ಮುಸ್ಲಿಂ ಹುಡುಗನನ್ನು ಪ್ರೀತಿಸಿದ ಅಕ್ಕ | ಬುದ್ಧಿವಾದ ಹೇಳಿದ ತಮ್ಮನನ್ನೇ ಕೊಂದಳು| ಕೊಲೆ ರಹಸ್ಯ ಬಯಲಾದದ್ದು ಭಾರೀ ರೋಚಕ

ಪ್ರೇಮ ಪ್ರೀತಿಗೆ ಕಣ್ಣಿಲ್ಲ. ಅದಕ್ಕೆ ತಕ್ಕ ಉದಾಹರಣೆ ಇದು. ಪ್ರೀತಿ ಮುಂದೆ ಏನೂ ಕಾಣಲ್ಲ. ಹಾಗಾಗಿ ಅದು ಒಳ್ಳೆಯದೋ, ಕೆಟ್ಟದೋ ಏನೋ ಅವಘಡ ಮಾಡಿ ಬಿಡುತ್ತೆ.

ಜಾರ್ಖಂಡ್‌ನ ಪತ್ರಾಟುವಿನ ಪಾಂಚ್ ಮಂದಿರ ಪ್ರದೇಶದಲ್ಲಿ ಪೊಲೀಸರು, ಮ್ಯಾಜಿಸ್ಟ್ರೇಟ್, ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳು ಸರ್ಕಾರಿ ಕ್ವಾಟ್ರಸ್‌ನ ಒಂದು ಮನೆಯ ಮುಂದೆ ನಿಂತಿದ್ದರು. ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸರ ಸಮ್ಮುಖದಲ್ಲಿ ಮನೆಯ ಕೋಣೆಯೊಂದರ ನೆಲವನ್ನು ಕಾರ್ಮಿಕರು ಅಗಿಯುತ್ತಿದ್ದರು. ಅಂದಾಜು ಎರಡು ಗಂಟೆಗಳ ಕೆಲಸ ಬಳಿಕ, ನೆಲದ ಒಳಗೆ ಸಿಕ್ಕಿದ್ದು ಸಂಪೂರ್ಣವಾಗಿ ಕೊಳೆತು ಹೋದ ಮೃತ ದೇಹ. ರೋಹಿತ್ ಕುಮಾರ್ ಎನ್ನುವ 21 ವರ್ಷದ ಹುಡುಗನ ಮೃತದೇಹ ದೊರಕಿದೆ. ಆಕೆಯ ಅಕ್ಕ 25 ವರ್ಷದ ಚಂಚಲಾ ಕುಮಾರಿ ಈ ಕೊಲೆಯ ಸೂತ್ರಧಾರಿ. ಯಾಕಾಗಿ ಅಕ್ಕ ತಮ್ಮನ ಕೊಲೆ ಮಾಡಿದಳು ಬನ್ನಿ ತಿಳಿಯೋಣ.

ಇದು ಜಾರ್ಖಂಡ್‌ನ ರಾಮಗಢದ ಪತ್ರಾಟು ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಚ್ ಮಂದಿರ್ ಪಂಚಾಯತ್ ಪ್ರದೇಶದಲ್ಲಿ ನಡೆದಿರುವ ಘಟನೆ. ಮುಸ್ಲಿಂ ಹುಡುಗನ್ನು ಅಕ್ಕ ಪ್ರೀತಿ ಮಾಡ್ತಿದ್ದಳು. ಅದೇಗೋ ಈ ವಿಚಾರ ತಮ್ಮನಿಗೆ ಗೊತ್ತಾಗಿ ಹೋಯಿತು. 25 ವರ್ಷದ ಅಕ್ಕನಿಗೆ 21 ವರ್ಷದ ಹುಡುಗ ಕೂರಿಸಿ ಬುದ್ಧಿಮಾತು ಹೇಳಿದ್ದ. ಆದರೆ, ಅಕ್ಕ ತನ್ನ ಸ್ವಂತ ತಮ್ಮನ ಮಾತನ್ನು ನೆಗ್ಲೆಟ್ ಮಾಡಿದ್ದಾಳೆ. ತನ್ನ ದಾರಿಗೆ ಅಡ್ಡ ಬರುತ್ತಿರುವ ತಮ್ಮನನ್ನು ಹೇಗಾದರೂ ಮಾಡಿ ದೂರ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಅಚಾನಕ್ ಆಗಿ ಒಂದು ದಿನ ತಮ್ಮ ನಾಪತ್ತೆಯಾಗಿ ಹೋದ. ಎಷ್ಟು ದಿನ ಅಂದರೆ ಎರಡೂವರೆ ತಿಂಗಳಾದರೂ ಆತನ ಬಗ್ಗೆ ಏನೂ ಸುಳಿವು ಇರಲಿಲ್ಲ. ಆದರೆ, ಪೊಲೀಸರು ಎರಡೂವರೆ ತಿಂಗಳ ಆತನ ಬಗ್ಗೆ ತಿಳಿದುಕೊಂಡರು. ಸಿಕ್ಕಿದ ಮಾಹಿತಿ ಪ್ರಕಾರ, ವಿಚಾರಣೆ ನಡೆಸಿದಾಗ ಪೊಲೀಸರಿಗೆ ಕಾದಿದ್ದು ಅಚ್ಚರಿ ಮಾತ್ರವಲ್ಲ ಶಾಕ್ ಕೂಡಾ. ಯಾಕೆಂದರೆ, ಆಕೆಯ ತಮ್ಮ ಬೇರೆ ಎಲ್ಲೂ ಇದ್ದಿರಲಿಲ್ಲ. ಅಕ್ಕನ ಕೋಣೆಯಲ್ಲೇ ಇದ್ದ. ಕೋಣೆ ಎಂದರೆ ನೆಲದ ಒಳಗೆ. ಶವವಾಗಿ.

