ಅ.1 ರಿಂದ ದೇಶದಲ್ಲಿ 5G ಸೇವೆ ಸ್ಟಾರ್ಟ್ | ಡೇಟಾ ಸ್ಟೀಡ್, ಬೆಲೆ, ಹೊಸ ಸಿಮ್ ನ ಅಗತ್ಯವಿದೆಯೇ? ಸಂಪೂರ್ಣ ಮಾಹಿತಿ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ 5G ಸೇವೆಗಳು ದೊರೆಯುವ ಬಗ್ಗೆ ಮಾಹಿತಿ ಇದ್ದು, ಜನರಲ್ಲಿ ಅನೇಕ ರೀತಿಯ ಗೊಂದಲಗಳು ಮನೆ ಮಾಡಿವೆ. 4G ಸಿಮ್ ಹೊಂದಿರುವ ಮೊಬೈಲ್ ಬಳಸುತ್ತಿದ್ದರೆ, ಇನ್ನೂ ಹೊಸ ಮೊಬೈಲ್ ಖರೀದಿಸಬೇಕೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. 5G ಸೇವೆಯ ವೈಶಿಷ್ಟ್ಯ ವೇನು? ಈಗಿರುವ 4G ಸೇವೆಗಿಂತ ಹೇಗೆ ಭಿನ್ನವಾಗಿದೆ ಎಂಬ ಕುತೂಹಲ ಸಾಮಾನ್ಯ ಜನರಲ್ಲಿ ಮೂಡಿದೆ .

ದೇಶದಲ್ಲಿ 5G ಸೇವೆಗಳನ್ನು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ದೇಶದಲ್ಲಿ ಪ್ರಾರಂಭಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 5G ಸೇವೆಗಳನ್ನು ಏಷ್ಯಾದಲ್ಲೆ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿ ಹೊರಹೊಮ್ಮಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ ಆಯೋಜಿಸಿರುವ IMC 2022 ಕಾರ್ಯಕ್ರಮದಲ್ಲಿ ಉದ್ಘಾಟಿಸಲಿದ್ದಾರೆ.ಈ 5G ಸೇವೆಯನ್ನು ಬಳಸಲು ಸಿಮ್ ಕಾರ್ಡ್ ಬದಲಿಸಬೇಕಾದ ಅಗತ್ಯವಿಲ್ಲ. ಪ್ರಸ್ತುತ ಹೊಂದಿರುವ 4G ಸಿಮ್‌ನೊಂದಿಗೆ 5G ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.

ಈಗ ಗ್ರಾಹಕರು ಬಳಸುತ್ತಿರುವ ಸ್ಮಾರ್ಟ್‌ಪೋನ್ 5G ಸಫೊರ್ಟ್ ಇದ್ದರೆ, 4G ಸಿಮ್ ಮೂಲಕವೇ 5G ಡೇಟಾ ಸ್ಪೀಡ್ ಪಡೆಯಬಹುದಾಗಿದೆ.ಟೆಲಿಕಾಂ ಕಂಪೆನಿಗಳು ಎಲ್ಲಿಯವರೆಗೆ NSA 5G ತಂತ್ರಜ್ಞಾನವನ್ನು ಬಳಸುವುದೋ ಅಲ್ಲಿಯವರೆಗೆ 5G ಸಿಮ್ ಅಗತ್ಯ ಬರುವುದಿಲ್ಲ. ಈ ಟೆಕ್ನಾಲಜಿಯು ಈಗಾಗಲೇ ಅಸ್ತಿತ್ವದಲ್ಲಿರುವ 4G ಸಿಮ್‌ಗಳನ್ನು 5G ಯೊಂದಿಗೆ ಫಾರ್ವರ್ಡ್ ಆಗುವಂತೆ ಮಾಡಲಾಗಿದ್ದು, ಹಾಗಾಗಿ, 5G ಸೇವೆ ಬಳಸಲು 4G ಸಿಮ್ ಅನ್ನು ಬದಲಿಸುವ ಅವಶ್ಯಕತೆ ಎದುರಾಗುವುದಿಲ್ಲ.

ಆದರೆ, 5G ಸಫೊರ್ಟ್ ಮಾಡುವ ಸ್ಮಾರ್ಟ್‌ಪೋನ್ ಹೊಂದಿರಲೇಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.ಈಗಾಗಲೇ ಟೆಲಿಕಾಂ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳು ದೇಶದಲ್ಲಿ ತನ್ನ 5G ಸೇವೆಗಳ ಪ್ರಯೋಗಗಳಲ್ಲಿ, 4G ನೆಟ್‌ವರ್ಕ್ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚು ವೇಗದಲ್ಲಿ 5G ವೇಗವನ್ನು ನೀಡುವ ಗುರಿಯಲ್ಲಿ ಯಶಸ್ಸನ್ನು ಕಂಡಿದೆ.

