ಮುಂದೊಂದು ದಿನ ಸರ್ಕಾರವೇ ವಿದ್ಯಾರ್ಥಿನಿಯರಿಗೆ ಕಾಂಡೊಮ್ ಪೂರೈಸಬೇಕಾ!? ಮತ ಹಾಕಬೇಡಿ- ಭಾರತವನ್ನು ಪಾಕಿಸ್ತಾನ ಮಾಡಿ!!

ಪಾಟ್ನಾ:ಸರಕಾರ ಅತೀ ಕಡಿಮೆ ದರದಲ್ಲಿ ಸಾನಿಟರಿ ಪ್ಯಾಡ್ ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಮನವಿಗೆ ಅಧಿಕಾರಿಯೊಬ್ಬರು ಅತಿರೇಕದ ಉತ್ತರ ನೀಡಿದ್ದು, ಸದ್ಯ ಭಾರೀ ಚರ್ಚೆಯ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿದೆ.

 

ಪಾಟ್ನಾದ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ನಡೆದ ‘ಸಂವಾದ’ ಕಾರ್ಯಕ್ರಮದಲ್ಲಿ ಇಂತಹ ಘಟನೆ ನಡೆದಿದ್ದು, ಸರ್ಕಾರ ಸಾನಿಟರಿ ಪ್ಯಾಡ್ ಸೌಲಭ್ಯ ನೀಡಬೇಕು ಎನ್ನುವ ಆಗ್ರಹವನ್ನು ವಿದ್ಯಾರ್ಥಿನಿ ವ್ಯಕ್ತಪಡಿಸುತ್ತಾಳೆ. ಇದಕ್ಕೆ ಉತ್ತರಿಸಿದ ಐ.ಎ.ಎಸ್ ಪದವಿಯ ಮಹಿಳಾ ಅಧಿಕಾರಿ ಹರ್ಜೋತ್ ಕೌರ್ ಸರ್ಕಾರ ಎಲ್ಲವನ್ನೂ ಕೊಡಬೇಕಾ!? ನಾಳೆ ಜೀನ್ಸ್ ಪ್ಯಾಂಟ್ ಕೇಳಿದ್ರು ಕೊಡಬೇಕಾ!? ಮುಂದೊಂದು ದಿನ ಕಾಂಡೋಮ್ ಕೂಡಾ ಕೇಳಿದ್ರೆ ಅದನ್ನೂ ಪೂರೈಸಬೇಕಾ ಎಂದು ಮರುಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಆಕ್ರೋಶಗೊಂಡ ವಿದ್ಯಾರ್ಥಿನಿ ನಾನೇನು ಮನೆಯಿಂದ ತಂದುಕೊಡಿ ಎಂದಿಲ್ಲ. ಸರ್ಕಾರ ಜನರ ಸೇವೆ ಮಾಡಲೆಂದು ಪ್ರಜೆಗಳೇ ಆಯ್ಕೆ ಮಾಡಿ ರಾಜಕಾರಣಿಗಳನ್ನು ಸರ್ಕಾರ ನಡೆಸಲು ಕಳುಹಿಸುತ್ತಿರುವ ಕಾರಣದಿಂದ ನಮಗೆ ಬೇಕಾದ ಸೌಲಭ್ಯಗಳನ್ನು ಕೇಳುತ್ತಿದ್ದೇವೆ ಎಂದಿದ್ದಾರೆ.ಇದಕ್ಕೆ ಉತ್ತರಿಸಿದ ಅಧಿಕಾರಿ ಹರ್ಜೋತ್ ಕೌರ್, ನೀವು ಮತ ಹಾಕಬೇಡಿ, ಇದು ಪಾಕಿಸ್ತಾನವಾಗಲಿ ಎಂದಿದ್ದಾರೆ.

ಈ ವಿಚಾರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ಸಂಬಳ ಪಡೆಯುತ್ತಿರುವ ಜವಾಬ್ದಾರಿಯುತ ಅಧಿಕಾರಿ ಈ ರೀತಿಯ ಮನಸ್ಥಿತಿ ಹೊಂದಿದ್ದಾರೆ ಎನ್ನುವುದು ಸಭೆಯಲ್ಲಿ ಬಹಿರಂಗವಾಗಿದೆ. ಐ.ಎ.ಎಸ್ ಅಧಿಕಾರಿಯ ಈ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

Leave A Reply

Your email address will not be published.