ಈ ಮರ್ಡರ್ ಮಿಸ್ಟ್ರಿಯ ರೋಚಕ ಕಹಾನಿ ಪ್ರಾರಂಭವಾದದ್ದೇ ಜೂನ್ 24 ರಂದು. 21 ವರ್ಷದ ರೋಹಿತ್ ಕುಮಾರ್, ಪತ್ರಾಟುವಿನ ಬರ್ತುವಾ ಗ್ರಾಮದ ನಿವಾಸಿ. ರಾಂಚಿಯಲ್ಲಿರುವ ತನ್ನ ಮಾವನ ಮನೆಗೆ ಆ ದಿನ ಹೋಗಿದ್ದ. ಅಲ್ಲಿ ಆತ ಸುಮಾರು ಒಂದು ವಾರ ವಾಸವಿದ್ದ. ಆದರೆ 30 ಜೂನ್ 2022 ರಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ. ಅಲ್ಲಿಯವರೆಗೆ ರಿಂಗಣಿಸುತ್ತಿದ್ದ ಆತನ ಫೋನ್ ಜೂನ್ 30 ರಂದು ಮತ್ತೆ ಆನ್ ಆಗದ ರೀತಿಯಲ್ಲಿ ಸ್ವಿಚ್ ಆಫ್ ಆಗಿತ್ತು. ಗಾಬರಿ ಬಿದ್ದ ರೋಹಿತ್ ಇಡೀ ಕುಟುಂಬದ ಸದಸ್ಯರು ಇವರ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಪತ್ತೆಯಾಗಿಲ್ಲ. ನಂತರ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ರೋಹಿತ್‌ ತಂದೆ ನರೇಶ್ ಮಹತೋ ಅವರು ತಮ್ಮ ಮಗ ನಾಪತ್ತೆಯಾದ ಬಗ್ಗೆ ಮೊದಲು ಪತ್ರಾಟು ಪೊಲೀಸರಿಗೆ ದೂರು ನೀಡಿದ್ದರು, ಆದರೆ ಪೊಲೀಸರು ಯುವಕನ ಪತ್ತೆಗೆ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇದಾದ ನಂತರ ದಿನಗಳು, ವಾರಗಳು, ತಿಂಗಳುಗಳು ಕಳೆದರೂ ರೋಹಿತ್‌ ಪತ್ತೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಅನಂತರ ತನಿಖೆ ಮುಂದುವರಿಯಿತು. ಪೊಲೀಸರು ಕಾಲ್ ಡಿಟೇಲ್ ರೆಕಾರ್ಡ್ ಅಥವಾ ಸಿಡಿಆರ್ ತೆಗೆಸಿ ತನಿಖೆಯನ್ನು ಆರಂಭ ಮಾಡಿದರು. ಇಲ್ಲೂ ಅಂತಹ ಅಪ್ಡೇಟ್ ಸಿಕ್ಕಿಲ್ಲ. ರೋಹಿತ್ ಕೊನೆಯ ಬಾರಿಗೆ ತನ್ನ ಅಕ್ಕ ಚಂಚಲಾ ಕುಮಾರಿ ಅವರೊಂದಿಗೆ ಮಾತನಾಡಿದ್ದರು ಎನ್ನುವುದನ್ನು ಬಿಟ್ಟು ಮತ್ತೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಪತ್ರಾಟು ನಿವಾಸಿಯಾಗಿದ್ದ ಚಂಚಲಾ ತನ್ನ ಸಹೋದರನ ನಿಗೂಢ ನಾಪತ್ತೆಯಿಂದ ಕಂಗಾಲಾಗಿದ್ದು, ಹೇಗಾದರೂ ಮಾಡಿ ತನ್ನ ಸಹೋದರನನ್ನು ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡುತ್ತಿದ್ದಳು.

