ಸಿನಿಮಾ ಪ್ರಚಾರಕ್ಕೆಂದು ಬಂದ ಮಲಿಯಾಳಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ | ಕೃತ್ಯದ ವೀಡಿಯೋ ವೈರಲ್

ಕೇರಳದ ಸಿನಿಮಾ ನಟಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಯೊಂದು ನಡೆದಿದೆ. ಚಿತ್ರವೊಂದರ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕೇರಳದಲ್ಲಿ ಚಿತ್ರವೊಂದರ ಪ್ರಚಾರಕ್ಕೆಂದು ಮಾಲ್‌ಗೆ ಬಂದಿದ್ದ ವೇಳೆ, ಅಲ್ಲಿ ನೆರೆದಿದ್ದ ಜನಸಂದಣಿಯಲ್ಲೇ ಇಬ್ಬರು ಮಲಯಾಳಿ ಯುವ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಾಗಿದೆ.

ಈ ಕುರಿತು ಗ್ರೇಸ್ ಅಂಟೋನಿ ಹಾಗೂ ಸಾನ್ಯಾ ಇಯ್ಯಪ್ಪನ್ ಎಂಬ ಇಬ್ಬರು ನಟಿಯರು ಈ ಆರೋಪ ಮಾಡಿದ್ದಾರೆ. ಈ ಘಟನೆ ಕೋಯಿಕ್ಕೋಡ್‌ನ ಹೈಲೈಟ್ ಮಾಲ್‌ನಲ್ಲಿ ಸಾಟರ್‌ಡೇ ನೈಟ್ ಸಿನಿಮಾ ಪ್ರಚಾರ ವೇಳೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲಿಗೆ ಬಂದದ್ದ ಕೆಲ ವ್ಯಕ್ತಿಗಳು ನಟಿಯ ಕೈಹಿಡಿದು ಅಸಭ್ಯವಾಗಿ ವರ್ತಿಸಿದ ನಡೆ ಈ ವೀಡಿಯೊದಲ್ಲಿ ಕಂಡು ಬಂದಿದೆ.

ಆ ಸಂದರ್ಭದಲ್ಲಿ ತಮಗೆ ಆದ ಅನುಭವವನ್ನು ನಟಿಯರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಘಟನೆಯನ್ನು ಖಂಡಿಸಿದ್ದಾರೆ. ಕೆಲ ಅಸಹ್ಯಕರ ವ್ಯಕ್ತಿಗಳು ಜನಸಂದಣಿಯಲ್ಲಿ ತಮ್ಮ ಕೈಯನ್ನು ಹಿಡಿದು ಎಳೆದರು, ಮೈಯನ್ನು ಸವರಲು ನೋಡಿದರು. ಇಂಥವರ ಮೇಲೆ ಸೂಕ್ತ ಕ್ರಮಗಳು ಆಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲಿಗೆ ಬಂದ ವ್ಯಕ್ತಿಗಳು ನಮ್ಮನ್ನು ಮುಟ್ಟಿದ್ದು ಸೌಮ್ಯವಾಗಿರಲಿಲ್ಲ. ನಮಗೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿಯರು ತಮ್ಮ ನೋವು ತೋಡಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಈ ಬಗ್ಗೆ ದೂರು ದಾಖಲಾಗಿಲ್ಲ.

Leave A Reply

Your email address will not be published.