ಸಭ್ಯ ಮುಖವಾಡದ ಹಿಂದೆ PFI ಪದಾಧಿಕಾರಿಗಳು | ಸಾಫ್ಟ್ ವೇರ್ ಎಂಜಿನಿಯರ್, ಉಪನ್ಯಾಸಕ, ಸರ್ಕಾರಿ ಉದ್ಯೋಗಿ – ಇದು ಬಂಧಿತ PFI ಮುಖಂಡರ ಹೈ ಪ್ರೊಫೈಲ್ !

ಸಭ್ಯ ಮುಖವಾಡದ ಹಿಂದೆ PFI ಪದಾಧಿಕಾರಿಗಳು | ಸಾಫ್ಟ್ ವೇರ್ ಎಂಜಿನಿಯರ್, ಉಪನ್ಯಾಸಕ, ಸರ್ಕಾರಿ ಉದ್ಯೋಗಿ – ಇದು ಬಂಧಿತ PFI ಮುಖಂಡರ ಹೈ ಪ್ರೊಫೈಲ್ !

ದೇಶದ ವಿವಿಧ ಕಡೆ ಇರುವ ಪಿಎಫ್ ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ದಾಳಿ ನಡೆಸಿದ್ದ ಬಳಿಕ ಕೇಂದ್ರ ಸರ್ಕಾರ ಪಿಎಫ್ ಐ ಮತ್ತು ಸಹವರ್ತಿ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಇವುಗಳ ಮಧ್ಯ ಅತ್ಯಂತ ಆತಂಕ ಕಾರಿಯಾದ ಸುದ್ದಿಯೊಂದು ಹೊರ ಬಂದಿದೆ. ಸಜ್ಜನರ ಮುಖವಾಡ ಧರಿಸಿಕೊಂಡು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದ PFI ಬಂಧಿತ ಪಿಎಫ್ ಐನ ಮುಖಂಡರುಗಳಲ್ಲಿ ಅತ್ಯಂತ ಸೃಷ್ಟಿಸಲು ಇರುವುದು ಬೆಳಕಿಗೆ ಬಂದಿದ್ದು ಇನ್ನಷ್ಟು ಆತಂಕ ಸೃಷ್ಟಿಸಿದೆ. ಆ ವರ್ಗದಲ್ಲಿ ಟೆಕ್ಕಿಯಿಂದ ಹಿಡಿದು ಉಪನ್ಯಾಸಕರು, ಸರ್ಕಾರಿ ನೌಕರರು ಸೇರಿರುವುದಾಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐಎ, ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಪಿಎಫ್ ಐನ ಉನ್ನತ ನಾಯಕರಲ್ಲಿ ಕೇರಳ ಪಿಎಫ್ ಐನ ಅಧ್ಯಕ್ಷ ಒಎಮ್ ಎ ಸಲಾಂ ಕೇರಳದಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದು, 2020 ರಲ್ಲಿ ಇಂತದ್ದೇ ಕೆಲಸ ಮಾಡಿದ ಕಾರಣಕ್ಕೆ ಅಮಾನತುಗೊಂಡಿದ್ದ.

ಕರ್ನಾಟಕದ ಪಿಎಫ್ ಐನ ಇಬ್ಬರು ಸದಸ್ಯರಾದ ಅಬ್ದುಲ್ ವಾಹಿತ್ ಸೇಠ್ ಮತ್ತು ಅನೀಸ್ ಅಹ್ಮದ್ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಸೇಠ್, ಪಿಎಫ್ ಐ ಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದಾನೆ. ಈತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿ ಹೊಂದಿರುವುದಾಗಿ ಮತ್ತುರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸದಸ್ಯ ಎಂದು ಕೂಡಾ ವರದಿ ಉಲ್ಲೇಖಿಸಿದೆ.

ಅಲ್ಲದೆ ಪಿಎಫ್ ಐನ ರಾಷ್ಟ್ರೀಯ ಉಪಾಧ್ಯಕ್ಷ ಇ.ಎಂ. ಅಬ್ದುರ್ ರಹಿಮಾನ್ ಕಲಮಶ್ಶೇರಿಯಲ್ಲಿರುವ ಕೊಚಿನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಯೂನಿರ್ವಸಿಟಿಯ ಒಂದು ಕಾಲದ ಗ್ರಂಥಪಾಲಕ. PFI ನ ರಾಷ್ಟ್ರೀಯ ಕಾರ್ಯದರ್ಶಿ ವಿ.ಪಿ.ನಜರುದ್ದೀನ್- ಜಮಾತ್ ಇ ಇಸ್ಲಾಮಿ ಹಿಂದ್ ನ  ‘ಮಾಧ್ಯಮಂ ದೈನಿಕ’ ದ ಮಾಜಿ ಉದ್ಯೋಗಿ.

PFI ನ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸದಸ್ಯ ಪಿ.ಕೋಯಾ ಕತಾರ್ ನ ಖಾಸಗಿ ಕಂಪನಿ ಒಂದರ ಮಾಜಿ ಉದ್ಯೋಗಿ. ಕೋಝಿಕೋಡ್ ನ ಕಡೆಂಶ್ಶೇರಿಯ ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ಹೆಸರು ಗಳಿಸಿದ ಉಪನ್ಯಾಸಕನಾಗಿರುವುದಾಗಿ ವರದಿ ವಿವರಿಸಿದೆ.

