ಭಾರತದ ಭವಿಷ್ಯ ನುಡಿದ ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ : ಭಾರತೀಯರಿಗೆ ನಡುಕ ಶುರು !

ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ ಅವರು ಭಾರತದ ಕುರಿತು ಹೇಳಿರುವ ಭವಿಷ್ಯ ಇದೀಗ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಕೂಡಾ ಹಲವಾರು ಭವಿಷ್ಯ ನುಡಿದಿದ್ದಳು ಬಲ್ಗೇರಿಯಾದ ಈ ಕುರುಡು ಮಹಿಳೆ. ವಂಗಾ ಬಾಬಾ ಎಂದು ಕರೆಸಿಕೊಳ್ಳೋ ಈಕೆ ಹೇಳಿದ ಭವಿಷ್ಯ ಸುಳ್ಳಾಗಿಲ್ಲ ಎನ್ನುವುದಕ್ಕೆ ಹಲವು ಸಾಕ್ಷಿಗಳು ಸಿಗುತ್ತಿವೆ.

ಕರೊನಾ, ಸುನಾಮಿ, ಪ್ರಳಯ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲದಂಥ ಮಹಾನ್ ಭವಿಷ್ಯವನ್ನು ನೂರಾರು ವರ್ಷಗಳ ಹಿಂದೆಯೇ ಬರೆದಿಟ್ಟಿದ್ದ ಜಗತ್ಪಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ ಅವರು ಇಲ್ಲಿಯವರೆಗೆ ಪ್ರಪಂಚದ ಕುರಿತು ನುಡಿದಿರುವ ಬಹುತೇಕ ಭವಿಷ್ಯಗಳು ನಿಜವಾಗಿವೆ. ಅದರಲ್ಲಿಯೂ ರಾಜಕಾರಣ ಮತ್ತು ಅನಾಹುತಗಳ ಕುರಿತಾಗಿ ಇವರು ಬರೆದಿಟ್ಟಿರುವ ಭವಿಷ್ಯದ ನುಡಿಗಳಂತೆ ಜಗತ್ತಿನಲ್ಲಿ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.

ಈ ವರ್ಷ ಪ್ರಪಂಚದಲ್ಲಿ ಹವಾಮಾನ ಬದಲಾವಣೆಯಿಂದ ತಾಪಮಾನ ಭಾರೀ ಏರಿಕೆಯಾಗಲಿದೆ. ಇದರಿಂದಾಗಿ ಮಿಡತೆಗಳ ಕಾಟ ಏಕಾಏಕಿ ಹೆಚ್ಚಾಗುತ್ತದೆ. ಹಸಿರು ಮತ್ತು ಆಹಾರಕ್ಕಾಗಿ ಮಿಡತೆಗಳ ಹಿಂಡು ಭಾರತದ ಮೇಲೆ ದಾಳಿ ಮಾಡುತ್ತವೆ. ಇವುಗಳ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅಲ್ಲದೆ ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಸದ್ಯ ಬಾಬಾ ವಂಗಾ ಅವರ ಈ ಭವಿಷ್ಯದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಇವರ ಭವಿಷ್ಯವಾಣಿಗಳು ಎಷ್ಟು ನಿಜ ಎಂಬುವುದು ಕಾಲವೇ ಉತ್ತರಿಸಬೇಕಿದೆ. ಆದರೆ ಅವರು ಈ ಹಿಂದೆ ಹೇಳಿರುವುದರಲ್ಲಿ ಹಲವು ವಿಚಾರಗಳು ನಿಜವಾಗುವುದರಿಂದ ಈ ಭವಿಷ್ಯ ಭಾರತೀಯರಲ್ಲಿ ಸ್ವಲ್ಪ ಮಟ್ಟಿಗೆ ಭಯ ಹುಟ್ಟಿಸಿದೆ.


ಬಾಬಾ ವಂಗಾ ಅವರು ತಮ್ಮ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಇದಾದ ಬಳಿಕ ಅವರಿಗೆ ದೇವರು ಭವಿಷ್ಯ ಗ್ರಹಿಸುವ ಶಕ್ತಿ ನೀಡಿದ್ದಾರೆಂದು ಹೇಳಲಾಗುತ್ತಿದೆ. ಅವರು ಪ್ರಪಂಚದ ಬಗ್ಗೆ ಅನೇಕ ಭವಿಷ್ಯಗಳನ್ನು ನುಡಿದಿದ್ದು, ಅವುಗಳಲ್ಲಿ ಹಲವು ನಿಜವೆಂದು ಸಾಬೀತಾಗಿವೆ. ಆಕೆ ನುಡಿದ ಭವಿಷ್ಯ ಸುಳ್ಳಾಗಲ್ಲ ಎನ್ನುವುದೇ ಒಂದು ಪ್ರತೀತಿ.

