ಸವಣೂರು : ವಿ.ಎ.ಕಛೇರಿ ನುಗ್ಗಿ ದಾಂಧಲೆ,ಕೊಲೆ ಯತ್ನ
ಬೇಕರಿಗೆ ನುಗ್ಗಿ ದಾಂಧಲೆ

ಸವಣೂರು : ಸವಣೂರಿನಲ್ಲಿ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ ,ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಸವಣೂರು ಜಂಕ್ಷನ್ ನಲ್ಲಿ ಬುಧವಾರ ನಡೆದಿದೆ.

ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಕೊಲೆಗೆ ಯತ್ನಿಸಿದವರು ಎನ್ನಲಾಗಿದೆ.

ಅಲ್ಲದೆ ಸವಣೂರು ಗ್ರಾ.ಪಂ.ಕಟ್ಟಡದಲ್ಲಿರುವ ಗುಣಪಾಲ ಗೌಡ ಇಡ್ಯಾಡಿ ಅವರಿಗೆ ಸೇರಿದ ಬೇಕರಿಯನ್ನು ತಲವಾರಿನಿಂದ ಪುಡಿಗೈದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಸ್ಥಳಕ್ಕೆ ಬೆಳ್ಳಾರೆ ಠಾಣೆಯ ಎಸೈ ಸುಹಾಸ್ ಹಾಗೂ ಸಿಬಂದಿಗಳು ಭೇಟಿ ನೀಡಿದ್ದಾರೆ.

Leave A Reply