4 ವರ್ಷದ ಮಗುವಿನ ತಂದೆ IAS ಅಧಿಕಾರಿಯೋ ಅಥವಾ ಮಾಜಿ ಶಾಸಕನೋ ? ಕೋರ್ಟ್ ಮೆಟ್ಟಿಲೇರಿದ ತಾಯಿ!!!

ಬಿಹಾರದಲ್ಲಿ ವಿಶಿಷ್ಟವಾದ ಕಾನೂನು ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗುವಿಗೆ ತಂದೆ ಯಾರೆಂದು ತಿಳಿಯಲು ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ.

ರಾಜ್ಯದ ರಾಜಕೀಯ ಮತ್ತು ಅಧಿಕಾರಶಾಹಿ ಎರಡರಲ್ಲೂ ಸಂಚಲನ ಸೃಷ್ಟಿಸುವುದು ಸಾಮಾನ್ಯ. ಮಹಿಳೆಯೊಬ್ಬಳು ತನ್ನ ನಾಲ್ಕು ವರ್ಷದ ಮಗನ ತಂದೆಯ ಬಗ್ಗೆ ತಿಳಿಯಲು ಹಿರಿಯ ಐಎಎಸ್ ಅಧಿಕಾರಿ ಮತ್ತು ಮಹಾಮೈತ್ರಿಕೂಟದ ಆಡಳಿತ ಪಕ್ಷದ ಮಾಜಿ ಶಾಸಕರೊಬ್ಬರ ಡಿಎನ್‌ಎ ಪರೀಕ್ಷೆಗಾಗಿ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೋರ್ಟ್ಗೆ ಆರೋಪ ನೀಡಿರುವ ಮಹಿಳೆ ಇಬ್ಬರು ಅಧಿಕಾರಿಗಳು ದೀರ್ಘ ಕಾಲದಿಂದ ದೈಹಿಕವಾಗಿ ಅತ್ಯಾಚಾರವೆಸಗಿದ್ದು, ಆದರೆ ಇಬ್ಬರೂ ಕೂಡ ಮಗುವನ್ನು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡುತ್ತಿಲ್ಲ. ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದರಿಂದ ಮಗುವಾಗಿದ್ದು, ಹೀಗಾಗಿ ಮಗುವಿನ ತಂದೆ ಯಾರು ಎಂಬ ಸತ್ಯ ತಿಳಿಯಲು ಇಬ್ಬರನ್ನೂ ಡಿಎನ್‌ಎ ಪರೀಕ್ಷೆಗೆ ಒಳಪಡಿಸುವಂತೆ ನ್ಯಾಯಾಲಯ ಆದೇಶಿಸಬೇಕು ಎಂದು ಮಹಿಳೆ ಮನವಿ ಸಲ್ಲಿಸಿದ್ದಾರೆ.

ಮಗುವಿನ ತಾಯಿ ಪರವಾಗಿ ವಕೀಲ ರಂಜನ್ ಕುಮಾರ್ ಶರ್ಮಾ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದು, ಈ ಕುರಿತಾದ ಹೆಚ್ಚಿನ ತನಿಖೆಗೆ ನಿರ್ದೇಶನ ಆದೇಶ ನೀಡುವಂತೆ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ರಾಜ್ಯ ಮಹಿಳಾ ಆಯೋಗದ ಸದಸ್ಯೆಯಾಗುವ ಕಾರಣವನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದು, ಈ ನಡುವೆ ಮಾಜಿ ಶಾಸಕರ ಜೊತೆ ಐಎಎಸ್ ಅಧಿಕಾರಿಯೂ ಕೂಡ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರ ಮಾಡಿದ ವಿಡಿಯೋವನ್ನೂ ದಾಳವಾಗಿ ಬಳಸಿ ಮಹಿಳೆಯನ್ನು ಭಾವನಾತ್ಮಕವಾಗಿ ಹೆದರಿಸಿ, ವಿಡಿಯೋವನ್ನು ವೈರಲ್ ಮಾಡುವುದಾಗಿ ಅಧಿಕಾರಿಗಳು ಭಯ ಪಡಿಸುವುದರ ಜೊತೆಗೆ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

ಇದರಿಂದ ಮಹಿಳೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಳಿಕ ಪ್ರಕರಣದಿಂದ ನುಣುಚಿಕೊಳ್ಳುವ ಸಲುವಾಗಿ ಮಾಜಿ ಶಾಸಕ ಪರಾರಿಯಾದರೆ, ಐಎಎಸ್ ಅಧಿಕಾರಿ ಅಪರಿಚಿತರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಮಗುವಿನ ತಂದೆ ಯಾರು ಎಂದು ತಿಳಿಯಲು ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾರೆ.

Leave A Reply

Your email address will not be published.