ಬಾಲ್ಯದಲ್ಲಿ ಎತ್ತಿ ಆಡಿಸಿದ ಆಯಾಳನ್ನು ನೋಡಲು 45 ವರ್ಷಗಳ ಬಳಿಕ ಬಂದ ವ್ಯಕ್ತಿ ಅಮ್ಮನಷ್ಟೇ ಪ್ರೀತಿಕೊಟ್ಟು ಸಾಕಿದ ಮಹಿಳೆ ಈತನನ್ನು ಕಂಡು ಮಾಡಿದ್ದಾದರೂ ಏನು?

ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿರುವಂತಹ ಕಾಲವಿದು. ನಮ್ಮನ್ನು ಹೆತ್ತು ಸಾಕಿ ಸಲಹಿದ ಪೋಷಕರನ್ನೇ ತಿರಸ್ಕಾರದಿಂದ ನೋಡಿಕೊಂಡು ಹಣದ ಹಿಂದೆ ಇಲ್ಲವೇ ಹೆಂಡತಿಯ ಗುಲಾಮರಂತೆ ವರ್ತಿಸುವ ಕಾಲವಿದು.ಈ ನಡುವೆ ಮಕ್ಕಳು ಹೆತ್ತ ಪೋಷಕರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಪ್ರಕರಣದ ನಿದರ್ಶನಗಳು ಬೇಕಾದಷ್ಟಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget


ಅದರಲ್ಲೂ ಬಾಲ್ಯದ ಆಟ – ತುಂಟಾಟಗಳು , ಹಿರಿಯರೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳು ನೆನಪಿನಲ್ಲಿ ಉಳಿಸಿಕೊಂಡು, ಅವರು ಕಲಿಸಿದ ಜೀವನ ಪಾಠವನ್ನೂ ರೂಢಿಸಿಕೊಂಡು ಬರುವವರು ವಿರಳ. ತಾವಾಯಿತು ತಮ್ಮ ಕೆಲಸವಾಯಿತು ಅನ್ನುವಂತ ಮನಸ್ಥಿತಿ ಈಗ ಹೆಚ್ಚಿನ ಜನರಿಗೆ ಇದೆ. ಆದರೆ, ಇದಕ್ಕೆ ತದ್ವಿರುದ್ದ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.


ವ್ಯಕ್ತಿಯೊಬ್ಬ, ವಯಸ್ಸಾದ ಮಹಿಳೆಯನ್ನ ಭೇಟಿಯಾಗಿ ಮಹಿಳೆ ಆ ವ್ಯಕ್ತಿಯನ್ನ ನೋಡಿ ಖುಷಿಯಿಂದ ಅಪ್ಪಿಕೊಂಡಿರುವ ಭಾವುಕ ಕ್ಷಣದ ವಿಡಿಯೋ ಜಾಲತಾಣ ದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಅಸಲಿ ವಿಷಯವೇನು ಎಂದು ನೀವು ಯೋಚಿಸುತ್ತಿರಬಹುದು.


45 ವರ್ಷದ ಬಳಿಕ ವ್ಯಕ್ತಿಯೊಬ್ಬ ಅವನನ್ನು ಸಾಕಿದ ಮಹಿಳೆಯನ್ನು ಭೇಟಿಯಾಗಲು , ಸ್ಪೇನ್​​ನಿಂದ ಬೊಲೊವಿಯಾಗೆ ಹೋಗಿದ್ದು, ಬರೋಬ್ಬರಿ ಸುಮಾರು 8 ಸಾವಿರ ಕಿಲೋಮೀಟರ್ ಗಿಂತಲೂ ಹೆಚ್ಚು ದೂರ ಕ್ರಮಿಸಿ ಪ್ರಯಾಣ ಮಾಡಿ ತನ್ನನ್ನು ಸಲಹಿದ ಮಹಿಳೆಯ ಮನೆಯನ್ನು ಪತ್ತೆ ಹಚ್ಚಿ ಭೇಟಿಯಾಗಿದ್ದಾನೆ.

ಸುದೀರ್ಘ 45 ವರ್ಷದ ಬಳಿಕ ಆಕೆಯನ್ನು ಭೇಟಿಯಾಗಿದ್ದರಿಂದ ಆಕೆಗೆ ಅವನನ್ನು ಗುರುತಿಸಲಾಗದೆ ಕೊನೆಗೆ ವ್ಯಕ್ತಿಯೇ ತನ್ನ ಪರಿಚಯ ಮಾಡಿಕೊಂಡಿದ್ದಾನೆ.

ಅಸಲಿಗೆ ಪುಟ್ಟ ಮಗುವಾಗಿದ್ದಾಗ ಆತನ ಆರೈಕೆಗೆಂದು ಆತನ ತಂದೆ-ತಾಯಿ ವೃದ್ದೆಯನ್ನು ನೇಮಿಸಿದ್ದರು. ಆಕೆ ಎತ್ತಿ ಆಡಿಸಿದ ಮಗು, ಅನೇಕ ವರ್ಷಗಳ ಬಳಿಕ ಆಕೆಯನ್ನು ಮರೆಯದೇ ತನ್ನನ್ನ ಹುಡುಕಿಕೊಂಡು ಬಂದದ್ದು ಅಚ್ಚರಿಯ ಜೊತೆಗೆ ಹೇಳ ತೀರಲಾಗದಷ್ಟು ಸಂತೋಷವಾಗಿ ವೃದ್ದೆ ಭಾವುಕಳಾಗಿದ್ದಳು. ಆತನ ಭೇಟಿಯಿಂದ ಆಕೆಗೆ ಆದ ಖುಷಿಗೆ ಪಾರವೇ ಇರಲಿಲ್ಲ ಎಂದರೂ ತಪ್ಪಾಗದು.


ಈ ಅಪರೂಪದ ಕ್ಷಣಗಳನ್ನ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ ಗುಡ್​ನ್ಯೂಸ್​ ಕರೆಸ್ಪಾಂಡ್ ಎನ್ನುವ ಟ್ವಿಟ್ಟರ್ ಅಕೌಂಟ್​ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, 45 ವರ್ಷಗಳ ನಂತರ ನ್ಯಾನಿ ಎಂಬ ಆಯಾವನ್ನು ಹುಡುಕಿ ಭೇಟಿಯಾಗಿ ಮಗನಂತೆ ಕಾಳಜಿ ವಹಿಸಿದ ಆನಾ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.


ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಅಪರೂಪದ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಯಿಂದ ಹುಬ್ಬೇರಿಸಿದರೆ, ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವ ಮಾತು ಸುಳ್ಳು ಎನ್ನುವ ಸಂದೇಶ ರವಾನಿಸಿರುವ ವ್ಯಕ್ತಿ ಉಳಿದವರಿಗೂ ಮಾದರಿಯಾಗಿದ್ದಾರೆ. ನಾವು ಎಷ್ಟೇ ಎತ್ತರಕ್ಕೆ ಹೋದರೂ ನಡೆದು ಬಂದ ಹಾದಿಯನ್ನು , ಜೊತೆಗೆ ನಮ್ಮ ಬೆಂಬಲವಾಗಿದ್ದವರನ್ನು ಮರೆಯಬಾರದು ಎನ್ನುವುದನ್ನು ಈ ವಿಡಿಯೋ ತುಣುಕುಗಳು ತೋರಿಸುತ್ತಿವೆ.

error: Content is protected !!
Scroll to Top
%d bloggers like this: