ಇತ್ತೀಚಿನ ದಿನಗಳಲ್ಲಿ ಭೂಮಿ ಕಂಪಿಸುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಇಂದು ಮುಂಜಾನೆ 3:52 ಕ್ಕೆ ಮ್ಯಾನ್ಮಾರ್‌ನಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ಅದುರಿದ ಅನುಭವ ಅಸ್ಸಾಂ, ಮಣಿಪುರ ಮತ್ತು ಮೇಘಾಲಯ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳಲ್ಲಿ ಕಂಪನವಾಗಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸಮಿತಿ ವರದಿ ಮಾಡಿದೆ.
ಶುಕ್ರವಾರ ಮುಂಜಾನೆ 3:52 ಕ್ಕೆ ಮ್ಯಾನ್ಮಾರ್‌ನಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ. ಅಸ್ಸಾಂ, ಮಣಿಪುರ ಮತ್ತು ಮೇಘಾಲಯ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳಲ್ಲಿ ಕಂಪನದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ಬರ್ಮಾದಿಂದ 162 ಕಿಮೀ ವಾಯುವ್ಯಕ್ಕೆ 140 ಕಿಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ಪ್ರದೇಶವು ಹೆಚ್ಚಿನ ಭೂಕಂಪನ ವಲಯ ಎಂದು ಗುರುತಿಸಲಾಗಿದ್ದು, ಹಾಗಾಗಿ ಇಲ್ಲಿ ಭೂಕಂಪಗಳು ಹೆಚ್ಚಾಗಿ ಆಗಾಗ ಸಂಭವಿಸುವುದು ಸಾಮಾನ್ಯವಾಗಿದೆ.
ಇದೇ ರೀತಿಯ ಭೂಕಂಪವು ನೆನ್ನೆ 4.5 ತೀವ್ರತೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಿಗ್ಲಿಪುರದಿಂದ 150 ಕಿಮೀ ಉತ್ತರದಲ್ಲಿ ದಾಖಲಾಗಿದೆ .
ಮಣಿಪುರದ ಕಾಮ್‌ಜಾಂಗ್‌ನಲ್ಲಿ 3.8 ತೀವ್ರತೆಯ ಮತ್ತೊಂದು ಭೂಕಂಪವು ಈ ಪ್ರದೇಶವನ್ನು ಕಂಡುಬಂದಿದೆ. ಇದು ಬೆಳಗ್ಗೆ 7.53ಕ್ಕೆ ವರದಿಯಾಗಿದೆ. ಆದರೆ, ಇದುವರೆಗೆ ಈ ಬಗ್ಗೆ ಯಾವುದೇ ಕಾರಣಗಳು ವರದಿಯಾಗಿಲ್ಲ .