ಸಾಕಷ್ಟು ಶ್ರಮದ ಹೊರತಾಗಿಯೂ ಪೊಲೀಸರಿಗೆ ರೋಹಿತ್ ಕುರುತಾಗಿ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ಪೊಲೀಸರು ಇಡೀ ಕುಟುಂಬದ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಈ ಸಂದರ್ಭದಲ್ಲಿ ದೊರೆಯಿತು ಒಂದು ರೋಚಕ ಟ್ವಿಸ್ಟ್ . ಪೊಲೀಸರಿಗೆ ರೋಹಿತ್‌ನ ಅಕ್ಕ ಚಂಚಲ ಕುಮಾರಿ ಮುಸ್ಲಿಂ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು ಹಾಗೂ ಅದಕ್ಕೆ ರೋಹಿತ್‌ನ ವಿರೋಧವಿತ್ತ ಎನ್ನುವುದು ತಿಳಿಯಿತು. ನಂತರ ಈ ಅನುಮಾನದ ಆಧಾರದ ಮೇಲೆ ಪೊಲೀಸರು ರೋಹಿತ್ ಅಕ್ಕ ಚಂಚಲಾಳನ್ನು ವಿಚಾರಣೆ ಆರಂಭಿಸಿದ್ದಾರೆ. ರಾಂಚಿಯ ಚಾಂದನಿ ಚೌಕ್ ಬಸ್ ಸ್ಟ್ಯಾಂಡ್‌ಗೆ ಬಂದಿದ್ದ ರೋಹಿತ್‌ನನ್ನು ಕರೆತರಲು ಚಂಚಲಾ ಪತ್ರಾಟುವಿನಿಂದ ಬಂದಿದ್ದರು ಎನ್ನುವ ಏಕೈಕ ಮಾಹಿತಿ ಆಧರಿಸಿ, ತೀವ್ರ ವಿಚಾರಣೆ ಮಾಡಿದಾಗ ಆಕೆಯೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ತನ್ನ ಸಹೋದರನನ್ನು ರಾಂಚಿಯಿಂದ ಪತ್ರಾಟುಗೆ ಕರೆದೊಯ್ದು, ನಂತರ ಅವನ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಆತನನ್ನು ಸಾಯಿಸಲಾಯಿತು ತ ಎಂದು ರೋಹಿತ್ ಸಹೋದರಿ ಚಂಚಲಾ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಗೆಳೆಯ ಇಸ್ರೇಲ್ ಅನ್ಸಾರಿ ಜೊತೆ ಸೇರಿ ಎರಡು ದಿನಗಳ ಕಾಲ ಶವವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಳು. ನಂತರ ತನ್ನ ಸರ್ಕಾರಿ ಕ್ವಾರ್ಟಸ್ ನ ಕೊಠಡಿಯಲ್ಲಿ ಗುಂಡಿ ತೋಡಿ ಅದರಲ್ಲಿ ತನ್ನ ಸಹೋದರನ ಶವವನ್ನು ಹೂತು ಹಾಕಿದ್ದಾನೆ.

ಕೊಲೆ ಮಾಡುವ ಸಂಚಿನಿಂದಲೇ ತಮ್ಮನನ್ನು ರಾಂಚಿಯಿಂದ ಪತ್ರಾಟುವಿಗೆ ಕರೆತರಲಾಗಿತ್ತು ಎಂದು ಅಕ್ಕ ಒಪ್ಪಿಕೊಂಡಿದ್ದಾಳೆ. ಆತನ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದೆ. ಬಳಿಕ ಬಾಯ್‌ಫ್ರೆಂಡ್ ಇಸ್ರೇಲ್ ಅನ್ಸಾರಿ, ಜೊತೆ ಸೇರಿ ತಮ್ಮನನ್ನು ಕೊಲೆ ಮಾಡಿದೆ. ಅಂದಾಜು ಎರಡು ದಿನಗಳ ಬಳಿಕ ಆತನನ್ನು ಹೂಳುವ ನಿರ್ಧಾರ ಮಾಡಿದೆವು. ಸರ್ಕಾರಿ ಕ್ವಾಟ್ರಸ್‌ನಲ್ಲಿ ನನ್ನ ಕೋಣೆಯಲ್ಲಿಯೇ ಗುಂಡಿ ತೋಡಿ, ಆತನನ್ನು ಹೂತಿಟ್ಟಿದ್ದಾಗಿ ಹೇಳಿದ್ದಾರೆ. ತಮ್ಮನನ್ನು ಹೂತಿಟ್ಟ ಅದೇ ಮನೆಯಲ್ಲಿ ಚಂಚಲಾ ಒಂದೂವರೆ ತಿಂಗಳು ವಾಸವಿದ್ದಳು. ಇದರಿಂದಾಗಿ ಯಾರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ. ಆದರೆ ಒಂದು ಮಾತಿದೆ ಕೊಲೆಗಾರ ಎಷ್ಟೇ ಬುದ್ಧಿವಂತನಾದರೂ ಪೊಲೀಸರ ಕೈಯಿಂದ ತಪ್ಪಿಸೋಕೆ ಸಾಧ್ಯವಿಲ್ಲ ಎಂದು.

Leave A Reply

Your email address will not be published.