ಹಸಿರು ಮತ್ತು ಆಹಾರಕ್ಕಾಗಿ, ಮಿಡತೆ ಹಿಂಡುಗಳು ಭಾರತದ ಮೇಲೆ ದಾಳಿ ಮಾಡುತ್ತದೆ, ಬೆಳೆಗಳಿಗೆ ಗಂಭೀರ ಹಾನಿ ಉಂಟುಮಾಡುತ್ತದೆ ಮತ್ತು ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ. 2022 ಮುಗಿಯಲು ಇನ್ನು ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಭವಿಷ್ಯ ಎಷ್ಟು ನಿಜವಾಗುತ್ತದೆ ಎಂದು ಕಾದು ನೋಡಬೇಕಿದೆ.

2022 ರ ಆರಂಭಿಕ ತಿಂಗಳುಗಳ ಬಗ್ಗೆ 2 ಭವಿಷ್ಯ ನುಡಿದಿದ್ದರು. ಅವುಗಳು ಸಾಬೀತು ಕೂಡ ಆಗಿವೆ. ಇದೀಗ 2022ಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಭವಿಷ್ಯವಾಣಿಗಳಲ್ಲಿ ಭಾರತದ ಬಗ್ಗೆ ಹೇಳಿರುವುದು ಕುತೂಹಲದ ಜೊತೆ ಆತಂಕ ಹೆಚ್ಚು ಮಾಡಿದೆ.
ಸಾಬೀತಾದ ಇತ್ತೀಚಿನ ಭವಿಷ್ಯಗಳು:
ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹದ ಮುನ್ಸೂಚನೆಯಾಗಿದೆ.

ಎರಡನೆಯ ಭವಿಷ್ಯವು ಅನೇಕ ನಗರಗಳಲ್ಲಿ ಬರ ಮತ್ತು ನೀರಿನ ಬಿಕ್ಕಟ್ಟಿನ ಬಗ್ಗೆ ಇತ್ತು. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಅಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಹೀಗಾಗಿ ಅವರು ನುಡಿದ ಭವಿಷ್ಯ ನಿಜವಾಗಿದೆ.

ದೊಡ್ಡ ನಗರಗಳು ಬರ ಮತ್ತು ನೀರಿನಿಂದ ತತ್ತರಿಸುತ್ತವೆ ಎಂದು ಅವರು ಇನ್ನೊಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ಕೂಡ ಈಗ ಯುರೋಪಿನಲ್ಲಿ ನಿಜವೆಂದು ಸಾಬೀತಾಗಿದೆ. ಬೃಹತ್ ಹಿಮನದಿಗಳು ಮತ್ತು ನೀರಿನಿಂದ ಆವೃತವಾಗಿರುವ ಬ್ರಿಟನ್, ಇಟಲಿ ಮತ್ತು ಪೋರ್ಚುಗಲ್ ಈ ದಿನಗಳಲ್ಲಿ ತೀವ್ರ ಬರಗಾಲದ ಹಿಡಿತದಲ್ಲಿವೆ.

ಸದ್ಯ ಈಗ ಭಾರತೀಯರಿಗೆ ಈ ಭವಿಷ್ಯ ಕೇಳಿ ಎದೆ ನಡುಕ ಹುಟ್ಟಿಸಿದೆ. ಈ ವರ್ಷ ಪ್ರಪಂಚದಲ್ಲಿ ತಾಪಮಾನ ಭಾರೀ ಏರಿಕೆಯಾಗಲಿದೆ. ಇದರಿಂದಾಗಿ ಮಿಡತೆಗಳ ಕಾಟ ಏಕಾಏಕಿ ಹೆಚ್ಚಾಗುತ್ತದೆ. ಹಸಿರು ಮತ್ತು ಆಹಾರಕ್ಕಾಗಿ ಮಿಡತೆಗಳ ಹಿಂಡು ಭಾರತದ ಮೇಲೆ ದಾಳಿ ಮಾಡುತ್ತವೆ. ಇವುಗಳ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅಲ್ಲದೆ ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Leave A Reply