Jio 5G ನೆಟ್‌ವರ್ಕ್ 420Mbps ಡೌನ್‌ಲೋಡ್ ವೇಗ ಮತ್ತು 412Mbps ಅಪ್‌ಲೋಡ್ ವೇಗವನ್ನು ಕ್ರಮವಾಗಿ 11ms ಮತ್ತು 9ms ಲೇಟೆನ್ಸಿ ಜಿಟ್ಟರ್‌ಗಳೊಂದಿಗೆ ಒದಗಿಸುವ ಸಾಧ್ಯತೆಯಿದೆ ಎಂದು ಕೆಲ ವರಿದಿಗಳ ಪ್ರಕಾರ ನಿರ್ಣಯವಾಗಿದೆ. ಈಗಾಗಲೇ ಸೇವಾ ವಲಯದಲ್ಲಿ ಮುಂಚೂಣಿಯಲ್ಲಿರುವ ಜಿಯೋವಿನ 5G ನೆಟ್‌ವರ್ಕ್ ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚು ವೇಗವಾಗಿರುತ್ತದೆ ಎಂದು ಅಂದಾಜಿಸಲಾಗಿದ್ದು, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಸಹ 5G ತಂತ್ರಜ್ಞಾನದ ಪ್ರಯೋಗ ನಡೆಸಿ ಗೆಲುವನ್ನು ಕಂಡಿದೆ.

ದೇಶದಲ್ಲಿ 5G ದೇಶದಾದ್ಯಂತ 5G ಉಪಕರಣಗಳನ್ನು ಸ್ಥಾಪಿಸುವ ಪ್ರಕ್ರಿಯೆಗೆ ಪ್ರತಿ ಟೆಲಿಕಾಂ ಸಂಸ್ಥೆಯು 30 ರಿಂದ 40 ಸಾವಿರ ಕೋಟಿಯಷ್ಟು ದುಬಾರಿ ವೆಚ್ಚವಾಗುವುದರಿಂದ ದೇಶದಲ್ಲಿ 4G ಸೇವೆಗಿಂತ 5G ಸೇವಾ ಬಳಕೆಯ ವೆಚ್ಚ 4G ಗಿಂತ ಗ್ರಾಹಕನಿಗೆ ಕೊಂಚ ಹೆಚ್ಚು ಬೆಲೆ ತೆರೆಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ, ಇದು ಶೇ.25 ರಷ್ಟು ಮೀರಲಿಕ್ಕಿಲ್ಲ ಎಂದು ಹೇಳಬಹುದು.

ಇದೀಗ ದೇಶದಲ್ಲಿ ಒಂದು ಜಿಬಿ 4G ಡೇಟಾ ಬೆಲೆ ಹತ್ತು ರೂಪಾಯಿಗಳು ಎಂದುಕೊಂಡರೆ, ಒಂದು ಜಿಬಿ 5G ಡೇಟಾ ಬೆಲೆ 14 ರಿಂದ 15 ರೂ. ಆಸುಪಾಸಿನಲ್ಲಿ ಇರಬಹುದು. 3G ಮತ್ತು 4G ಫೋನ್‌ಗಳ ಧ್ವನಿ ಕರೆಗಳು ಮತ್ತು ಡೇಟಾವು ಪ್ರಸ್ತುತ ಇರುವಂತೆಯೇ ಕಾರ್ಯನಿರ್ವಹಿಸುತ್ತಿರುತ್ತವೆ. 5G ಸೇವೆ ಜಾರಿಯಾದರೂ 3G ಮತ್ತು 4G ಫೋನ್‌ಗಳ ಬಳಕೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಟೆಲಿಕಾಂ ಕಂಪೆನಿಗಳು ತಮ್ಮ 2G, 3G ಅಥವಾ 4G ನೆಟ್‌ವರ್ಕ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದಾಗ ಮಾತ್ರ ಈ ಸೇವೆಗಳು ನಿಲ್ಲಬಹುದು. ಆದರೆ, ಯಾವುದೇ ಟೆಲಿಕಾಂ ಕಂಪೆನಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 5G ತಂತ್ರಜ್ಞಾನವು ಡಿಜಿಟಲ್ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಸಹಾಯ ಮಾಡುತ್ತದೆ.

ಅದಲ್ಲದೆ,ಇಲ್ಲಿ ಬೇರೆ ಯಾವುದೇ ರೀತಿಯ ಬದಲಾವಣೆಗಳು ಹೆಚ್ಚಾಗಿ ಕಂಡುಬರುವುದಿಲ್ಲ.ಹೊಸ ಬದಲಾವಣೆಗೆ ಜನ ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬುದನ್ನು 5G ಸೇವೆ ಬಂದ ಮೇಲಷ್ಟೆ ತಿಳಿಯಬೇಕು.ಈ ಯೋಜನೆಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.