ಜನತೆಗೆ ವಿದ್ಯುತ್ ದರ ಏರಿಕೆಯ ಬಿಸಿ ಇಂದಿನಿಂದ ಪರಿಷ್ಕೃತ ದರ ಜಾರಿ!!

ಇಂದಿನಿಂದ ಹೆಚ್ಚುವರಿ ವಿದ್ಯುತ್ ದರ ಪರಿಷ್ಕರಣೆ  (Electricity) ಅನ್ವಯವಾಗುತ್ತಿದ್ದು, ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಅನುಭವ ಆಗಲಿದೆ.

ಎಸ್ಕಾಂಗಳು ಸಲ್ಲಿಸಿದ್ದ ಮನವಿಯ ಮೇರೆಗೆ ಪ್ರತಿ ಯೂನಿಟ್ ಮೇಲೆ 23-43 ಪೈಸೆವರೆಗೆ ಹೆಚ್ಚಿಸಿ KERC ಆದೇಶ ಹೊರಡಿಸಿದೆ. ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಿ ಎಂದು ಇಂಧನ ಇಲಾಖೆ ಗ್ರಾಹಕರಿಗೆ ಹೊರೆ ಮಾಡಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 24 ಪೈಸೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು. ಸೆಸ್ಕಾಂ ಅಡಿಯಲ್ಲಿ ಬರುವ ವಿದ್ಯುತ್ ಗ್ರಾಹಕರಿಗೆ ಹೆಚ್ಚುವರಿ 35 ಪೈಸೆ ಏರಿಕೆ ಮಾಡಲಾಗಿದೆ. ಹೆಸ್ಕಾಂ ಹಾಗೂ ಜೆಸ್ಕಾಂ ಅಡಿಯ ವಿದ್ಯುತ್ ಗ್ರಾಹಕರು ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚುವರಿ ವಿದ್ಯುತ್ ಶುಲ್ಕ ಕಟ್ಟಬೇಕು.

ವಿದ್ಯುತ್ ಸರಬರಾಜು ಮಾಡುವ ಕಂಪನಿಗಳ ನಷ್ಟ ತುಂಬಿಸಲುಈ ದರ ಏರಿಕೆ ಮಾಡಲಾಗಿದೆ. ಹಾಗಾಗಿ ವಿದ್ಯುತ್ ಸರಬರಾಜು ಕಂಪನಿಗಳಿಂದ ಇಂದಿನಿಂದ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ ಎಂದು ವಿದ್ಯುತ್ ಪರಿಷ್ಕರಣ ಯೋಜನೆಯಲ್ಲಿ ಈ ಕಾರಣ ಬಹಿರಂಗ ಗೊಂಡಿದೆ.

ಈ ಯೋಜನೆಯ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕು. ಹಾಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರವನ್ನು ಪರಿಶೀಲನೆ ಮಾಡಲಾಗುತ್ತದೆ. ಆದರೆ ರಾಜ್ಯದಲ್ಲಿ ವಿದ್ಯುತ್ ದರ ಒಂದು ಬಾರಿ ಹೆಚ್ಚಾದ್ದಾರೆ ಮತ್ತೊಂದು ಬಾರಿ ದರ ಕಡಿಮೆಯಾಗಲು ಬಹುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಕಳೆದ 7 ವರ್ಷಗಳಿಂದ ಈ ವಿದ್ಯುತ್ ಪರಿಷ್ಕರಣೆ ನಡೆಯುತ್ತಲೇ ಇದೆ ಎಂದು ಸಚಿವ ಸುನೀಲ್ ಕುಮಾರ್  ಜನರಿಗೆ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಾಗ್ರಿ ದರ ಹೆಚ್ಚಾಗಿದೆ. ಖರೀದಿ ವೇಳೆ ದರ ಕಡಿಮೆ ಇದ್ದರೆ KERCಗೆ ಪ್ರಸ್ತಾವನೆ ಸಲ್ಲಿಸಲು ಸಾಧ್ಯವಿಲ್ಲ. ಕಲ್ಲಿದ್ದಲು ಇತರೆ ಕಚ್ಚಾ ಸಾಮಾಗ್ರಿ ಏರಿಕೆಯಾದಾಗ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಪ್ರಕ್ರಿಯೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧರಿಸುತ್ತದೆ ಎಂದು ಬೆಸ್ಕಾಂ ತಾಂತ್ರಿಕ ನಿರ್ದೇಶಕ ನಾಗಾರ್ಜುನ್ ಹೇಳಿದ್ದಾರೆ.

ಪ್ರತಿ ಯೂನಿಟ್‌ಗೆ 43 ಪೈಸೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬಂದರೂ, ನಿರ್ಧಾರ ಮುಂದಿನ ವಿದ್ಯುತ್ ಪರಿಷ್ಕರಣ ಯೋಜನೆಯನ್ನು ಏಪ್ರಿಲ್‌ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಈಗಾಗಲೇ ವಿದ್ಯುತ್ ಮೇಲಿನ ತೆರಿಗೆ ಶೇಕಡಾ 9ರಷ್ಟು ಇದೆ. ಇದನ್ನು ಶೇಕಡಾ 4ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಆದ್ದರಿಂದ ಈ ಸಂಬಂಧ ಮುಂದಿನ ವಾರ ಇಂಧನ ಸಚಿವರನ್ನು ಭೇಟಿಯಾಗಿ ಮನವಿ ಸಲಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಮಾಹಿತಿ ನೀಡಲಾಗಿತ್ತು.

ಕೊರೊನಾ ಬಳಿಕ ಈಗಷ್ಟೇ ಹೋಟೆಲ್ ಉದ್ಯಮದಲ್ಲಿ ಚೇತರಿಕೆ ಕಾಣುತ್ತಿಗೆ ವಿದ್ಯುತ್ ದರ ಮತ್ತೆ ಏರಿಸಿದರೆ ಉದ್ಯಮಕ್ಕೆ ಸಮಸ್ಯೆ ಆಗಲಿದೆ ಎಂದು ಎಲ್ಲಾ ಜನತೆಯ ಪರವಾಗಿ ಇಲಾಖೆಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.

Leave A Reply

Your email address will not be published.