆರೋಗ್ಯವನ್ನು ಹದಗೆಡುತ್ತದೆ. ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿನ್ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವು ಕರುಳಿನ ಚಟುವಟಿಕೆಗೆ ಅಡ್ಡಿಪಡಿಸಬಹುದು. ಅತಿಯಾದ ಕಾಫಿ ಸೇವನೆಯು ಹೊಟ್ಟೆ ನೋವಿಗೆ ಕಾರಣವಾಗಬಹುದು ಎಂದು ಹೆಚ್ಚಿನ ತಜ್ಷ ವೈದ್ಯರು ಮಾಹಿತಿ ನೀಡುತ್ತಾರೆ.
ಅಧಿಕ ರಕ್ತದೊತ್ತಡ : ಹೆಚ್ಚು ಕಾಫಿ ಸೇವಿಸುವವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಧಿಕ ರಕ್ತದೊತ್ತಡವು ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ, ಹೃದಯಾಘಾತ ಸಂಭವಿಸುತ್ತದೆ. ಆದ್ದರಿಂದ, ಅಧಿಕ ರಕ್ತದೊತ್ತಡ (ಬಿಪಿ) ಅಥವಾ ಹೃದಯ ಸಂಬಂಧಿತ ಕಾಯಿಲೆಗಳನ್ನು ಹೊಂದಿರುವ ಜನರು ಸೂಕ್ತ ಪ್ರಮಾಣದ ಕಾಫಿಯನ್ನು ತೆಗೆದುಕೊಳ್ಳಲು ಮರೆಯಬಾರದು.