ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಸಿಲಿಂಡರ್ ಸ್ಫೋಟ | ತಪ್ಪಿತು ಭಾರೀ ದೊಡ್ಡ ಅನಾಹುತ

ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿ ಶಾಲೆಯಲ್ಲಿಯೇ ಸಿಲಿಂಡರ್ ಸ್ಫೋಟಗೊಂಡಿದ್ದು, ಪ್ರಾಣ ಹಾನಿ ಯಾವುದೇ ಸಂಭವಿಸಿಲ್ಲ. ಆದರೆ ಆಹಾರ ಧಾನ್ಯಗಳು ಸುಟ್ಟು ಭಸ್ಮವಾಗಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಬೆಳಗಾವಿ ಜಿಲ್ಲೆಯ ಗೋಕಾಕ್​ನ ವಿವೇಕಾನಂದ ನಗರದಲ್ಲಿ ತಾಲೂಕಿನ ಗೋಡಚಿನಮಲ್ಕಿ ಗ್ರಾಮದಿಂದ ಸ್ಥಳಾಂತರಗೊಂಡಿರುವ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಈ ಘಟನೆಯು ನಡೆದಿದೆ.


Ad Widget

ಸಿಲಿಂಡರ್‌ನ ರೆಗ್ಯುಲೇಟರ್ ಸಡಿಲಿಕೆ ಮತ್ತು ಪೈಪ್ ಲೀಕೇಜ್​ ಆಗಿರುವುದೇ ಸ್ಫೋಟಕ್ಕೆ ಕಾರಣ.

ಅಕ್ಕಿ, ಬೇಳೆ, ಹಾಲಿನ ಪೌಡರ್, ಮಕ್ಕಳಿಗೆ ನೀಡಲು ಮಾಡಲಾದ ದೋಸೆ ಹಿಟ್ಟು ಸೇರಿದಂತೆ ಪಾತ್ರೆಗಳು ಒಡೆದು ಹೋಗಿದೆ.
ಬಿಸಿಯೂಟ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲಿಂಡರ್​ ಸ್ಫೋಟವಾಗಿ ಕೋಣೆಯ ಬಾಗಿಲು ಸುಟ್ಟು ಹೋಗಿದೆ. ಕೊಠಡಿಯೊಳಗಡೆ ಇರುವ ಬಿಸಿಯೂಟದ ಆಹಾರ ಪದಾರ್ಥಗಳು, ಪರಿಕರಗಳು ಸುಟ್ಟು ಕರಕಗಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ. ಈ ದುರ್ಘಟನೆಯು ಗೋಕಾಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿರುವ ವೇಳೆ ಸಿಲಿಂಡರ್​ನಿಂದ ಭಾರಿ ಶಬ್ದ ಬಂದಿದೆ. ತಕ್ಷಣವೇ ಅಡುಗೆಯ ಸಿಬ್ಬಂದಿ ಕೋಣೆಯಿಂದ ಹೊರಗೆ ಓಡಿ ಬಂದು ಜೀವ ಅಪಾಯದಿಂದ ಪಾರಾಗಿದ್ದಾರೆ, ಬಳಿಕ ಕೋಣೆಯ ತುಂಬೆಲ್ಲ ಬೆಂಕಿ ಆವರಿಸಿ ಕಿಟಕಿ -ಬಾಗಿಲುಗಳು ಸುಟ್ಟು ಹೋಗಿವೆ, ಬಳಿಕ ಶಿಕ್ಷಕರ ಮಾಹಿತಿ ಮೇರೆಗೆ ಸ್ಥಳ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.

error: Content is protected !!
Scroll to Top
%d bloggers like this: