Gas Stove Lighter | ಗ್ಯಾಸ್ ಸ್ಟೌವ್ ಲೈಟರ್ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಟ್ರಿಕ್ಸ್ !!!
ದಿನನಿತ್ಯ ಬಳಕೆಯಾಗುವ ಗ್ಯಾಸ್ ಲೈಟರ್ ತುಕ್ಕು ಹಿಡಿದರೆ ಏನು ಮಾಡಬೇಕೆಂಬ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಸರಳ ಕ್ರಮ ಅನುಸರಿಸಿ ತುಕ್ಕು ಹಿಡಿದ ಕಲೆ ತೆಗೆಯಬಹುದು.
ಕಬ್ಬಿಣ ಮಾತ್ರವಲ್ಲ ಬೆಳ್ಳಿಯ ಮೇಲಿನ ಕಪ್ಪು ಲೇಪನ, ತಾಮ್ರದ ಮೇಲಿನ ಹಸಿರು ಲೇಪನವನ್ನು ಕೂಡ ತುಕ್ಕು ಎಂದು ಕರೆಯಲಾಗುತ್ತದೆ.
ಎಲ್ಲರ ಮನೆಯಲ್ಲೂ ಗ್ಯಾಸ್ ಸ್ಟೌವ್ ಲೈಟರ್ ಅನ್ನು ಬಳಸುತ್ತಾರೆ.ಅದನ್ನು ಹೆಚ್ಚಾಗಿ ಬಳಸುವುದರಿಂದ ಅದರ ಮೇಲೆ ತುಕ್ಕು ಹಿಡಿದೂ ಗಲೀಜಾಗಿರುತ್ತದೆ. ಈ ಗ್ಯಾಸ್ ಸ್ಟೌವ್ ಲೈಟರ್ ಅನ್ನು ಸ್ವಚ್ಛಗೊಳಿಸಲು ಈ ಟಿಪ್ಸ್ ಅನುಸರಿಸಿ
ಅಡುಗೆ ಸೋಡಾ ಬಳಸಿ ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು. ಹಾಗಾಗಿ, ಗ್ಯಾಸ್ ಸ್ಟೌವ್ ಲೈಟರ್ ಅನ್ನು ಕೂಡ ಅಡುಗೆ ಸೋಡಾದಿಂದ ಸ್ವಚ್ಛಗೊಳಿಸಬಹುದು.
1 ಚಮಚ ಅಡುಗೆ ಸೋಡಾಕ್ಕೆ ½ ನಿಂಬೆ ರಸ ಮಿಕ್ಸ್ ಮಾಡಿ ಅದನ್ನು ಲೈಟರ್ ಮೇಲೆ ಹಚ್ಚಿ 30 ನಿಮಿಷ ಬಿಟ್ಟು ನಿಂಬೆ ಸಿಪ್ಪೆಯಿಂದ ಉಜ್ಜಿ ಕೊನೆಯಲ್ಲಿ ಬಟ್ಟೆಯಿಂದ ಒರೆಸಿದರೆ ಗ್ಯಾಸ್ ಲೈಟರ್ ನ ತುಕ್ಕು ಹಿಡಿದದ್ದು ಮಾಯವಾಗುತ್ತದೆ.
ಗ್ಯಾಸ್ ಸ್ಟೌವ್ ಲೈಟರ್ ಸ್ವಚ್ಛಗೊಳಿಸಲು ಟೂತ್ ಪೇಸ್ಟ್ ಅನ್ನು ಸಹ ಬಳಸಬಹುದು. ಹಾಗಾಗಿ ರಾತ್ರಿಯಿಡಿ ಲೈಟರ್ ಮೇಲೆ ಟೂತ್ ಪೇಸ್ಟ್ ಹಚ್ಚಿ ಮರುದಿನ ಬೆಳಿಗ್ಗೆ ಬ್ರಷ್ ನಿಂದ ಉಜ್ಜಿ ಬಟ್ಟೆಯಿಂದ ಒರೆಸಿದರೆ ಗ್ಯಾಸ್ ಲೈಟರ್ ಕಲೆ ಹೋಗುತ್ತದೆ. ಈ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು.ಗ್ಯಾಸ್ ಲೈಟರ್ ಕಲೆ ಮಾಯವಾಗುತ್ತದೆ.