ನೀನು ಕಪ್ಪಗಿದ್ದೀಯ ಎಂದು ಟೀಕಿಸುತ್ತಿದ್ದ ಪತಿಯನ್ನು ಕೊಡಲಿಯಿಂದ ಕೊಂದು, ಆತನ ಮರ್ಮಾಂಗವನ್ನೇ ಕಟ್ ಮಾಡಿದ ಪತ್ನಿ |

ಯಾರಾದರೂ ಗಂಡಂದಿರು, ನಿಮ್ಮ ಪತ್ನಿ ದಪ್ಪ ಅಥವಾ ಕಪ್ಪು ಇದ್ದಾಳೆ ಎಂದು ಆಗಾಗ ಆಡಿಕೊಳ್ತೀರಾ ? ಹಾಗಾದರೆ ಈ ಘಟನೆ ಓದೋದು ಉತ್ತಮ. ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಗಂಡನೋರ್ವ ಹೆಂಡತಿಗೆ ನೀನು ಕಪ್ಪಗಿದ್ದೀಯ ಎಂದು ಟೀಕಿಸಿದ್ದಕ್ಕೆ ಕೊಲೆಯಾಗಿ ಹೋಗಿದ್ದಾನೆ. ಅದು ಕೂಡಾ ಹೆಂಡತಿಯೇ ಕೊಲೆ ಮಾಡಿದ್ದಾಳೆ.

ಹೌದು, ಕಪ್ಪಗಿದ್ದೇನೆ ಎಂದು ಆಗಾಗ್ಗೆ ಟೀಕಿಸುತ್ತಿದ್ದ ಪತಿಯನ್ನು 30 ವರ್ಷದ ಪತ್ನಿ ಕೊಡಲಿಯಿಂದ ಕೊಲೆ ಮಾಡಿದ್ದಾಳೆಂಬ ಆರೋಪ ಕೇಳಿಬಂದಿದೆ. ಈ ಟೀಕೆಯ ವಿಚಾರವಾಗಿಯೇ ಈ ಹಿಂದೆಯೂ ಹಲವು ಬಾರಿ ಪತಿ ಹಾಗೂ ಪತ್ನಿ ಜಗಳವಾಡುತ್ತಿದ್ದರು ಎಂದೂ ತಿಳಿದುಬಂದಿದೆ. ಇದೇ ವಿಚಾರವಾಗಿ ಶನಿವಾರ ರಾತ್ರಿ ಮತ್ತೆ ದಂಪತಿ ಜಗಳವಾಡಿದ್ದು, ಈ ಹಿನ್ನೆಲೆ ಆಕ್ರೋಶಗೊಂಡ ಪತ್ನಿ ಸಂಗೀತಾ ತನ್ನ ಗಂಡನ ಮೇಲೆ ಮನೆಯಲ್ಲಿದ್ದ ಕೊಡಲಿಯಿಂದ ದಾಳಿ ಮಾಡಿದ್ದಾಳೆ. ಅಷ್ಟು ಮಾತ್ರವಲ್ಲದೇ ಪತಿಯ ಮರ್ಮಾಂಗವನ್ನೂ ಕತ್ತರಿಸಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.

ಪತಿ ಅನಂತ್ ಸೋಸ್ವಾನಿ (40) ಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಸೋಮವಾರ ಸಂಗೀತಾ ಸೋನ್ವಾನಿಯನ್ನು ಬಂಧಿಸಿದ್ದಾರೆ. ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಅಮೇಶ್ವರ ಗ್ರಾಮದಲ್ಲಿ ಭಾನುವಾರ ರಾತ್ರಿ ಆಕೆಯನ್ನು ಬಂಧಿಸಲಾಗಿದೆ ಎಂದು ಪಟಾಣ್ ಪ್ರದೇಶದ ಪೊಲೀಸ್ ಉಪವಿಭಾಗಾಧಿಕಾರಿ ದೇವಾನ್ ರಾಥೋ‌ ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ ಕೊಲೆ ನಡೆದಿದ್ದು ಮರುದಿನ ಬೆಳಗ್ಗೆ ಆರೋಪಿ ಸಂಗೀತಾ ತನ್ನ ಪತಿಯನ್ನು ಬೇರೆ ಯಾರೋ ಕೊಲೆ ಮಾಡಿದ್ದಾರೆಂದು ಹೇಳಿ ಗ್ರಾಮಸ್ಥರ ದಿಕ್ಕು ತಪ್ಪಿಸಲು ಪ್ರಯತ್ನ ಪಟ್ಟಿದ್ದಾಳೆ. ನಂತರ ಆಕೆಯನ್ನು ಪೊಲೀಸರು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ವಿರುದ್ಧ ಐಪಿಸಿ ಕಾಯ್ದೆ 302 (ಕೊಲೆ) ಹಾಗೂ ಇತರೆ ಸಂಬಂಧಿತ ಸೆಕ್ಷನ್‌ಗಳನ್ನು ಹಾಕಲಾಗಿದೆ. ಮೃತ ಗಂಡನಿಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ನಿಧನರಾದ ಬಳಿಕ ಸಂಗೀತಾಳನ್ನು ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.