ಸಿಗ್ನಲ್ ಜಂಪ್ ಮಾಡಿದೆ ಎಂಬ ಪಾಪಪ್ರಜ್ಞೆಯಿಂದ ಬೆಂದುಹೋದ ವ್ಯಕ್ತಿ, ನಂತರ ಮಾಡಿದ ಈ ಕೆಲಸ| ಈತ ಮಾಡಿದ ಕೆಲಸ ನೋಡಿ ಶಾಕ್ ಆದ ಪೊಲೀಸರು!!! ನಂತರ ನಡೆದಿದ್ದು ಏನು?

ಕೆಲವೊಮ್ಮೆ ಕೆಲವರು ಅಚಾತುರ್ಯದಿಂದಲೋ‌, ಬೇಕುಂತಲೋ ಸಂಚಾರ ನಿಮಯಗಳನ್ನು ಉಲ್ಲಂಘಿಸಿಕೊಂಡು ಹೋಗುವುದು ಸಾಮಾನ್ಯ. ಹಾಗನೇ ಇದಕ್ಕೆ ಒಂದಷ್ಟು ಮಂದಿಗೆ ಫೈನ್ ಬಿದ್ದರೆ ಇನ್ನೊಂದಷ್ಟು ಮಂದಿ ಇದರಿಂದ ತಪ್ಪಿಸಿಕೊಳ್ಳುವ ದಾರಿ ನೋಡುತ್ತಾರೆ. ಹೀಗಿರುವಾಗ, ವಾಹನ ಸವಾರನೊಬ್ಬ ಸಿಗ್ನಲ್ ಜಂಪ್ (Signal Jump) ಮಾಡಿದ್ದಾನೆ. ಆದರೆ ಆತ ಮನೆಗೆ ತೆರಳಿದಾಗ ನಿಯಮ ಉಲ್ಲಂಘನೆ ಮಾಡಿದ, ಪಾಪಾ ಪ್ರಜ್ಞೆ ಕಾಡಲು ಪ್ರಾರಂಭವಾಗಿದೆ. ಆದರೂ ಆತ ಸುಮ್ಮನಿರಬಹುದಿತ್ತು. ಆತ ಇದನ್ನು ಟ್ವಿಟ್ಟರ್ ನಲ್ಲಿ ಬರೆದು ಹಾಕಿದ್ದಾನೆ.

ಈ ಬಗ್ಗೆ ಸ್ವತಃ ನಿಯಮ ಉಲ್ಲಂಘನೆ ಮಾಡಿದಾತನೇ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಪೂರ್ವಭಾವಿಯಾಗಿ ದಂಡದ ಮೊತ್ತವನ್ನು ಕಟ್ಟಲು ಸಿದ್ಧರಿರುವುದಾಗಿ ಹೇಳಿದ್ದಾನೆ. ಆದರೆ ಈ ಟ್ವೀಟ್ ಅನ್ನು ನೋಡಿದ ಬೆಂಗಳೂರು ಪೊಲೀಸರು (Bangalore Police) ಶಾಕ್ ಆಗಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಮಾಡಿದ ನಂತರವೂ ಪ್ರಾಮಾಣಿಕತೆ ಮರೆಯಲು ಮುಂದಾದ ಘಟನೆ ಶಾಂತಿನಗರದಲ್ಲಿ ನಡೆದಿದೆ. ಬಾಲ ಕೃಷ್ಣ ಬಿರ್ಲಾ ಎಂಬಾತನೇ ಪಶ್ಚತ್ತಾಪದಿಂದ ಬೆಂದು ಹೋದ ವ್ಯಕ್ತಿ. ಈತ ಶಾಂತಿನಗರದಲ್ಲಿ ಸಿಗ್ನಲ್ ಜಂಪ್ ಮಾಡಿ ಮನೆಗೆ ತೆರಳಿದ್ದಾರೆ. ಆದರೆ ನಂತರ ಆತನಿಗೆ ಸಿಗ್ನಲ್ ಜಂಪ್ ಮಾಡಿ ನಿಯಮ ಉಲ್ಲಂಘಿಸಿರುವ ಬಗ್ಗೆ ಪಾಪಾ ಪ್ರಜ್ಞೆ ಕಾಡಲು ಆರಂಭವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಾಲ ಕೃಷ್ಣ ಬಿರ್ಲಾ, ಪ್ರಾಯಶ್ಚಿತವಾಗಿ ಫೈನ್ ಕಟ್ಟಬೇಕೆಂದು ಮುಂದೆ ಬಂದಿದ್ದಾರೆ.

ಅಷ್ಟೇ ಅಲ್ಲದೆ, ಪೂರ್ವಭಾವಿಯಾಗಿ ನಾನು ದಂಡ ಪಾವತಿಬಹುದೇ ಎಂದು ಬಾಲ ಕೃಷ್ಣ ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಈ ಟ್ವೀಟ್ ನೋಡಿದ ಬೆಂಗಳೂರು ಪೊಲೀಸರು, ಇವರ ಪ್ರಾಮಾಣಿಕತೆ ನೋಡಿ ಶಾಕ್ ಆಗಿದ್ದಾರೆ. ಅಲ್ಲದೆ ಬಹಳ ನಾಜೂಕಾಗಿ ಉತ್ತರ ಕೂಡ ನೀಡಿದ್ದಾರೆ. ಪೂರ್ವಭಾವಿಯಾಗಿ ದಂಡ ಕಟ್ಟಬಹುದೇ ಎಂಬ ಬಿರ್ಲಾ ಅವರ ಪ್ರಶ್ನೆಗೆ ಉತ್ತರಿಸಿದ ಪೊಲೀಸರು, ನಾವು ನೊಟೀಸ್ ಕೊಟ್ಟ ಮೇಲೆ ದಂಡದ ಮೊತ್ತ ಪಾವತಿಸಿ ಎಂದು ಹೇಳಿದ್ದಾರೆ.

Leave A Reply

Your email address will not be published.