ಒಎಂಎ ಸಲಾಂ ಎಂಬಾತ ಕೇರಳ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದ. ಈತ ಪಿಎಫ್ ಐ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ 2020 ರ ಡಿಸೆಂಬರ್ ನಲ್ಲಿ ಈತನನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು. ಮಲಪ್ಪುರಂನಲ್ಲಿ ಸಲಾಂ ವಿರುದ್ಧ ಹಲವು ಪ್ರಕರಣ ದಾಖಲಾಗಿದೆ. ಈತ ರೆಹಾಬ್ ಇಂಡಿಯಾ ಫೌಂಡೇಶನ್ ಜತೆಯೂ ನಿಕಟ ಸಂಪರ್ಕ ಹೊಂದಿದ್ದ.

ಮತ್ತೆ ಎರ್ನಾಕುಳಂ ನಿವಾಸಿ ಇಎಂ ಅಬ್ದುರ್ ರಹಿಮಾನ್, ಈತ 1970 ರಲ್ಲಿಯೇ ಸಿಮಿ ಸಂಘಟನೆಗೆ ಸೇರಿಕೊಂಡಿದ್ದ. ಎನ್ ಡಿಎಫ್, ಪಿಎಫ್ ಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಸಿಎಚ್ ಆರ್ ಒನಂತಹ ಸಂಘಟನೆಯ ಸ್ಥಾಪನೆಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ವರದಿ ತಿಳಿಸಿದೆ. ನವದೆಹಲಿಯ ಸ್ಟೂಡೆಂಟ್ಸ್ ಇಸ್ಲಾಮಿಕ್ ಟ್ರಸ್ಟ್ ನ ನಿರ್ದೇಶಕ ಮಂಡಳಿಯ ಸದಸ್ಯ ಸ್ಥಾನವನ್ನೂ ರಹಿಮಾನ್ ಹೊಂದಿದ್ದ.

ಇ ಅಬೂಬಕರ್ ಕೇರಳದ ಕ್ಯಾಲಿಕಟ್ ನಿವಾಸಿಯಾಗಿದ್ದು, ಈತ 1982 ರಿಂದ 1984 ರವರೆಗೆ ಸಿಮಿಯ ಕೇರಳ ರಾಜ್ಯಾಧ್ಯಕ್ಷನಾಗಿದ್ದ. ಈತ ಎನ್ ಡಿಎಫ್ ಮತ್ತು ರೆಹಾಬ್ ಇಂಡಿಯಾ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ, ಅಷ್ಟೇ ಅಲ್ಲ ಎಸ್ ಡಿಪಿಐನ ಸ್ಥಾಪಕ ಅಧ್ಯಕ್ಷನಾಗಿದ್ದ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸ್ಥಾಪಕ ಸದಸ್ಯ ಹಾಗೂ ಇಂಡಿಯಾ ನೆಕ್ಸ್ಟ್ ಹಿಂದಿ ಮ್ಯಾಗಜೀನ್ ನ ಸಂಪಾದಕನಾಗಿದ್ದ.

ಅನೀಸ್ ಅಹ್ಮದ್ ಬೆಂಗಳೂರಿನಲ್ಲಿ ಎರಿಕ್ಸನ್ ಕಂಪನಿಯಲ್ಲಿ ಗ್ಲೋಬಲ್ ಟೆಕ್ನಿಕಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದು, ಇತ್ತೀಚೆಗೆ ಅನೀಸ್ ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕೇಂದ್ರ ಸರ್ಕಾರದ ನೀತಿ ಸೇರಿದಂತೆ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಅನೀಸ್ ನ್ಯೂಸ್ ಚಾನೆಲ್ ಗಳಿಗೆ ಅಭಿಪ್ರಾಯವ್ಯಕ್ತಪಡಿಸುತ್ತಿದ್ದ ಎಂದು ವರದಿ ವಿವರಿಸಿದೆ.

ಪಿ.ಕೋಯಾ ನಿಷೇಧಿತ ಪಿಎಫ್ ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, 1978-79 ರಲ್ಲಿ ಸಿಮಿಯ ಸಕ್ರಿಯ ಕಾರ್ಯಕರ್ತನಾಗಿದ್ದ. ನಜರುದ್ದೀನ್ ಅಲುವಾದಲ್ಲಿನ ಎಂಇಎಸ್ ಕಾಲೇಜ್ ನಲ್ಲಿ ಉಪನ್ಯಾಸಕನಾಗಿದ್ದ. ನಂತರ ಮಾಧ್ಯಮಂ ದೈನಿಕದಲ್ಲಿ ಕ್ಲರ್ಕ್ ಆಗಿದ್ದ. 2014ರ ಲೋಕಸಭಾ ಚುನಾವಣೆ ವೇಳೆ ಮಲಪ್ಪುರಂನಲ್ಲಿ ಎಸ್ ಡಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ.

ಪಶ್ಚಿಮ ಬಂಗಾಳದ ಪಿಎಫ್ ಐನ ರಾಜ್ಯಾಧ್ಯಕ್ಷ ಮಿನ್ರೌಲ್ ಶೇಕ್ ಎಂಎ, ಪಿಎಚ್ ಡಿ ಪದವೀಧರನಾಗಿದ್ದು, ಈತ ಕೋಚಿಂಗ್ ತರಗತಿ ನಡೆಸುತ್ತಿದ್ದ. ಜೊತೆಗೆ ಮುರ್ಶಿದಾಬಾದ್, ಮಾಲ್ಡಾ ಮತ್ತು ಕೋಲ್ಕತದಲ್ಲಿ ಪಿಎಫ್ ಐ ಚಟುವಟಿಕೆ ನಡೆಸುತ್ತಿದ್ದ ಎಂದು ವರದಿ ಹೇಳಿದೆ.

Leave A Reply