Big Boss ಮನೆಯಲ್ಲಿ ನಡೆದಿದೆಯಾ ಲವ್ ಜಿಹಾದ್ ? । ಹಿಂದೂ ಹುಡುಗಿಗೆ ‘ ಬಾ ಮಕ್ಳು ಮಾಡ್ಕೊಳ್ಳೋಣ ‘ ಅನ್ನಲು ನವಾಜ್ ಯಾರು ?
ಕಲರ್ಸ್ ಕನ್ನಡ ವಾಹಿನಿಯಲ್ಲಿನ ‘ಲವ್ ಜಿಹಾದ್’ ವಿವಾದ ಸಣ್ಣಗೆ ಕಾವು ಪಡೆದುಕೊಳ್ಳುತ್ತಿದೆ. ಹಿಂದೂ ಯುವತಿಯೋರ್ವಳಿಗೆ ಮುಸ್ಲಿಂ ಯುವಕನೋರ್ವ ಟಿ.ವಿ ಪ್ರೋಗ್ರಾಮ್ ನಲ್ಲೇ ಪ್ರೊಪೋಸ್ ಮಾಡಿದ್ದು, ದೊಡ್ಡದಾಗಿ ಪ್ರೀತಿ ಮಾಡೋಣ, ಮದುವೆಯಾಗೋಣ, ಮಕ್ಕಳು ಮಾಡೋಣ, ಸಂಸಾರ ನಡೆಸೋಣ ಎಂಬಿತ್ಯಾದಿ ಮಾತುಗಳ ಸಂಭಾಷಣೆ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.
ಭಾರತದಲ್ಲಿ ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳು ಪದೇ ಪದೇ ಧ್ವನಿ ಎತ್ತುತ್ತಿದ್ದು, ಕೆಲವೆಡೆಗಳಲ್ಲಿ ಸಂಘಟನೆಯ ಕಾರ್ಯಕರ್ತರ ಕಣ್ತಪ್ಪಿಸಿ ಅನ್ಯಧರ್ಮದ ಯುವಕರೊಂದಿಗೆ ಹಿಂದೂ ಯುವತಿಯರು ಸುತ್ತಾಟಕ್ಕೆ ತೆರಳಿ ಸಿಕ್ಕಿಬಿದ್ದು, ಪ್ರಕರಣ ಠಾಣೆಯ ಮೆಟ್ಟಿಲೇರಿದ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ.
ಆದರೆ ಸದ್ಯ ಕರ್ನಾಟಕದಾದ್ಯಂತ ಹೆಚ್ಚು ಸುದ್ದಿಯಲ್ಲಿರುವ ಟಿವಿ ಶೋ ಒಂದರಲ್ಲಿ ಲವ್ ಜಿಹಾದ್ ನಡೆದಿದೆ ಎನ್ನುವ ಬಗ್ಗೆ ಅಲ್ಲಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮುಸ್ಲಿಂ ಯುವತಿಯನ್ನು ಕಾರ್ಯಕ್ರಮಕ್ಕೆ ಕರೆಸಿ, ಹಿಂದೂ ಯುವಕನ ಬಾಯಲ್ಲಿ ಇದೇ ಮಾತುಗಳನ್ನು ಹೇಳಿಸಿ ಎಂದು ಕಾರ್ಯಕ್ರಮ ಪ್ರಸಾರ ಆಯೋಜಕರ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಿಡಿಕಾರುತ್ತಿದ್ದಾರೆ.
ಹೌದು. ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಸೀಸನ್ 09 ರ ನಿನ್ನೆಯ ಸಂಚಿಕೆಯಲ್ಲಿ ಈ ಘಟನೆ ನಡೆದಿದ್ದು, ನವಾಜ್ ಎನ್ನುವ ಸ್ಪರ್ಧೆಯೊಬ್ಬ ಹಿಂದೂ ಯುವತಿ ಐಶ್ವರ್ಯಾಳಿಗೆ ಲವ್ ಪ್ರೊಪೋಸ್ ಮಾಡಿದ್ದಾನೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿದ್ದು, ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಬಿಗ್ ಬಾಸ್ ನಲ್ಲಿ ಕಳೆದ ಬಾರಿಯ ಸ್ಪರ್ಧೆಗಳು ಕೂಡಾ ಸೇರಿಕೊಂಡಿದ್ದು, ಹಲವು ರೀತಿಯ ತಮಾಷೆ, ಆಟಗಳು ನಡೆಯುತ್ತಿತ್ತು. ಈ ಮಧ್ಯೆ ‘ಟ್ರುಥ್ ಅಂಡ್ ಡೇರ್’ ಎನ್ನುವ ಟಾಸ್ಕ್ ಒಂದರಲ್ಲಿ ಸೈಕ್ ನವಾಜ್ ಎನ್ನುವವರು ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆಗೆ ಐ ಲವ್ ಯೂ ಎಂದು ಪ್ರೊಪೋಸ್ ಮಾಡಿದ್ದು, ಮುಂದುವರಿದು ‘ ದೊಡ್ಡ ‘ ಮನೆಯಿಂದ ಹೋದ ಮೇಲೆ ಪುಟ್ಟ ಮನೆಯಲ್ಲಿ ಹೆಚ್ಚು ಪ್ರೀತಿಮಾಡೋಣ, ಮಕ್ಕಳನ್ನು ಪಡೆಯೋಣ ಎಂಬಿತ್ಯಾದಿ ಸಂಭಾಷಣೆ ನಡೆದಿದೆ ಎನ್ನಲಾಗಿದೆ.
ಈ ವಿಚಾರ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದ್ದು, ಪ್ರತಿಯೊಂದು ಮನೆಯಲ್ಲಿ ನೋಡುವ ಇಂತಹ ಕಾರ್ಯಕ್ರಮಗಳಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಮಧ್ಯೆ ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಿರುವುದು ಸರಿಯಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ‘ ಇದೇ ರೀತಿ ಮುಸ್ಲಿಂ ಹುಡುಗಿನ ಬಿಗ್ ಬಾಸ್ ಗೆ ಕರೆದುತನ್ನಿ, ಅವಳಿಗೆ ಮಕ್ಕಳನ್ನು ಪಡೆಯೋಣ’ ಅನ್ನಿಸಿ ನೋಡೋಣಾ ಅಂತ ಅಲ್ಲಿಲ್ಲಿ ಚರ್ಚೆಗಳು ಶುರುವಾಗಿವೆ. ‘ ಯಾಕೆ ಹಿಂದೂ ಹುಡುಗಿಯರಿಗೇ ಈ ರೀತಿ ಮಾಡಿಸುವಿರಿ ? ‘, ಮುಸ್ಲಿಂ ಯುವತಿಯರನ್ನು ಕರೆಸಿ ಮಾತನಾಡಿಸಿ, ಪ್ರೊಪೋಸ್ ಮಾಡಲು ಬಿಡಿ – ಮುಂತಾಗಿ ಹಿಂದುತ್ವದ ಪರ ಹುಡುಗರು ದನಿ ಎತ್ತುತ್ತಿದ್ದಾರೆ.