ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ 2022!! ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಕಡಬದ ಸಾನ್ವಿಕಾ ಕೆ.ಎಸ್!!
ಕಡಬ:ಶಿವಮೊಗ್ಗ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ 2022 ರ 50ಕೆಜಿ ವಿಭಾಗದಲ್ಲಿ ಕಡಬದ ಸಾನ್ವಿಕಾ ಕೆ.ಎಸ್ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಸಾನ್ವಿಕ ಈ ಮೊದಲು ಹಲವು ಕರಾಟೆ ಪಂದ್ಯಗಳಲ್ಲಿ ಭಾಗವಿಹಿಸಿದ್ದು, ಹಲವಾರು ಪ್ರಶಸ್ತಿಗಳನ್ನೂ ಮುಡಿಗೆರಿಸಿಕೊಂಡಿದ್ದರು.ಈಕೆ ಕಡಬದ ಪಿಜಕ್ಕಳ ಕಂಗುಳೆ ನಿವಾಸಿ ಸದಾನಂದ ಗೌಡ-ವಾಣಿ ದಂಪತಿಯ ಪುತ್ರಿಯಾಗಿದ್ದಾರೆ.